31
August, 2025

A News 365Times Venture

31
Sunday
August, 2025

A News 365Times Venture

ಸಾರ್ವಜನಿಕರು ಪೊಲೀಸರ ನಡುವೆ ಅಂತರ ಕಡಿಮೆ ಮಾಡುವ ಕೆಲಸವಾಗಬೇಕಿದೆ – ಜಾವಗಲ್ ಶ್ರೀನಾಥ್

Date:

ಮೈಸೂರು,ಜುಲೈ,30,2025 (www.justkannada.in): 2010ರಲ್ಲಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಕಾರ್ಯದರ್ಶಿಯಾದಾಗ ಪೊಲೀಸರೊಂದಿಗೆ ಸಂಪರ್ಕ ಬೆಳೆಯಿತು. ಆವಾಗ ಪೊಲೀಸ್ ಕೆಲಸ ಎಷ್ಟು ಕಷ್ಟ ಎಂದು ಗೊತ್ತಾಯಿತು. ಅದನ್ನು ಜನರಿಗೂ ತಿಳಿಸುವ ಕೆಲಸವಾಗಬೇಕು. ಅದಕ್ಕಾಗಿ ಜನರ ಪೊಲೀಸರ ಅಂತರ ಕಡಿಮೆ ಮಾಡುವ ಕೆಲಸವಾಗಬೇಕಿದೆ ಎಂದು ಭಾರತೀಯ ಮಾಜಿ ಕ್ರಿಕೆಟಿಗರು ಮತ್ತು ಪ್ರಸ್ತುತ ಐಸಿಸಿ ಮ್ಯಾಚ್ ರೆಫೆರಿ ಜಾವಗಲ್ ಶ್ರೀನಾಥ್ ಅವರು ಹೇಳಿದರು.

ಮೈಸೂರು ನಗರ ಪೊಲೀಸ್ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ, ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನರನ್ನು ಕೆಲಸದಿಂದ ಸಮಾಧಾನ ಪಡಿಸುವುದು ಕಷ್ಟವಿದೆ. ಎಲ್ಲರಲ್ಲೂ ಸ್ನೇಹ ಭಾವ ಮೂಡಿಸಿದರೆ ಇದೊಂದು ಅದ್ಭುತ ಕೆಲಸವಾಗುತ್ತದೆ. ಆ ಮನೆಗಳಿಗೆ ಇಂತಹ ಪೊಲೀಸ್ ತನ್ನ ಜವಾಬ್ದಾರಿ ಎಂದು ಕೊಂಡರೆ ಸಕ್ಸಸ್, ಪೊಲೀಸ್ ಮನೆಗೆ ಬಂದು ಹೋದರೆ ಕಾನೂನು ಸುವ್ಯವಸ್ಥೆ ಅರ್ಥ ಮಾಡಿಕೊಳ್ಳುತ್ತಾರೆ. ಇಲಾಖೆ ಬಗ್ಗೆ ಧನಾತ್ಮಕ ಚಿಂತನೆ ಮೂಡುತ್ತದೆ. ನಾಗರಿಕರು ಪೊಲೀಸರನ್ನು ಮನೆ ಬಾಗಿಲಲ್ಲಿ ಸ್ವಾಗತಿಸಿ. ನಾಗರಿಕರು ಪೊಲೀಸರ ಸಂಬoಧ ಗಟ್ಟಿಯಾದರೆ ದುಷ್ಕೃತ್ಯ ಮಾಡುವವರಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಮಾತನಾಡಿ ನಾವು ನಿಮ್ಮ ಹಕ್ಕುಗಳ ರಕ್ಷಕರು ಅದರ ಕೆಲಸಕ್ಕೆ ಸಮಾಜದ ಬೆಂಬಲ ಅಗತ್ಯ. ಅದಿಲ್ಲದಿದ್ದರೆ ನಮಗೆ ಕಷ್ಟ. ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಕಷ್ಟಸಾಧ್ಯ. ಬೀಟ್ ಕಾನ್ಸ್ಟೆಬಲ್ಗೆ ಕ್ಲಸ್ಟರ್ ಮಾಡಿ ಒಂದು ಕ್ಲಸ್ಟರ್ನಲ್ಲಿ 40 ರಿಂದ 50 ಮನೆ ಇರುತ್ತದೆ. 250 ಮನೆಯ ಜವಬ್ದಾರಿ ನೀಡಿದ್ದೇವೆ. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಆಯಾಯ ಏರಿಯಾಗೆ ಸಂಬoಧಪಟ್ಟು ನಡೆಯುತ್ತಿರುವ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.

