27
March, 2026

A News 365Times Venture

27
Friday
March, 2026

A News 365Times Venture

ದುಃಖವನ್ನು ಮೀರಿದ ಕರ್ತವ್ಯನಿಷ್ಠೆ: ಪತಿಯ ಮರಣದ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಾಲೆಗೆ ಧಾವಿಸಿದ ಶಿಕ್ಷಕಿ.

Date:

 

ಮೈಸೂರು, March.26,2026: ಮಾನವೀಯತೆ, ಕರ್ತವ್ಯನಿಷ್ಠೆ ಮತ್ತು ವೃತ್ತಿ ಬದ್ಧತೆಯ ಅಪರೂಪದ ಉದಾಹರಣೆಯಾಗಿ ಜಿಲ್ಲೆಯ ಸರಕಾರಿ ಪ್ರೌಢಶಾಲೆ ಜಿ.ಬಿ. ಸರಗೂರಿನ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರು ಹೊರಹೊಮ್ಮಿದ್ದಾರೆ.

ಜ್ಯೋತಿ ಅವರ ಪತಿ ಕಿರಣ್ ಕುಮಾರ್ (47) ಅವರು ಮಾರ್ಚ್ 25, 2026ರಂದು ನಿಧನರಾಗಿದ್ದಾರೆ. ಕುಟುಂಬದ ಮೇಲೆ ದುಃಖದ ನೆರಳು ಆವರಿಸಿರುವ ಈ ಸಂಕಷ್ಟದ ಸಮಯದಲ್ಲಿಯೇ, ತಮ್ಮ ವೈಯಕ್ತಿಕ ನೋವನ್ನು ಮರೆತು, ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯವೆಂದು ಅವರು ತೋರಿದ ದೃಢತೆ ಗಮನಾರ್ಹವಾಗಿದೆ.

ಮಾರ್ಚ್ 28ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ಪತಿಯ ಮರಣದ ಮರು ದಿನವೇ ಶಾಲೆಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ನಡೆಸುತ್ತಿರುವುದು ಅವರ ಅಸಾಮಾನ್ಯ ಸಮರ್ಪಣೆಯನ್ನು ತೋರಿಸುತ್ತದೆ. ಗಣಿತ ಶಿಕ್ಷಕಿಯಾಗಿರುವ ಜ್ಯೋತಿ ಅವರು, “ಪ್ರತಿ ವಿದ್ಯಾರ್ಥಿಯೂ ತೇರ್ಗಡೆಯಾಗಬೇಕು” ಎಂಬ ದೃಢ ಸಂಕಲ್ಪದೊಂದಿಗೆ ತರಗತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಅವರ ಈ ಕಾರ್ಯಕ್ಕೆ ಪೋಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಹಾಗೂ ಸಹೋದ್ಯೋಗಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದುಃಖದ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಜ್ಯೋತಿ ಅವರ ನಿಷ್ಠೆ, ಸಮಾಜಕ್ಕೆ ಪ್ರೇರಣೆಯಾಗಿ ಪರಿಣಮಿಸಿದೆ ಎಂದು ಎಚ್.ಡಿ.ಕೋಟೆ ತಾಲೋಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.‌ ಎನ್.‌ ರಾಜು ಪ್ರಶಂಸಿಸಿದ್ದಾರೆ.

“ಶಿಕ್ಷಕತ್ವವೆಂದರೆ ಕೇವಲ ವೃತ್ತಿಯಲ್ಲ, ಅದು ಒಂದು ಹೊಣೆಗಾರಿಕೆ” ಎಂಬುದನ್ನು ಜ್ಯೋತಿ ಅವರು ತಮ್ಮ ನಡೆ-ನುಡಿಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Key words: Teacher’s Dedication, Amid Personal Loss, Wins Hearts, Saraguru, dedication, Jyothi, in-charge headmistress,

SUMMARY:

Teacher’s Dedication Amid Personal Loss Wins Hearts

Saraguru: In a remarkable act of dedication, Jyothi, in-charge headmistress of Government High School, continued her duty despite a personal tragedy.

Her husband, Kiran Kumar (47), passed away on March 25, 2026. Yet, with SSLC Maths exam scheduled on March 28, she returned to school the very next day to guide students. A Maths teacher, Jyothi prioritized her students’ future over her grief, ensuring they are well-prepared to pass. Her commitment has earned widespread praise from parents, students, alumni, and the community, who hail her as a true example of duty and humanity.

Her efforts have drawn widespread appreciation from parents, students, alumni, and colleagues. Despite her personal grief, Jyothi’s decision to prioritize her duty has become an inspiration to society, said H.D. Kote Taluk Block Education Officer S.N. Raju.

He further praised her, stating that Jyothi has proved through her actions that “teaching is not just a profession, but a responsibility.”

The post ದುಃಖವನ್ನು ಮೀರಿದ ಕರ್ತವ್ಯನಿಷ್ಠೆ: ಪತಿಯ ಮರಣದ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಾಲೆಗೆ ಧಾವಿಸಿದ ಶಿಕ್ಷಕಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾನು ಟೀಕೆಗಳನ್ನ ಸ್ವಾಗತಿಸುವವನು: ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,26,2026 (www.justkannada.in): ನಾನು ಯಾವತ್ತಿಗೂ  ಟೀಕೆಗಳನ್ನು ಸ್ವಾಗತ ಮಾಡುವವನು.  ಟಿಖೆ ಮಾಡಿದರು...

ಉಪಚುನಾವಣೆ: ’ಕೈ’ ಸಂಧಾನ ಸಕ್ಸಸ್: ಮೂವರು ನಾಮಪತ್ರ ವಾಪಸ್

ಬಾಗಲಕೋಟೆ,ಮಾರ್ಚ್,26,2026 (www.justkannada.in):  ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದು...

ಡಿಕೆ ಶಿವಕುಮಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ದೊಡ್ಡತನ ತೋರಬೇಕಿತ್ತು- ಶಾಸಕ ಮುನಿರತ್ನ ಕಿಡಿ

ಬೆಂಗಳೂರು,ಮಾರ್ಚ್,26,2026 (www.justkannada.in):  ಇಂದು ವಿಧಾನಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ದಿ ಬಗ್ಗೆ ಉತ್ತರ...

ನಾಳೆ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ಮೀಟಿಂಗ್

ನವದೆಹಲಿ,ಮಾರ್ಚ್,26,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು...