21
February, 2026

A News 365Times Venture

21
Saturday
February, 2026

A News 365Times Venture

ಎಸ್ ಎಸ್ ಎಲ್ ಸಿಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಜಿ.ಪಂ ಸಿಇಓ ಭೇಟಿ

Date:

ಮಂಡ್ಯ,ಫೆಬ್ರವರಿ,21,2026 (www.justkannada.in): ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ಕೊಟ್ಟ ಜಿಲ್ಲಾಪಂಚಾಯತ್ ಸಿಇಓ ನಂದಿನಿ ಕೆ.ಆರ್ ರವರು ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಸಂವಾದ ನಡೆಸಿ, ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಿದರು.

ಕಳೆದ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಪರಿಣಾಮ ಮತ್ತೆ ಈ ಮಟ್ಟದ ಫಲಿತಾಂಶ ಬರಬಾರದೆಂದು ಸಿಇಓ ನಂದಿನಿ ಕೆ.ಆರ್ ಅವರು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಶಿಕ್ಷಕರ ಜೊತೆ ಕಲಿಕೆಯ ಹಾಗೂ ಬೋಧನೆಯ ವರದಿ ಪಡೆದರು.

ಶಾಲೆಯಲ್ಲಿ ಶಿಕ್ಷಕರ ಬೋಧನೆ ಹೇಗಿದೆ ಹಾಗೆಯೇ ಶಾಲೆಯಲ್ಲಿ ಸಂಜೆಯ ನಂತರ ವಿಶೇಷ ತರಗತಿಗಳು ನಡೆಯುತ್ತಿದೆಯೇ ಎಂದು ಮಕ್ಕಳೊಟ್ಟಿಗೆ ಮುಕ್ತಾವಾಗಿ ಚರ್ಚಿಸಿದರು. ಹಾಗೆ “ಕಲಿಕಾಮಿತ್ರ” ಎಷ್ಟು ಮಕ್ಕಳಿಗೆ ಉಪಯುಕ್ತವಾಗಿದೆ ಎಂಬ ಮಾಹಿತಿ ಸಹ ಪಡೆದರು.

ವಿದ್ಯಾರ್ಥಿಗಳೊಡನೆ “ಕಲಿಕಾಮಿತ್ರ” ಕುರಿತು ಸಂವಾದ ನಡೆಸಿದ ಸಂದರ್ಭದಲ್ಲಿ ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಉಪಯುಕ್ತವಾಗಿದೆ. ಕಾರಣ ಕಲಿಕಾಮಿತ್ರ ಪಠ್ಯವು ಕನ್ನಡದಲ್ಲಿ ಇರುವುದರಿಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಕೊಂಚ ಕಷ್ಟವಾಗಿದೆ, ಹಾಗಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕಾಮಿತ್ರ ಅನುವಾದಗೊಂಡರೆ ನಮಗೆ ಸಹಾಯವಾಗಲಿದೆ ಎಂದು ತಿಳಿಸಿದರು.

ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ವ್ಯವಸ್ಥೆ ಇಲ್ಲದ ಕಾರಣ ಪ್ರಾಥಮಿಕ ಶಾಲೆಯೊಂದರಲ್ಲಿ ಖಾಲಿ ಇರುವ ಕೊಠಡಿಯೊಂದನ್ನು ಆದಷ್ಟು ಬೇಗ ಗ್ರಂಥಾಲಯಕ್ಕೆ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚಿಸಿದರು.

ಶಾಲಾ ಮಕ್ಕಳಿಗೆ ಬಿಸಿಯೂಟದಡಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟದ ವ್ಯವಸ್ಥೆ ಸಿಗುತ್ತಿದೆಯೇ ? ಎಂಬುದರ ಕುರಿತು ನಂದಿನಿ ಕೆ.ಆರ್ ಅವರು ಪರಿಶೀಲಿಸಿದರು.

ಕನ್ನಡ ಮಾಧ್ಯಮದಲ್ಲಿ 98 ವಿದ್ಯಾರ್ಥಿಗಳಿದ್ದು, ಶಾಲಾ ಕೊಠಡಿಯು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿಲ್ಲದ ಕಾರಣ ಸ್ಥಳದಲ್ಲಿಯೇ ಶಾಲೆಯಲ್ಲಿನ ಮತ್ತೊಂದು ಬದಲಿ ಕೊಠಡಿಯನ್ನು ಸಿ.ಇ.ಓ ರವರು ಗುರುತಿಸಿ, ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳಾಂತರಿಸುವ ವ್ಯವಸ್ಥೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.

ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, 6 ಜನ ಅತಿಥಿ ಶಿಕ್ಷಕರು ನೇಮಕಗೊಂಡಿದ್ದಾರೆ, ಅದರಲ್ಲಿ ಕೆಲವರು ಬಸ್ಸಿನ ಕೊರತೆಯಿಂದು ಬೇಗ ತೆರಳುವ ಶಿಕ್ಷಕರಿದ್ದಾರೆ ಎಂದು ಮುಖ್ಯೋಪಾಧ್ಯಾಯರು ಸಿಇಓ ರವರಿಗೆ ತಿಳಿಸಿದ ಕಾರಣ, ಅತಿಥಿ ಉಪನ್ಯಾಸಕರಿಗೆ ಮಕ್ಕಳ ವಿಧ್ಯಾಭ್ಯಾಸದ ಕುರಿತು ಒಳಿತಾಗುವ ಹಾಗೆ ಸಹಕರಿಸಿ, ಸಾರಿಗೆ ವ್ಯವಸ್ಥೆ ಸಂಬಂಧಿಸಿದಂತೆ ಬದಲಿ ವ್ಯವಸ್ಥೆ ಮಾಡಿಕೊಂಡು ಶಾಲೆಯ ಅವಧಿಯ ಸಮಯ, ಶಿಸ್ತು ಪಾಲನೆ ಹಾಗೂ ಮಕ್ಕಳ ವಿಧ್ಯಾಭ್ಯಾಸ ಕುರಿತು ಗಮನ ಹರಿಸುವಂತೆ ಸಲಹೆ ನೀಡಿದರು.

ಶಾಲಾ ಕೊಠಡಿಗಳಲ್ಲಿ ವಿಧ್ಯಾರ್ಥಿಗಳಿಗೆ ಬೆಳಕಿನ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಸಿಇಓ ರವರು ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೂಡಲೇ ಬಲ್ಪ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿಶೇಷ ತರಗತಿಗಳು ನಡೆಯುತ್ತಿರುವುದರಿಂದ ಈಗಾಗಲೇ ಎರಡು ತಿಂಗಳ ಹಿಂದೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೊಠಡಿಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆಯೇ? ಇಲ್ಲವೇ? ಎಂಬುವುದರ ಕುರಿತು ಖುದ್ದು ಪರಿಶೀಲಿಸಿ, ಸೂಕ್ತ ಬೆಳಕಿನ ವ್ಯವಸ್ಥೆಯಿಲ್ಲದ ಶಾಲಾ ಕೊಠಡಿಗಳಿಗೆ ಕಾಂಟಿಜೆಸ್ಸಿ ಅಥವಾ ಇತರೆ ಅನುದಾನದಡಿ ಬಲ್ಪ್ ಗಳನ್ನು ಅಳವಡಿಸಲು ತಿಳಿಸಲಾಗಿತ್ತು. ಅದರೂ ಸಹ ಶಾಲಾ ಕೊಠಡಿಯಲ್ಲಿ ಬೆಳಕಿನ ವ್ಯವಸ್ಥೆಗೆ ಬಲ್ಪ್ ಅಳವಡಿಸದ್ದಿದ್ದುರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಸಿ, ಜಿಲ್ಲೆಯ ಎಲ್ಲಾ ಶಾಲೆಯ ಮುಖ್ಯೋಪಾಧ್ಯಯರೊಂದಿಗೆ ಮತ್ತೊಮ್ಮೆ ವಿಡಿಯೋ ಸಂವಾದ ಕಾರ್ಯಕ್ರಮ ನಡೆಸಿ, ಸೂಕ್ತ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿ, ಮುಂದಿನ ದಿನಗಳಲ್ಲಿ ಯಾವುದೇ ಶಾಲೆಯ ಕೊಠಡಿಗಳಲ್ಲಿ ಬೆಳಕಿನ ವ್ಯವಸ್ಥೆಯಿಲ್ಲದಿರುವುದು ಕಂಡು ಬಂದಿಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾವುದು ಎಂದು ಎಚ್ಚರಿಕೆ ನೀಡಿದರು.

ಶಾಲಾ ಮಕ್ಕಳ ಜೊತೆ ಬಿಸಿಯೂಟ ಸವಿದ ಸಿಇಓ

ನಾಗಮಂಗಲ ತಾಲ್ಲೂಕಿನ ಚಿಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಮಕ್ಕಳ ಹಾಗೂ ಶಿಕ್ಷಕರ ನಡುವೆ ವಿಧ್ಯಾಭ್ಯಾಸದ ಕುರಿತು ಹಾಗೂ ಶಾಲೆಯ ಬಿಸಿಯೂಟದ ವ್ಯವಸ್ಥೆ ಕುರಿತು ಮಾಹಿತಿ ಪಡೆದರು.

ಶಾಲಾ ಮಕ್ಕಳ ಜೊತೆ ಕೂತು ಮಧ್ಯಾಹ್ನದ ಬಿಸಿಯೂಟ ಸವಿದು ಮಕ್ಕಳ ಖುಷಿಗೆ ಪಾತ್ರರಾದರು. ಹಾಗೆಯೇ ಕಳೆದ ವರ್ಷಕ್ಕಿಂತ ಈ ವರ್ಷ ಎಷ್ಟು ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದಾರೆ ಎಂದು ಗಮನಿಸಿ ಮಕ್ಕಳ ಉನ್ನತ ಅಭಿವೃದ್ಧಿಗೆ ಶಿಕ್ಷಕರು ಪಾತ್ರರಾಗಬೇಕೆಂದು ತಿಳಿಸಿದರು.

ಶಾಲೆಯಲ್ಲಿ ಹೆಣ್ಣು ಮಕ್ಕಳು ಫಲಿತಾಂಶ ಶೇಕಡಾ 92.6 ರಷ್ಟಿದ್ದು, ಗಂಡು ಮಕ್ಕಳು ಸಹ ಮುಂದಿನ ಒಂದು ತಿಂಗಳೊಳಗೆ ಧೀರ್ಘ ಅಭ್ಯಾಸ ನಡೆಸಿ, ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಬೇಕೆಂದು ತಿಳಿಸಿದರು.

ಹಿಂದಿನ ವರ್ಷದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಪೋಟೋವನ್ನು ಶಾಲೆಯಲ್ಲಿದ್ದ ಫಲಕದಲ್ಲಿ ಅಳವಡಿಲಾಗಿತ್ತು, ಸದರಿ ಫಲಕದಲ್ಲಿ ಈ ವರ್ಷದಲ್ಲಿ ಯಾರು ತಮ್ಮ ಪೋಟೋವನ್ನು ಹಾಕಲು ಇಚ್ಛಿಸುತ್ತಿರಿ ಎಂದು ಪ್ರಶ್ನಿಸಿದ ಸಿಇಓ ನಂದಿನಿ ಕೆ.ಆರ್ ರವರ ಪ್ರಶ್ನೆಗೆ ಎಲ್ಲಾ ವಿದ್ಯಾರ್ಥಿಗಳು ಕೈ ಎತ್ತುವುದರ ಮೂಲಕ ತಮ್ಮಲ್ಲಿರುವ ಉತ್ಸಾಹವನ್ನು ಪ್ರದರ್ಶಿಸಿ, ಸಿಇಓ ರವರ ಪ್ರಶಂಸೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ವೀಣಾ,  ಶಿಕ್ಷಣಾಧಿಕಾರಿ ರವಿಕುಮಾರ ಅಕ್ಷರ ದಾಸೋಹ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಸುರೇಶ , ಜಕ್ಕನಹಳ್ಳಿ ಮುಖ್ಯೋಪಾಧ್ಯಾಯರು ನಾಗೇಗೌಡ, ಚೀಣ್ಯ ಮುಖ್ಯೋಪಾಧ್ಯಾಯರು ಮಂಜೇಗೌ,  ಕಾರ್ಯದರ್ಶಿ ರಕ್ಷಿತ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Key words: Mandya, ZP CEO, visits, schools , low ,SSLC results

The post ಎಸ್ ಎಸ್ ಎಲ್ ಸಿಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಜಿ.ಪಂ ಸಿಇಓ ಭೇಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಬಿಜೆಪಿ ಶಾಸಕ

ಗದಗ,ಫೆಬ್ರವರಿ,21,2026 (www.justkannadda.in):  ಸಣ್ಣನೀರಾವರಿ ಇಲಾಖೆ ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ...

ಖರ್ಗೆ ಅವರಿಂದ ಆದಷ್ಟು ಬೇಗ ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುವ ಭರವಸೆ- ಸಚಿವ ಸತೀಶ್ ಜಾರಕಿಹೊಳಿ

ನವದೆಹಲಿ,ಫೆಬ್ರವರಿ,21,2026 (www.justkannada.in): ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗೊಂದಲ ವಿಚಾರವನ್ನು ಆದಷ್ಟು...

ಜಾತಿಧರ್ಮಗಳನ್ನು ಮೀರಿ ಮಾನವೀಯತೆಯಿಂದ ಸೇವೆ ಸಲ್ಲಿಸಿ- ಸಿಎಂ ಸಿದ್ದರಾಮಯ್ಯ ಕಿವಿಮಾತು

ಬೆಂಗಳೂರು, ಫೆಬ್ರವರಿ ,21,2026 (www.justkannada.in):  ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ...

ತುರಗನೂರು ವಿಸ್ತರಣೆ ಶಾಖಾ ನಾಲೆಗಳ ಅಭಿವೃದ್ಧಿಯಿಂದ 1800 ಎಕರೆಗೆ ನೀರು: ಸಚಿವ ಡಾ: ಹೆಚ್.ಸಿ ಮಹದೇವಪ್ಪ

ಮೈಸೂರು,ಫೆಬ್ರವರಿ,21,2026 (www.justkannada.in):  ತುರಗನೂರು ಶಾಖಾ ನಾಲೆಯು ವಿಶ್ವೇಶ್ವರಯ್ಯ ನಾಲೆಯ ಅಂತಿಮ‌ ನೆಲೆಯಾಗಿದ್ದು,...