ಅವರು ತಮ್ಮ ಕ್ಯೂ ಆರ್ ಕೋಡ್ ಮೂಲಕ ಮನೆಯ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಬೀಟ್ ಪೊಲೀರು ತಿಳಿಸುತ್ತಾರೆ. 250 ಮನೆಗೊಬ್ಬ ಸಲಹೆಗಾರರನ್ನು ಆಯ್ಕೆ ಮಾಡಿ ಅವರೊಂದಿಗೆ ಪ್ರತೀ ಶನಿವಾರ ಮೀಟಿಂಗ್ ಮಾಡಿ ಅತ್ಯುತ್ತಮ ಪೊಲೀಸ್ ಸ್ನೇಹಿತ, ಸಲಹೆಗಾರ ಪ್ರಶಸ್ತಿ ನೀಡುತ್ತೇವೆ. ಊರಿನ ಅನುಮಾನಾಸ್ಪದ ವಿಷಯಗಳ ಕುರಿತೂ ಮಾಹಿತಿ ನೀಡಬಹುದು. ಪುರುಷರಿಲ್ಲದ ಮನೆಗೆ ಮಹಿಳಾ ಕಾನ್ಸ್ಟೇಬಲ್ ಕಳಿಸಲಾಗುವುದು.

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನಿರ್ಬಂಧ ವಾತಾವರಣವನ್ನು ಕಾಪಾಡಲು ನಮ್ಮ ಮುಖ್ಯ ಉದ್ದೇಶವಾಗಿದೆ. ಅದರಲ್ಲಿ ಸಾಮಾಜಿಕ ಭದ್ರತೆ ಎಂದರೆ ನಿಮ್ಮ ಹಕ್ಕುಗಳ ರಕ್ಷಕರಾಗಿ ಇರುತ್ತೀವಿ. ಇಂತಹ ಉತ್ಕೃಷ್ಟ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು ಅಂದರೆ ಸಮಾಜದ ಸಹಭಾಗಿತ್ವ ಮತ್ತು ಬೆಂಬಲ ಅನಿವಾರ್ಯವಾಗಿರುತ್ತದೆ. ಪೋಲಿಸ್ ಸೇವೆ ಪ್ರತಿಯೊಂದು ಹಂತದಲ್ಲಿಯೂ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಅನಿವಾರ್ಯವಾಗಿದೆ. ಪ್ರತಿ ರಾಜ್ಯದಲ್ಲಿ ಮನೆ ಮನೆಗೆ ಪೊಲೀಸ್ ಜಾರಿಗೆ ತಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಆರ್.ಎನ್. ಬಿಂದು ಮಣಿ, ಅಪರಾಧ ಮತ್ತು ಸಂಚಾರ ಕೇಂದ್ರಸ್ಥಾನ ಉಪ ಪೊಲೀಸ್ ಆಯುಕ್ತರಾದ ಕೆ.ಎಸ್. ಸುಂದರ್ ರಾಜ್, ಮೋಹನ್ ಕುಮಾರ್, ಅಶ್ವತ್ಥ್ ನಾರಾಯಣ್, ರಾಜೇಂದ್ರ, ರವಿಪ್ರಸಾದ್, ಶಿವಶಂಕರ್ ಹಾಗೂ ಮತ್ತಿತರು ಉಪಸ್ಥಿತರಿದರು.vtu

Key words:  public, work . bridge. Police, government, Javagal Srinath

The post ಸಾರ್ವಜನಿಕರು ಪೊಲೀಸರ ನಡುವೆ ಅಂತರ ಕಡಿಮೆ ಮಾಡುವ ಕೆಲಸವಾಗಬೇಕಿದೆ – ಜಾವಗಲ್ ಶ್ರೀನಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...