ಬೆಂಗಳೂರು,ಜುಲೈ 30, 2025 (www.justkannada.in): ವಿದ್ಯುತ್ ಬಿಲ್ ಪಾವತಿಗೆ ಬೆಸ್ಕಾಂ ಕಚೇರಿಗಳಲ್ಲಿರುವ ಎಟಿಪಿ (ಎನಿ ಟೈಮ್ ಪೇಮೆಂಟ್) ಪಾವತಿ ಯಂತ್ರದ ಸೇವೆಯನ್ನು ಆಗಸ್ಟ್ 1 ರಿಂದ ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬೆಸ್ಕಾಂ, ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್, ಆನ್ ಲೈನ್ ಪಾವತಿ ವಿಧಾನಗಳಾದ ಬೆಸ್ಕಾಂ ವೆಬ್ ಸೈಟ್, ಬೆಸ್ಕಾಂ ಮಿತ್ರ ಆ್ಯಪ್ ಮೂಲಕ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬಹುದು ಎಂದು ತಿಳಿಸಿದೆ.
ವಿದ್ಯುತ್ ಬಿಲ್ ನೀಡುವ ಸ್ಪಾಟ್ ಬಿಲ್ಲಿಂಗ್ ಡಿವೈಸ್, ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (ಬಿಬಿಪಿಎಸ್), ನೆಫ್ಟ್, ಇಸಿಎಸ್ ಹಾಗೂ ಇತರೆ ಮೂಲಕ ಕೂಡ ಬಿಲ್ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೇ, ಯುಪಿಐ ಪಾವತಿ (ಗೂಗಲ್ ಪೇ, ಫೋನ್ ಪೇ, ಪೇಟಿಎಂ,ಭೀಮ್ ಮುಂತಾದ ಆ್ಯಪ್) ಮೂಲಕವೂ ವಿದ್ಯುತ್ ಬಿಲ್‌ಗಳನ್ನು ಪಾವತಿಸಬಹುದಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Key words: ATP, service , BESCOM, bill payment, withdrawn, August 1
The post ಆ.1 ರಿಂದ ಬೆಸ್ಕಾಂ ಬಿಲ್ ಪಾವತಿಯ ಎಟಿಪಿ ಸೇವೆ ಸ್ಥಗಿತ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.