13
February, 2026

A News 365Times Venture

13
Friday
February, 2026

A News 365Times Venture

ರಾಜ್ಯದ ಬಿಜೆಪಿ ಸಂಸದರಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯ- ಸಚಿವ ಎಂ.ಬಿ ಪಾಟೀಲ್

Date:

ವಿಜಯಪುರ,ಫೆಬ್ರವರಿ,2,2026 (www.justkannada.in): ಬೆಂಗಳೂರು-ಪುಣಿ-ಮುಂಬೈ ರೈಲ್ವೆ ಕಾರಿಡಾರ್‌ ಘೋಷಣೆ ಮಾಡದೇ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಅನ್ಯಾಯ ಮಾಡಲಾಗಿದೆ.  ಕೇಂದ್ರ ಸಚಿವರಾದ  ಪ್ರಹ್ಲಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ವೈಫಲ್ಯ ಎದ್ದು ಕಾಣುತ್ತಿದ್ದು,  ರಾಜ್ಯದ ಬಿಜೆಪಿ ಸಂಸದರಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಬೆಂಗಳೂರು-ಹೈದರಾಬಾದ್, ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಸ್ವಾಗತಾರ್ಹವಾದರೂ, ಕರ್ನಾಟಕದೊಳಗೆ 100 ಕಿ.ಮೀ. ಕೂಡ ಓಡದ ಮಾರ್ಗಗಳಿಂದ ರಾಜ್ಯಕ್ಕೆ ಏನು ಲಾಭ? ಬದಲಿಗೆ ಬೆಂಗಳೂರು-ಪುಣೆ-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಾಗಿತ್ತು. ಪೂರಕ ಬಜೆಟ್‌ ನಲ್ಲಾದರೂ ಈ ಕಾರಿಡಾರ್‌ ಘೋಷಣೆ ಮಾಡಬೇಕು. ಇಲ್ಲವಾದರೆ ಜನಜಾಗೃತಿ ಆಂದೋಲನ ಮಾಡಲಾಗುವುದು ಎಂದರು.

. ವಿಜಯಪುರ ಜಿಲ್ಲೆಯ ಸಂಸದರು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎಂಬಂತಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್‌ ಸೇರಿದಂತೆ ರಾಜ್ಯದ ಯಾವೊಬ್ಬರ ಸಂಸದರೂ ಈ ಬಗ್ಗೆ ರೈಲ್ವೆ ಸಚಿವರನ್ನು, ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರುವಲ್ಲಿ ವಿಫಲವಾಗಿದ್ದಾರೆ ಎಂದು  ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಅತೀ ಹೆಚ್ಚು ತೆರಿಗೆ ಕೊಡುತ್ತಿದೆ. ಆದರೆ  ಅನುದಾನ ಹಂಚಿಕೆಯಲ್ಲಿ ನ್ಯಾಯಸಮ್ಮತ ಹಂಚಿಕೆ ಇಲ್ಲ, ಅಗತ್ಯ ಯೋಜನೆಗಳಿಗೆ ಅನುದಾನ ಇಲ್ಲ. ಇದು ಕೇವಲ ಬಜೆಟ್ ವೈಫಲ್ಯವಲ್ಲ, ಒಕ್ಕೂಟ ವ್ಯವಸ್ಥೆಯ ಆತ್ಮಕ್ಕೇ ಹೊಡೆತವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಟೀಕಿಸಿದರು.

Key words:  injustice. Karnataka, state BJP, MPs, Minister, M.B. Patil

The post ರಾಜ್ಯದ ಬಿಜೆಪಿ ಸಂಸದರಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸರ್ಕಾರ ಹೋದ್ರೂ ತೊಂದರೆ ಇಲ್ಲ: ಡಿಕೆಶಿ ಶತಾಯಗತಾಯ ಸಿಎಂ ಆಗಲು ಹೊರಟಿದ್ದಾರೆ- ಶಾಸಕ ಯತ್ನಾಳ್

ಉಡುಪಿ.ಫೆಬ್ರವರಿ,13,2026 (www.justkannada.in): ಸರ್ಕಾರ ಹೋದರೂ ತೊಂದರೆ ಇಲ್ಲ ಡಿಕೆ ಶಿವಕುಮಾರ್  ಶತಾಯಗತಾಯ...

ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ, ನಾನು ಮಾತನಾಡಲ್ಲ- ಸಚಿವ ರಾಮಲಿಂಗರೆಡ್ಡಿ

ಬೀದರ್,ಫೆಬ್ರವರಿ,13,2026 (www.justkannada.in): ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ...

ಹೃದಯಾಘಾತದಿಂದ ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

ಬೆಂಗಳೂರು,ಫೆಬ್ರವರಿ,13,2026 (www.justkannada.in): ಹಿರಿಯ ನಿರ್ದೇಶ ಜೋ ಸೈಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ...

ಸರ್ಕಾರಕ್ಕೆ 1 ಸಾವಿರ ದಿನ: ನಾಳೆ ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ- ಸಚಿವ ಕೃಷ್ಣಭೈರೇಗೌಡ

ಗದಗ,ಫೆಬ್ರವರಿ,13,2026 (www.justkannada.in):  ‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 1 ಸಾವಿರ...