25
May, 2026

A News 365Times Venture

25
Monday
May, 2026

A News 365Times Venture

ಇಂದು ಮತ್ತು ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

Date:

ಬೆಂಗಳೂರು,ಮಾರ್ಚ್,28,2026 (www.justkannada.in):  ಸಿಎಂ ಸಿದ್ದರಾಮಯ್ಯ ಇಂದು ಮತ್ತು ನಾಳೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಸಂಜೆ 4 ಗಂಟೆಗೆ ವಿಶ್ವೇಶ್ವರ ನಗರದಲ್ಲಿನ ಜಿ.ಸಿ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನೂತನ  ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 5 ಗಂಟೆಗೆ ಪ್ರಜಾವಾಣಿ ಸಾಧಕಿಯರು-2026 ವತಿಯಿಂದ ಅವಳ ಸಾಧನೆ ಸಂಭ್ರಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ ಸಿದ್ದರಾಮಯ್ಯ ನಾಳೆ ಅಂದರೆ ಮಾ.29 ರಂದು ಬೆಳಿಗ್ಗೆ 8 ಗಂಟೆಗೆ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಘಟಕ 46ನೇ ತಂಡದ ಪೊಲೀಸ್ ಉಪನಿರೀಕ್ಷಕರು(ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬೆಳಿಗ್ಗೆ 10.30ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ತೆರಳುವರು.

Key words: CM Siddaramaiah, tour, Mysuru district

The post ಇಂದು ಮತ್ತು ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್‌ ಸ್ಥಾಪನೆ: ಟ್ರಾನ್ಸ್‌ ಫಾರ್ಮರ್‌ ಗಳ ತುರ್ತು ನಿರ್ವಹಣೆಗೆ ‘ಸೆಸ್ಕ್‌’ ಸಜ್ಜು

ಮೈಸೂರು, ಮೇ, 25, 2026 (www.justkannada.in):  ಗ್ರಾಹಕರಿಗೆ ಅಡಚಣೆರಹಿತ ವಿದ್ಯುತ್‌ ಪೂರೈಕೆ...

ಸಿಎಂ ಸಿದ್ದು ಸು”ಭದ್ರ”; ಡಿಕೆಶಿಗೆ “ಗೃಹ”, ಡಿಕೆಸುಗೆ “ರಾಜ್ಯಸಭಾ” ಸ್ಥಾನ..? ಹೈಕಮಾಂಡ್‌ ತಂತ್ರ .!

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆಗಳು ಜೋರಾಗಿರುವ...

2026ನೇ ಸಾಲಿನ ‘ಪದ್ಮ ಪ್ರಶಸ್ತಿ’ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ,ಮೇ,25,2026 (www.justkannada.in): ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಇಂದು ರಾಷ್ಟ್ರಪತಿ...

ಸಚಿವ ಸ್ಥಾನ ತ್ಯಾಗ ವಿಚಾರ: ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ- ಸಚಿವ ಮುನಿಯಪ್ಪ

ಬೆಂಗಳೂರು,ಮೇ,25,2026 (www.justkannada.in): ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರ ಸಂಬಂಧ ಹೈಕಮಾಂಡ್...