ಬೆಂಗಳೂರು,ಮಾರ್ಚ್,14,2026 (www.justkannada.in): ಮಾರ್ಚ್ 28ಕ್ಕೆ ಸಿಎಂ ಸಿದ್ದರಾಮಯ್ಯ ಒಳಮೀಸಲಾತಿ ಬಗ್ಗೆ ಸಭೆ ಕರೆದಿದ್ದಾರೆ. ಅಂದು ಸಮಸ್ಯೆ ಬಗೆಹರಿಯಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, 50 ಸಾವಿರ ಹುದ್ದೆಗಳ ಭರ್ತಿಗೆ ಸಿದ್ದತೆ ನಡೆಸಿದ್ದೇವೆ. ಪೊಲೀಸ್ ಇಲಾಖೆಯಲ್ಲಿ 8ಸಾವಿರ ಹುದ್ದೆಗಳಿವೆ ಸರ್ಕಾರ ಆದೇಶದ ಬಳಿಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದರು.
ಇನ್ನು ತುಮಕೂರು ಜಿಲ್ಲೆಗೆ ಸದ್ಯಕ್ಕೆ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಇದೆ. ಗೃಹಬಳಕೆ ಸಿಲಿಂಡರ್ ಗೆ ತೊಂದರೆ ಇಲ್ಲ ಹೋಟೆಲ್ ನವರಿಗೆ ಒಂದೆಡು ದಿನ ಸಮಸ್ಯೆಯಾಗಬಹುದು. ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
Key words: Meeting, internal reservation, March 28, Minister, Parameshwar
The post ಮಾ.28ಕ್ಕೆ ಒಳಮೀಸಲಾತಿ ಬಗ್ಗೆ ಸಭೆ: ಅಂದು ಸಮಸ್ಯೆ ಬಗೆಹರಿಯುತ್ತೆ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




