ಚಾಮರಾಜನಗರ,ಜುಲೈ,29,2025 (www.justkannada.in): ಶೀಲ ಶಂಕಿಸಿ ಪತ್ನಿಯನ್ನ ಹತ್ಯೆ ಮಾಡಿದ್ದ ಆರೋಪಿ ಪತಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮುಡಿಗುಂಡ ಗ್ರಾಮದ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ. ಸುಮಾರು 10ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಬೈರಸ್ವಾಮಿ ಎಂಬವವರ ಅಕ್ಕ ಚಿನ್ನಮ್ಮಳನ್ನು ಆರೋಪಿ ಕುಮಾರ್ ಮದುವೆಯಾಗಿದ್ದು ಒಬ್ಬ ಮಗನಿದ್ದನು. ಈ ಮಧ್ಯೆ ಅರೋಪಿ ಕುಮಾರ್ ತನ್ನ ಹೆಂಡತಿ ಚಿನ್ನಮ್ಮಳ ಶೀಲದ ಮೇಲೆ ವಿನಾಕಾರಣ ಅನುಮಾನಪಟ್ಟು ಹೊಡೆಯುವುದು ದೈಹಿಕ ಮಾನಸಿಕ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ, ಇದರಿಂದ ಬೇಸರಗೊಂಡ ಚಿನ್ನಮ್ಮ ಮುಳ್ಳೂರಿಗೆ ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದರು.
ಈ ಮಧ್ಯೆ ಆರೋಪಿ 31/3/2022ರಂದು ಮುಳ್ಳೂರಿಗೆ ಹೋಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ತಿಳಿಸಿ ತನ್ನ ಹೆಂಡತಿ ಚಿನ್ನಮ್ಮ ಮತ್ತು ಪುತ್ರ ದರ್ಶನ್ ನನ್ನ ಮನೆಗೆ ವಾಪಸ್ ಕರೆತಂದಿದ್ದನು. ಆದರೆ ತನ್ನ ಹಳೆಯ ಚಾಳಿ ಬಿಡದ ಆರೋಪಿ ಕುಮಾರ್ ಮತ್ತೆ1/4/2022ರಂದು ಶೀಲ ಶಂಕಿಸಿ ಪತ್ನಿ ಚಿನ್ನಮ್ಮಳ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದನು.
ಮಾನ್ಯ ನ್ಯಾಯಾಲಯಕ್ಕೆ ಐಪಿಸಿ ಕಾಯ್ದೆ 498(ಎ)302, 342 ಮೊ.ನಂ.32/2022 ರಂತೆ ಪ್ರಕರಣ ದಾಖಲಿಸಿಕೊಂಡು ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ತನಿಖಾಧಿಕಾರಿ ಕೊಳ್ಳೇಗಾಲ ಪಟ್ಟಣ ಪೋಲಿಸ್ ಠಾಣೆ ಪಿಐ ಶಿವರಾಜ್ ಅರ್ ಮುಧೋಳ್ ಸಲ್ಲಿಸಿದ್ದರು.
ಅದು ಎಸ್.ಸಿ ನಂ.5068/2022 ರಂತೆ ದಾಖಲಾಗಿದ್ದು, ಅದರಂತೆ ವಿಚಾರಣೆ ನಡೆಸಿ, ನ್ಯಾಯಾಲಯವು ಈ ಪ್ರಕರಣದಲ್ಲಿ ಕುಮಾರ್ ಬಿ ಎಂಬುವವರಿಗೆ ಐಪಿಸಿ ಕಾಯ್ದೆ ಕಲಂ 498(ಎ) ರಡಿ 1 ವರ್ಷ ಸೆರೆವಾಸ 1 ಸಾವಿರ ರೂ ದಂಡ ವಿಧಿಸಿದ್ದು, ಐಪಿಸಿ ಕಲಂ: 302ರಡಿ ಜೀವಾವಧಿ ಸೆರೆವಾಸ & ಮತ್ತು ರೂ.5,000/-ದಂಡ ವಿಧಿಸಿ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಆದೇಶಿಸಿದ್ದಾರೆ. ಮಗ ದರ್ಶನ್ ಮೈನರ್ ಆಗಿದ್ದು, ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರಕ್ಕೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಮತ್ತು. ಸಿ.ಬಿ ಗಿರೀಶ್ ಅವರು ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.
Key words: Husband, sentenced ,life imprisonment ,murder, wife, kollegal
The post ಶೀಲ ಶಂಕಿಸಿ ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.