18
March, 2026

A News 365Times Venture

18
Wednesday
March, 2026

A News 365Times Venture

 ‘ಸೌದೆ ಬೇಡ, ಗ್ಯಾಸ್ ಬೇಕು’ ಚಳವಳಿ: ಹೆದ್ದಾರಿ ತಡೆದು ಪ್ರತಿಭಟನೆಗೆ ವಾಟಾಳ್ ನಾಗರಾಜ್ ಕರೆ

Date:

ಬೆಂಗಳೂರು,ಮಾರ್ಚ್,17,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಯುದ್ದದಿಂದ ನಮ್ಮ ರಾಜ್ಯಕ್ಕಷ್ಟೆ ಅಲ್ಲ.  ಇಡೀ ವಿಶ್ವಕ್ಕೆ ಸಮಸ್ಯೆ ಆಗುತ್ತಿದೆ. ಗ್ಯಾಸ್ ಬಂದ್ ನಿಂದ ಹೋಟೆಲ್ ಮನೆಗಳಲ್ಲಿ ಸಮಸ್ಯೆಯಾಗುತ್ತಿದೆ. ಸೌದೆ ಬಳಕೆ ಮಾಡಿದರೆ ಮುಂದೆ ಅರಣ್ಯ ನಾಶವಾಗುತ್ತದೆ.  ಹೀಗಾಗಿ ಸೌದೆ ಬೇಡ ಗ್ಯಾಸ್ ಬೇಕು ಅಂತಾ ಚಳವಳಿ ಮಾಡುತ್ತೇವೆ. ಮಾರ್ಚ್ 20 ರಂದು ಅತ್ತಿಬೆಲೆ ಬಳಿ ಹೆದ್ದಾರಿ ತಡೆದು ಧರಣಿ ಮಾಡಲಾಗುತ್ತದೆ. ಮಾರ್ಚ್ 21 ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುತ್ತದೆ.  ಮಾರ್ಚ್ 23 ರಂದು ದೇವನಹಳ್ಳಿ ರಸ್ತೆ ಬಂದ್ ಮಾಡಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಶಾಲೆಗಳ ಮುಚ್ಚುವುದನ್ನ ಖಂಡಿಸಿ  ಕನ್ನಡ ಅಕ್ಷರ ಮೆರವಣಿಗೆ

ರಾಜ್ಯದಲ್ಲಿ ಕನ್ನಡ ಶಾಲೆಗಳನ್ನ ಮುಚ್ಚುತ್ತಿರುವುದುನ್ನು ಖಂಡಿಸಿ ಮಾರ್ಚ್ 23ರಿಂದ ಕನ್ನಡ ಅಕ್ಷರ ಮೆರವಣಿಗೆ ನಡೆಸಲು ತೀರ್ಮಾನ ಮಾಡಲಾಗಿದೆ.  ಬೆಂಗಳೂರಿನಿಂದ ಮೈಸೂರಿನವರೆಗೆ ಕನ್ನಡ ಅಕ್ಷರ ಮೆರವಣಿಗೆ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Key words: gas cylinder, Vatal Nagaraj, protest

The post  ‘ಸೌದೆ ಬೇಡ, ಗ್ಯಾಸ್ ಬೇಕು’ ಚಳವಳಿ: ಹೆದ್ದಾರಿ ತಡೆದು ಪ್ರತಿಭಟನೆಗೆ ವಾಟಾಳ್ ನಾಗರಾಜ್ ಕರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಆಗದಂತೆ ಕ್ರಮ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮಾರ್ಚ್,17,2026 (www.justkannada.in): ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಆಗದಂತೆ ಕ್ರಮ ವಹಿಸಲಾಗುತ್ತದೆ...

ಕೆ.ಆರ್.ಎಸ್ ರಸ್ತೆ ಗೋಕುಲ್ ಚಿತ್ರಮಂದಿರದಲ್ಲಿ ಅಗ್ನಿ ದುರಂತ: ವಾಚ್‌ಮನ್ ಸಜೀವ ದಹನ

  ಮೈಸೂರು, ಮಾ.೧೭,೨೦೨೬ : ಕೆ.ಆರ್.ಎಸ್ ರಸ್ತೆಯಲ್ಲಿನ ಸ್ಥಗಿತಗೊಂಡ ಗೋಕುಲ್ ಚಿತ್ರಮಂದಿರದ ಆವರಣದಲ್ಲಿ...

ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ ನೀಡಿ: ಸಿಎಂ ಸಿದ್ದರಾಮಯ್ಯಗೆ 16 ಶಾಸಕರಿಂದ ಮನವಿ

ಬೆಂಗಳೂರು,ಮಾರ್ಚ್,17,2026 (www.justkannada.in):  ಸಚಿವ ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ ನೀಡಿ...

ಅಪರ ಸರ್ಕಾರಿ ವಕೀಲರ ಹುದ್ದೆ ಭರ್ತಿಗೆ ಅರ್ಜಿ ಅಹ್ವಾನ..

ಮಂಡ್ಯ,ಮಾರ್ಚ್,17,2026 (www.justkannada.in):  ಮಂಡ್ಯ ಜಿಲೆಯ ಮದ್ದೂರು ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ...