12
March, 2026

A News 365Times Venture

12
Thursday
March, 2026

A News 365Times Venture

ತಿರುನೆಲ್ವೆಲಿ – ಶಿವಮೊಗ್ಗ ಟೌನ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ: ಯಾವಾಗ..?

Date:

ಮೈಸೂರು,ಆಗಸ್ಟ್,16,2025 (www.justkannada.in): ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡಿನ ತಿರುನೆಲ್ವೆಲಿ – ಶಿವಮೊಗ್ಗ ಟೌನ್ ಮಧ್ಯೆ ಒಂದು ಟ್ರಿಪ್‌ ವಿಶೇಷ ರೈಲು ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ. 06103 ತಿರುನಲ್ವೆಲಿಯಿಂದ ಆಗಸ್ಟ್ 17 2025, ಭಾನುವಾರ ಸಂಜೆ 4.20ಕ್ಕೆ ಹೊರಟು ಸೋಮವಾರ ಮಧ್ಯಾಹ್ನ 01.00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ. ರೈಲು ಸಂಖ್ಯೆ. 06104 ಶಿವಮೊಗ್ಗ ಟೌನ್ ನಿಂದ ಆಗಸ್ಟ್ 18 2025, ಸೋಮವಾರ ಮಧ್ಯಾಹ್ನ 2.20ಕ್ಕೆ ಹೊರಟು ಮಂಗಳವಾರ ಬೆಳಗ್ಗೆ 10.45ಕ್ಕೆ ತಿರುನಲ್ವೆಲಿಗೆ ತಲುಪಲಿದೆ.

ಈ ರೈಲು ಎರಡು ಮಾರ್ಗಗಳಲ್ಲಿ ಕಲ್ಲಿದೈಕುರ್ಚಿ, ಅಂಬಾಸಮುದ್ರಂ, ಕಿಜಕಡೈಯಂ, ಪವೂರುಚತ್ರಂ, ತೆಂಕಾಸಿ ಜಂಕ್ಷನ್, ಕಡಯನಲ್ಲೂರು, ಶಂಕರನ್ಕೊವಿಲ್, ರಾಜಪಾಳಯಂ, ಶ್ರೀವಿಲ್ಲಿಪುತ್ತೂರು, ಶಿವಕಾಶಿ, ವಿರುದುನಗರ ಜಂಕ್ಷನ್, ಮದುರೈ ಜಂಕ್ಷನ್, ಕೊಡೈಕೆನಾಲ್ ರಸ್ತೆ, ದಿಂಡಿಗಲ್ ಜಂಕ್ಷನ್, ಕರೂರ್ ಜಂಕ್ಷನ್, ನಮಕ್ಕಲ್, ಸೇಲಂ ಜಂಕ್ಷನ್, ಕುಪ್ಪಂ, ಬಂಗಾರಪೇಟೆ ಜಂಕ್ಷನ್, ಕೃಷ್ಣರಾಜಪುರಂ, ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಾಣವರ, ತುಮಕೂರು, ಅರಸೀಕೆರೆ, ಬೀರೂರು, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳಲ್ಲಿ ನೀಲುಗಡೆಗೊಳ್ಳಲಿದೆ.

ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಹೊಂದಿರಲಿದ್ದು ಟು ಟೈರ್‌ ಎಸಿ 1, ತ್ರಿ ಟೈರ್‌ ಎಸಿ 2, ಸ್ಲೀಪರ್‌ 9, ಜನರಲ್‌ 4, ಸಿಟ್ಟಿಂಗ್‌ ಕಮ್‌ ಲಗೇಜ್‌ ಕೋಚ್‌ – 2 ಬೋಗಿಗಳನ್ನು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕರು ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದಾರೆ.

Key words: One trip, special train, between, Tirunelveli – Shimoga Town

The post ತಿರುನೆಲ್ವೆಲಿ – ಶಿವಮೊಗ್ಗ ಟೌನ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ: ಯಾವಾಗ..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗೆ ಸಮಸ್ಯೆ ಇಲ್ಲ-ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮಾರ್ಚ್,12,2026 (www.justkannada.in):  ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎಂಬ ವಿಚಾರ, ಗೃಹ...

ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,12,2026 (www.justkannada.in): ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದವಿದೆ ಎಂದು...

ಗೃಹ ಬಳಕೆ ವಿದ್ಯುತ್‌ ಸಂಪರ್ಕ ಅನ್ಯ ಉದ್ದೇಶಕ್ಕೆ ಬಳಸಬೇಡಿ: ಬೆಸ್ಕಾಂ ಮನವಿ

ಬೆಂಗಳೂರು,ಮಾರ್ಚ್,12,2026 (www.justkannada.in): ಗೃಹ ಬಳಕೆಗೆ ಪಡೆದ ವಿದ್ಯುತ್‌ ಸಂಪರ್ಕವನ್ನು ವಾಣಿಜ್ಯ ಹಾಗೂ...

ಗ್ಯಾಸ್ ಸಿಲಿಂಡರ್ ಸಮಸ್ಯೆ: ಕೇಂದ್ರದ ವಿರುದ್ದ ಗುಡುಗಿದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ,ಮಾರ್ಚ್,12,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೆ ದೇಶದಲ್ಲಿ...