ಬೆಂಗಳೂರು, ಮಾ.೨೧,೨೦೨೬ : ರಾಜ್ಯ ಸರ್ಕಾರವು ಜಾಹೀರಾತುಗಳ ಹಂಚಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ “ಕರ್ನಾಟಕ ಜಾಹೀರಾತು ನೀತಿ – 2026” ಅನ್ನು ಜಾರಿಗೆ ತರಲು ಮುಂದಾಗಿದೆ. ಈ ನೀತಿಯ ಮುಖ್ಯ ಉದ್ದೇಶವು ಜಾಹೀರಾತುಗಳ ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸಮಾನತೆ ಮತ್ತು ಜವಾಬ್ದಾರಿತ್ವವನ್ನು ಬಲಪಡಿಸುವುದಾಗಿದೆ.
ಈ ಸಂಬಂದ ೩೫ ಪುಟಗಳ ಮಾರ್ಗದರ್ಶಿಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಸರ್ಕಾರದ ಯೋಜನೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಜಾಹೀರಾತು ಪ್ರಮುಖ ಸಾಧನವಾಗಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಗಳ ನಡುವೆ ನ್ಯಾಯಸಮ್ಮತ ಹಂಚಿಕೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ನೂತನ ಜಾಹಿರಾತು ನೀತಿಯ ಪ್ರಮುಖ ಅಂಶಗಳು ಹೀಗಿವೆ…
ಸಮಿತಿ ಮೂಲಕ ಜಾಹೀರಾತು ಹಂಚಿಕೆ:
ನೀತಿ ಪ್ರಕಾರ, ಜಾಹೀರಾತು ಹಂಚಿಕೆಗಾಗಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆ, ಪ್ರಸಾರ ವ್ಯಾಪ್ತಿ ಮತ್ತು ಕಾರ್ಯಕ್ಷಮತೆಗಳನ್ನು ಆಧರಿಸಿ ಜಾಹೀರಾತುಗಳನ್ನು ವಿತರಣೆ ಮಾಡಲಿದೆ.

ಮಾಧ್ಯಮಗಳಿಗೆ ಸ್ಪಷ್ಟ ವರ್ಗೀಕರಣ :
ಹೊಸ ನೀತಿಯಲ್ಲಿ ಮಾಧ್ಯಮಗಳನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ:
ಮುದ್ರಣ ಮಾಧ್ಯಮ , ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮ.
ಪ್ರತಿ ವಿಭಾಗಕ್ಕೂ ಪ್ರತ್ಯೇಕ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ನೊಂದಣಿ, ಪ್ರಸಾರ ವ್ಯಾಪ್ತಿ, ಮಾರಾಟ ಪ್ರಮಾಣ (circulation) ಮೊದಲಾದ ಅಂಶಗಳು ಮುಖ್ಯವಾಗಿವೆ.
ಅರ್ಹತೆ ಮತ್ತು ನಿಯಂತ್ರಣ ಕಠಿಣ :
ಮಾಧ್ಯಮ ಸಂಸ್ಥೆಗಳು ಸರ್ಕಾರದ ಜಾಹೀರಾತು ಪಡೆಯಲು ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ತಪ್ಪು ಮಾಹಿತಿ ನೀಡುವುದು, ನಿಯಮ ಉಲ್ಲಂಘನೆ, ಅಥವಾ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಜಾಹೀರಾತುಗಳನ್ನು ಸ್ಥಗಿತಗೊಳಿಸುವ ಅಥವಾ ರದ್ದುಪಡಿಸುವ ಅವಕಾಶವೂ ಇದೆ.
ದರ ನಿಗದಿ ಮತ್ತು ವರ್ಗೀಕರಣ :
ಜಾಹೀರಾತುಗಳಿಗೆ ಸರ್ಕಾರ ನಿಗದಿಪಡಿಸಿದ ದರಗಳು ಅನ್ವಯವಾಗುತ್ತವೆ. ಮಾಧ್ಯಮಗಳ ವರ್ಗೀಕರಣದ ಆಧಾರದ ಮೇಲೆ ವಿಭಿನ್ನ ದರಗಳು ನಿಗದಿಯಾಗಿದ್ದು, ಪತ್ರಿಕೆಗಳ ಗಾತ್ರ, ಪ್ರಸಾರ ಮತ್ತು ವರ್ಗವನ್ನು ಪರಿಗಣಿಸಲಾಗುತ್ತದೆ.

ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಕ್ಕೂ ಅವಕಾಶ :
ಡಿಜಿಟಲ್ ಮಾಧ್ಯಮಗಳಿಗೂ ಈ ನೀತಿಯಲ್ಲಿ ಅವಕಾಶ ನೀಡಲಾಗಿದ್ದು, ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಸಹ ಸರ್ಕಾರದ ಜಾಹೀರಾತು ಪಡೆಯಲು ಅರ್ಹವಾಗಲಿವೆ. ಆದರೆ, ಇವುಗಳಿಗೆ ನಿಗದಿತ ಟ್ರಾಫಿಕ್ ಮತ್ತು ವಿಶ್ವಾಸಾರ್ಹತೆ ಮಾನದಂಡಗಳು ಅನಿವಾರ್ಯ.

ದುರುಪಯೋಗಕ್ಕೆ ಕಡಿವಾಣ :
ಜಾಹೀರಾತು ಹಂಚಿಕೆಯಲ್ಲಿ ಯಾವುದೇ ರೀತಿಯ ಅಕ್ರಮ, ಪಕ್ಷಪಾತ ಅಥವಾ ದುರುಪಯೋಗವನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
1) ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ : ಮಾಧ್ಯಮ ಸಂಸ್ಥೆಗಳು ತಮ್ಮ circulation / viewership / traffic ಬಗ್ಗೆ ತಪ್ಪು ಮಾಹಿತಿ ನೀಡಿದರೆ ಅಥವಾ ನಕಲಿ ದಾಖಲೆ ಸಲ್ಲಿಸಿದರೆ , ತಕ್ಷಣ ಅರ್ಹತೆ ರದ್ದು (blacklisting) ಮಾಡುವ ಅವಕಾಶ.
2) ಪಾರದರ್ಶಕ ಪರಿಶೀಲನಾ ವ್ಯವಸ್ಥೆ : ಸರ್ಕಾರ ಅಥವಾ ಸಂಬಂಧಿತ ಇಲಾಖೆ ನಿಯಮಿತ audit / verification ನಡೆಸುತ್ತದೆ. ABC (Audit Bureau of Circulation) / TRP / ವೆಬ್ ಅನಾಲಿಟಿಕ್ಸ್ ಪರಿಶೀಲನೆ ಡೇಟಾ ನಿಖರತೆ ಖಚಿತಪಡಿಸಲು ಕ್ರಮ.
3) ಜಾಹೀರಾತು ದುರುಪಯೋಗ ತಡೆ ; ಕೆಳಗಿನ ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ಸರ್ಕಾರದ ಜಾಹೀರಾತುಗಳನ್ನು ವಾಣಿಜ್ಯ ಉದ್ದೇಶಕ್ಕೆ ದುರುಪಯೋಗ ಮಾಡುವುದು, ಪ್ರಕಟಿಸದೆ ಹಣ ಪಡೆದುಕೊಳ್ಳುವುದು, ನಿಗದಿತ ಗಾತ್ರ / ಸ್ಥಾನ ಪಾಲಿಸದಿರುವುದು, ಪಾವತಿ ಸ್ಥಗಿತ + ಮುಂದಿನ ಜಾಹೀರಾತು ನಿಷೇಧ.
4) ನಿಯಮ ಉಲ್ಲಂಘನೆಗೆ ಶಿಕ್ಷೆಗಳು : ಮೊದಲ ಬಾರಿ → ಎಚ್ಚರಿಕೆ , ಪುನರಾವರ್ತನೆ → ತಾತ್ಕಾಲಿಕ ನಿಷೇಧ , ಗಂಭೀರ ಉಲ್ಲಂಘನೆ → ಶಾಶ್ವತ ರದ್ದು.
5) ಸಮಿತಿ ಮೇಲ್ವಿಚಾರಣೆ : ಜಾಹೀರಾತು ಹಂಚಿಕೆ ಸಮಿತಿ, ಎಲ್ಲ ಹಂಚಿಕೆಗಳ ಮೇಲ್ವಿಚಾರಣೆ ಮಾಡುತ್ತದೆ. ದೂರುಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತದೆ.
6) ದೂರು ಪರಿಹಾರ ವ್ಯವಸ್ಥೆ : ಮಾಧ್ಯಮ ಸಂಸ್ಥೆಗಳು ಅಥವಾ ಸಾರ್ವಜನಿಕರು ದುರುಪಯೋಗದ ಬಗ್ಗೆ ದೂರು ನೀಡಬಹುದು. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.
7) ಡಿಜಿಟಲ್ ಮಾಧ್ಯಮ ನಿಯಂತ್ರಣ : ನಕಲಿ ವೆಬ್‌ಸೈಟ್ / ಬಾಟ್ ಟ್ರಾಫಿಕ್ ಬಳಕೆ ಕಟ್ಟುನಿಟ್ಟಿನ ಪರಿಶೀಲನೆ. Google Analytics / third-party verification ಅನಿವಾರ್ಯ.

