ಬೆಂಗಳೂರು,ಫೆಬ್ರವರಿ,26,2026 (www.justkannada.in): ಗೃಹ ಇಲಾಖೆಯಲ್ಲಿ 17 ಸಾವಿರ ಹುದ್ದೆಗಳು ಖಾಲಿ ಇದೆ. ನೇಮಕಾತಿ ಆದೇಶ ಮಾಡಲು ನಮಗೆ ಅನುಮತಿ ಸಿಕ್ಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಒಳ ಮೀಸಲಾತಿಯಿಂದ ನೇಮಕಾತಿ ವಿಳಂಬ ಆಗಿದೆ ಅದನ್ನ ಸರಿಪಡಿಸುವುದರ ಬಗ್ಗೆ ಚರ್ಚೆ ಮಡುತ್ತೇವೆ. ನೇಮಕಾತಿ ಆದೇಶ ಮಾಡಲು ಅನುಮತಿ ಸಿಕ್ಕಿದೆ ಎಂದರು.
ಹಣವಂತರು ಗ್ಯಾರಂಟಿ ಪಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಗ್ಯಾರಂಟಿ ಜಾರಿ ಮಾಡುವಾಗ ನಿಯಮ ಮಾಡಿರಲಿಲ್ಲ. ಹಣವಂತರು ಯಾರು ತೆಗೆದುಕೊಳ್ಳುತ್ತಿದ್ದಾರೆ. ಎಂದು ಯೋಚಿಸಿದ್ವಿ ಈಗಲೂ ಕೆಲವರ ಬಳಿ ಹಣ ಇದ್ದರೂ ಗ್ಯಾರಂಟಿ ನಮಗೆ ಕೊಡಿ ಅಂತಾರೆ. 100 ಎಕರೆ ಜಮೀನಿದರೂ 2 ಸಾವಿರ ಹಣ ಪಡೆಯುತ್ತಾರೆ ಎಂದು ತಿಳಿಸಿದರು.
Key words: 17,000 posts, vacant, Home Department, Minister, Parameshwar
The post ಗೃಹ ಇಲಾಖೆಯಲ್ಲಿ 17 ಸಾವಿರ ಹುದ್ದೆ ಖಾಲಿ: ನೇಮಕಾತಿ ಆದೇಶಕ್ಕೆ ಅನುಮತಿ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




