ಮಂಡ್ಯ,ಮಾರ್ಚ್,17,2026 (www.justkannada.in): ಮಂಡ್ಯ ಜಿಲೆಯ ಮದ್ದೂರು ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ಭರ್ತಿ ಮಾಡಲು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 5 ಮತ್ತು 26(2) ಹಾಗೂ 12 (ಎ) (ಬಿ) ಮತ್ತು (ಸಿ)ರನ್ವಯ ಆಸಕ್ತಿಯುಳ್ಳ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಮಂಡ್ಯ ಜಿಲ್ಲಾಧಿಕಾರಿಗಳು, ಮದ್ದೂರು ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಸಂಬಂಧಿಸಿದಂತೆ ಸರ್ಕಾರದ ಅಧಿಸೂಚನೆ ಸಂ: ಲಾ-ಎಲ್ ಎ ಡಿ/504/2023, ದಿನಾಂಕ: 31/07/2024ರ ರೀತ್ಯಾ ಮದ್ದೂರು ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಯ ನೇಮಕಾತಿ ಅವಧಿಯು ದಿನಾಂಕ: 30/07/2025ಕ್ಕೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ 03 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಮದ್ದೂರು ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ಭರ್ತಿಗೊಳಿಸಲು ಉಲೆಖದನ್ವಯ ಉದ್ದೇಶಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾರ್ಚ್ 06 ರಿಂದ ಮಾರ್ಚ್ 20 ರ ಸಂಜೆ 05.00 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5ರನ್ವಯ ಕನಿಷ್ಠ 07 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ಪೂರೈಸಿರಬೇಕು.
ಹಾಗೂ ಸರ್ಕಾರಿ ಅಥವಾ ಅರೆ ಸರ್ಕಾರಿ/ ನಿಗಮ ಮಂಡಳಿಗಳಲ್ಲಿ ಯಾವುದೇ ಹುದ್ದೆಯನ್ನು ಪಡೆದಿರಬಾರದು.ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನು ಸಲಹೆಗಾರರಾಗಿ ನೇಮಕವಾಗಿರಬಾರದು.
ಆಸಕ್ತ ಅಭ್ಯರ್ಥಿಗಳು ಜನ್ಮ ದಿನಾಂಕ, ವಿದ್ಯಾರ್ಹತೆ, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ವಕೀಲಿ ವೃತ್ತಿ ಸಂಬಂಧಿಸಿದಂತೆ ದೃಢೀಕರಿಸಿದ ಪ್ರತಿಗಳೊಂದಿಗೆ ಹಾಗೂ ಅರ್ಜಿ ಸಲ್ಲಿಸುವ ಅರ್ಹತೆಗಳ ಕ್ರಮ ಸಂಖ್ಯೆ 2 ಮತ್ತು 3ಕ್ಕೆ ಸಂಬಂಧಿಸಿದಂತೆ ನೋಟರಿಯವರಿಂದ ಅಫಿಡವಿಟ್ ಒಳಗೊಂಡ ಬಯೋಡೇಟಾಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Applications, invited, Additional Government Advocate, post, Maddur
The post ಅಪರ ಸರ್ಕಾರಿ ವಕೀಲರ ಹುದ್ದೆ ಭರ್ತಿಗೆ ಅರ್ಜಿ ಅಹ್ವಾನ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