ಸಾರಾಂಶ :
ದುರುಪಯೋಗವನ್ನು ತಡೆಯಲು ಸರ್ಕಾರವು ಕಠಿಣ ಪರಿಶೀಲನೆ, ಪಾರದರ್ಶಕ ವ್ಯವಸ್ಥೆ ಮತ್ತು ದಂಡಾತ್ಮಕ ಕ್ರಮಗಳನ್ನು ಜಾರಿಗೆ ತರುತ್ತಿದೆ. ಇದರ ಮೂಲಕ ಜಾಹೀರಾತು ಹಂಚಿಕೆಯಲ್ಲಿ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಒಟ್ಟಿನಲ್ಲಿ, “ಕರ್ನಾಟಕ ಜಾಹೀರಾತು ನೀತಿ – 2026” ಮಾಧ್ಯಮ ಕ್ಷೇತ್ರದಲ್ಲಿ ಸಮತೋಲನ, ಪಾರದರ್ಶಕತೆ ಮತ್ತು ಗುಣಮಟ್ಟದ ಪ್ರೋತ್ಸಾಹವನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.
Key words: The State Government, moving forward, implement the, “Karnataka Advertisement Policy – 2026”

New “Advertisement Policy–2026”: Opportunity extended to digital and social media; emphasis on transparency and equitable distribution.
SUMMARY:
The State Government is moving forward to implement the “Karnataka Advertisement Policy – 2026” concerning the allocation and regulation of advertisements. The main objective of this policy is to strengthen transparency, fairness, and accountability in the advertisement distribution process.

In this regard, a 35-page guideline document has been prepared, which has received approval from the Cabinet. Advertisements serve as an important tool to effectively communicate government schemes and public interest information to people, and accordingly, new guidelines have been formulated to ensure fair distribution among media organizations.
The post ಹೊಸ “ಜಾಹೀರಾತು ನೀತಿ–2026” : ಡಿಜಿಟಲ್ – ಸಾಮಾಜಿಕ ಮಾಧ್ಯಮಕ್ಕೂ ಅವಕಾಶ ; ಪಾರದರ್ಶಕತೆ, ಸಮಾನ ಹಂಚಿಕೆಗೇ ಒತ್ತು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




