ಬೆಂಗಳೂರು,ಫೆಬ್ರವರಿ,10,2026 (www.justkannada.in): ಸಿಎಂ ಬದಲಾವಣೆ ಬಗ್ಗೆ ಹಲವು ಶಾಸಕರು ವಿವಿಧ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ನಮ್ಮ ಹೈಕಮಾಂಡ್ ಬಗ್ಗೆ ನನಗೆ ತುಂಬಾ ಭಯ ಇದೆ. ಬೇರೆ ಶಾಸಕರಿಗೆ ಭಯ ಇಲ್ಲದೆ ಇರಬಹುದು. ವೈಯಕ್ತಿಕವಾಗಿ ಹೇಳಿದಾಗ ಅವರೇ ಆ ಬಗ್ಗೆ ಸ್ಪಷ್ಟನೆ ಕೊಡಬೇಕು. ಪಕ್ಷದ ಪರವಾಗಿ ಹೇಳಿಕೆ ಕೊಟ್ಟರೆ ಅದಕ್ಕೆ ನಾವೆಲ್ಲಾ ಬದ್ದ ಎಂದರು.
ವೈಯಕ್ತಿಕ ಆಸೆ ಆಕಾಂಕ್ಷೆಗಳ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕು. ನಮ್ಮ ಹೈಕಮಾಂಡ್ ನಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Key words: CM change, issue, clarify, personal statements, Minister, Madhu Bangarappa.
The post ಸಿಎಂ ಬದಲಾವಣೆ ವಿಚಾರ: ವೈಯಕ್ತಿಕ ಹೇಳಿಕೆಗಳಿಗೆ ಅವರೇ ಸ್ಪಷ್ಟನೆ ಕೊಡಬೇಕು- ಸಚಿವ ಮಧು ಬಂಗಾರಪ್ಪ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




