ಬೆಂಗಳೂರು,ಮಾರ್ಚ್,12,2026 (www.justkannada.in) ರಾಜ್ಯದಲ್ಲಿ ಆರ್ಥಿಕ ಶಿಸ್ತು ಕಾಪಾಡುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಆರೋಪಿಸಿದರು.
ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆಯಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ನೀರಾವರಿ ಯೋಜನೆಗೆ ಇಟ್ಟ ಹಣದ ಬಗ್ಗೆ ಸಿಎಂ ಹೇಳಬೇಕು. ಅಲ್ಪಸಂಖ್ಯಾತರಿಗೆ ಒಳ್ಳೆಯದು ಮಾಡಿ ಅದಕ್ಕೆ ವಿರೋಧ ಇಲ್ಲ. ಅವರ ಓಲೈಕೆ ಮಾಡಿಕೊಂಡು ಉಳಿದ ಸಮುದಾಯ ಮರೆತಿದ್ದಾರೆ . ರಾಜ್ಯದಲ್ಲಿ 1.48 ಲಕ್ಷ ಮಕ್ಕಳಿಗೆ ಹಾಸ್ಟೆಲ್ ಇಲ್ಲ ಆರ್ಥಿಕ ಸಂಕಷ್ಟಕ್ಕ ಸಿಲುಕಿ 52 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ರಾಜ್ಯದ ಎಲ್ಲಾ ಸಮುದಾಯದ ಬಗ್ಗೆ ಗಟ್ಟಿ ನಿರ್ಣಯ ತೆಗೆದುಕೊಳ್ಳಿ ಸಿದ್ದು ಕೇಂದ್ರದ ಕಡೆ ಬೊಟ್ಟು ಮಾಡೊದು ಬಿಡಬೇಕು ಎಂದು ಚಾಟಿ ಬೀಸಿದರು.
ಖಾಲಿ ಹುದ್ದೆ ಭರ್ತಿ ಮಾಡದೆ ಇರುವುದರಿಂದ 15 ಸಾವಿರ ಕೋಟಿ ಉಳಿತಾಯ
ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗದೇ ಮೀನಾಮೇಷ ಎಣಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಕುಟುಕಿದ ಬಿವೈ ವಿಜಯೇಂದ್ರ, ಆರ್ಥಿಕ ಶಿಸ್ತು ಕಾಪಾಡುವಲ್ಲಿ ಸಿದ್ದರಾಮಯ್ಯ ವಿಫಲ. ನಮ್ಮ ರಾಜ್ಯಕ್ಕೆ ಏಳುಸಾವಿರ ಕೋಟಿ ರೂಪಾಯಿ ಬರುತ್ತಿದೆ . ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಯುವಕರು ಹೋರಾಟ ಮಾಡುತ್ತಿದ್ದಾರೆ ಖಾಲಿ ಹುದ್ದೆ ಭರ್ತಿ ಮಾಡಿದರೆ ಫೈನಾನ್ಸ್ ಹೆಚ್ಚು ಕಡಿಮೆ ಆಗುತ್ತಿದೆ ಹುದ್ದೆ ಖಾಲಿ ಇಟ್ಟುರುವ ಕಾರಣ 15 ಸಾವಿರ ಕೋಟಿ ಉಳಿದಿದೆ. ಹುದ್ದ ಭರ್ತಿ ಮಾಡಿದರೆ ಹಣಕಾಸು ಗಾಳಿಪಾಟ ರೀತಿ ಹಾರಾಡುತ್ತೆ ಎಂದು ರಾಜ್ಯ ಸರ್ಕಾರದ ನಡೆ ಟೀಕಿಸಿದರು.
Key words: CM Siddaramaiah, failed, financial, discipline, BY Vijayendra
The post ಆರ್ಥಿಕ ಶಿಸ್ತು ಕಾಪಾಡುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲ: ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




