ಬೆಂಗಳೂರು,ಜುಲೈ,29,2025 (www.justkannada.in): ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ. ಹೀಗಾಗಿ ಬಿಜೆಪಿ ಟೀಕೆ ಮಾಡುವುದನ್ನ ಬಿಟ್ಟು ಕೇಂದ್ರದ ಬಳಿ ಮಾತನಾಡಿ ರಸಗೊಬ್ಬರ ಪೂರೈಕೆ ಮಾಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಇರುವ ಸಿಎಂ ಸಿದ್ದರಾಮಯ್ಯ, ರಾಜ್ಯದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಿಲ್ಲ. ಈ ಬಗ್ಗೆ ಪತ್ರ ಬರೆದು ಮನವಿಯನ್ನು ಸಹ ಮಾಡಲಾಗಿದೆ. ಕೇಂದ್ರದಿಂದ 6.82 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬರಬೇಕಿತ್ತು, ಆದರೆ ನಮಗೆ ಪೂರೈಕೆಯಾಗಿರುವುದು 5.27 ಲಕ್ಷ ಮೆಟ್ರಿಕ್ ಟನ್ ಎಂದು ಮಾಹಿತಿ ನೀಡಿದ್ದಾರೆ.
ರಸಗೊಬ್ಬರ ಉತ್ಪಾದನೆ ಮಾಡುವವರು ನಾವಲ್ಲ, ರಸಗೊಬ್ಬರ ಸರಬರಾಜು ಮಾಡುವವರು ನಾವಲ್ಲ. ಬಿಜೆಪಿ ಪಕ್ಷವೇ ಆಡಳಿತದಲ್ಲಿರುವ ಹರಿಯಾಣ, ಮಧ್ಯ ಪ್ರದೇಶ ರಾಜ್ಯಗಳಲ್ಲಿಯೂ ರಸಗೊಬ್ಬರ ಕೊರತೆ ಇದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರಸಗೊಬ್ಬರ ಕೇಳಿದ ರೈತರನ್ನು ಗುಂಡಿಕ್ಕಿ ಕೊಂದಿದ್ದರು. ನಾವು ಅವರಂತಲ್ಲ. ಬಿಜೆಪಿ ನಾಯಕರು ರಾಜಕೀಯ ಟೀಕೆ ಮಾಡಿ ಕಾಲಹರಣ ಮಾಡುವ ಬದಲು ಕೇಂದ್ರ ಸರ್ಕಾರದ ಬಳಿ ಮಾತನಾಡಿ, ತಕ್ಷಣ ರಸಗೊಬ್ಬರ ಪೂರೈಕೆ ಮಾಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Key words: BJP, talk, Central Government, fertilizer, CM Siddaramaiah
The post ಬಿಜೆಪಿಯವರು ಟೀಕೆ ಬಿಟ್ಟು ರಸಗೊಬ್ಬರ ಪೂರೈಕೆಗೆ ಕೇಂದ್ರದ ಬಳಿ ಮಾತನಾಡಲಿ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.