6
April, 2026

A News 365Times Venture

6
Monday
April, 2026

A News 365Times Venture

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರು ಪರಿಶೀಲನೆ, ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ಆದೇಶ

Date:

ಬೆಂಗಳೂರು, ಏಪ್ರಿಲ್, 6,2026 (www.justkannada.in): ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ 279 ಅಂಚೆ ಮತಪತ್ರಗಳನ್ನು 2 ವಾರದಲ್ಲಿ ಮರುಪರಿಶೀಲನೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರು ಸಲ್ಲಿಸಿದ್ದ  ತಕರಾರು ಅರ್ಜಿ ವಿಚಾರಣೆ ನಡೆಸಿದ  ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಪೀಠವು, ಶೃಂಗೇರಿ ವಿಧಾನಸಭಾ ಕ್ಷೇತ್ರದ  279 ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಆದೇಶ ಹೊರಡಿಸಿದ್ದು, 2 ವಾರದಲ್ಲಿ ಮರುಪರಿಶೀಲನೆ ನಡೆಸಿ  ಫಲಿತಾಂಶ ಪ್ರಕಟಿಸಲು ನಿರ್ದೇಶನ ನೀಡಿದೆ.

ಈ ನಡುವೆ ಇದೇ ವೇಳೆ ಆದೇಶಕ್ಕೆ ತಡೆ ನೀಡುವಂತೆ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಪರ ವಕೀಲರು ಮನವಿ ಮಾಡಿದರು. ಸುಪ್ರೀಂಕೋರ್ಟ್ ​ಗೆ ಮೇಲ್ಮನವಿ ಸಲ್ಲಿಸಬೇಕಿರುವ ಕಾರಣಕ್ಕೆ ತಡೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಆದರೆ, ಇನ್ನೊಂದೆಡೆ ಡಿ.ಎನ್.ಜೀವರಾಜ್ ಪರ ವಕೀಲೆ ವಂದನಾ.ಪಿ.ಎಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠ, ಅಂತಿಮವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ತನ್ನದೇ ತೀರ್ಪಿಗೆ 2 ವಾರ ಮಧ್ಯಂತರ ತಡೆ ನೀಡಿದೆ.

Key words: High Court, orders, re-verification, Sringeri, assembly constituency

The post ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರು ಪರಿಶೀಲನೆ, ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸದ್ಯಕ್ಕೆ  ಬಸ್ ಪ್ರಯಾಣದ ಟಿಕೆಟ್ ದರ  ಏರಿಕೆ ಇಲ್ಲ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಏಪ್ರಿಲ್,6,2026 (www.justkannada.in): ರಾಜ್ಯದಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಅಭಾವದಿಂದ ಆಟೋ...

ಉಪಚುನಾವಣೆಯಲ್ಲಿ ನೂರಕ್ಕೆ ನೂರು ಎರಡೂ ಕ್ಷೇತ್ರದಲ್ಲಿ ಗೆಲ್ತೇವೆ- ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಏಪ್ರಿಲ್,6,2026 (www,justkannada.in): ಉಪಚುನಾವಣೆಯಲ್ಲಿ ನೂರಕ್ಕೆ ನೂರು ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು...

KSOU ರಿಜಿಸ್ಟ್ರಾರ್ ನೇಮಕಾತಿ ಆದೇಶ ಹಿಂಪಡೆದ ಸರ್ಕಾರ — ನಿಗೂಢ ನಿರ್ಧಾರಕ್ಕೆ ಪ್ರಶ್ನೆಗಳ ಮಳೆ

  ಮೈಸೂರು, April.06,2026: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ರಿಜಿಸ್ಟ್ರಾರ್ ಹುದ್ದೆಗೆ...

ಏ. 19 ರಿಂದ ಅಗ್ನಿವೀರ್ ರ‍್ಯಾಲಿ, 6235 ಅಭ್ಯರ್ಥಿಗಳು ಭಾಗಿ: ಕರ್ನಲ್ ವಿವೇಕ್ ಜಮದರ್

ಮೈಸೂರು, ಏಪ್ರಿಲ್, 6,2026 (www.justkannada.in): ಜಿಲ್ಲೆಯ‌ ನಜರ್ ಬಾದ್ ನಲ್ಲಿರುವ ಚಾಮುಂಡಿ...