15
April, 2026

A News 365Times Venture

15
Wednesday
April, 2026

A News 365Times Venture

ಹೆಚ್‌ ಡಿಕೆ ಜಾರಿಗೆ ತಂದಿದ್ದ ಗ್ರಾಮ ವಾಸ್ತವ್ಯ ಇಡೀ ದೇಶಕ್ಕೆ ಮಾದರಿ- ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು

Date:

ಬೆಂಗಳೂರು,ಏಪ್ರಿಲ್,11,2026 (www.justkannada.in):  ಹೆಚ್.ಡಿ. ಕುಮಾರಸ್ವಾಮಿ ಅವರು  ಜಾರಿಗೆ ತಂದಿದ್ದ ಗ್ರಾಮ ವಾಸ್ತವ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಿಳಿಸಿದರು.

ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಹೆಚ್ ಡಿ ದೇವೇಗೌಡರು, ಇದು ಕೇವಲ ಗ್ರಾಮ ವಾಸ್ತವ್ಯ ಮಾತ್ರವಲ್ಲ. ರೈತರ ಸಮಸ್ಯೆ ಆಲಿಸಿ, ರೈತರಿಗೆ ಆರ್ಥಿಕ ನೆರವು ಕೊಡುವ ಕೆಲಸ ಮಾಡಿದ್ದಾರೆ ಎಂದರು.

ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಮಹಿಳೆಯರಿಗೆ ಮೊದಲು ಮೀಸಲಾತಿ ನೀಡಿದ್ದು ಕರ್ನಾಟಕ ಸರ್ಕಾರ.  ಲೀಲಾವತಿ ಆರ್ ಪ್ರಸಾದ್ ಮೊದಲ ಬಾರಿಗೆ ಸಚಿವರಾಗಿದ್ದರು.  ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಾ ಪಕ್ಷಗಳು ಇದನ್ನು ಅಳವಡಿಸಿಕೊಳ್ಳಿಎಂದು ದೆಹಲಿಗೆ ಹೋಗಿ ಎಲ್ಲಾ ಪಕ್ಷಗಳಿಗೆ ಮನವಿ ಮಾಡಲಾಗಿತ್ತು.   ಅದರ ಫಲವಗಿ 1995-96 ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ಅಳವಡಿಕೆ ಮಾಡಲಾಗಿತ್ತು.  ಆಗ  ಅಟಲ್ ಬಿಹಾರಿ ವಾಜಪೇಯಿ ಅವರು 13 ದಿನ ಪ್ರಧಾನಿ ಆಗಿದ್ದರು ಅದಾದ ನಂತರ   ಪಕ್ಷಗಳ  ಒಕ್ಕೂಟದಿಂದ ಪ್ರಧಾನಿಯಾಗಿದ್ದೆ ಅಂದಿನ ಸ್ಪೀಕರ್ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ಮಾಡಿದರು. ಬಿಜೆಪಿಯ ಉಮಾಭಾರತಿ  ಉತ್ತರ ಪ್ರದೇಶದ ಸಿಎಂ ಆದರು. ಈಗ ಪ್ರಧಾನಿ ಮೋದಿ  ಮಹಿಳಾ ಮೀಸಳಾತಿ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ.  ಈ ಬಗ್ಗೆ ಚರ್ಚೆಗೆ 3 ದಿನ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದರು.

Key words: JDS, HDK, model, country, Former PM, HD Deve Gowda

The post ಹೆಚ್‌ ಡಿಕೆ ಜಾರಿಗೆ ತಂದಿದ್ದ ಗ್ರಾಮ ವಾಸ್ತವ್ಯ ಇಡೀ ದೇಶಕ್ಕೆ ಮಾದರಿ- ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ: MLC ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು, ಏಪ್ರಿಲ್,15,2026 (www.justkannada.in): ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಜನರಿಗೆ ಕುಡಿಯುವ...

ಚನ್ನಪಟ್ಟಣ ಕ್ಷೇತ್ರಕ್ಕೆ ಚುನಾವಣಾ ಜ್ವರ ಕ್ರಿಯೇಟ್ ಮಾಢುವುದು ಬೇಡ-ಹೆಚ್ ಡಿಕೆಗೆ ಯೋಗೇಶ್ವರ್ ಟಾಂಗ್

ರಾಮನಗರ,ಏಪ್ರಿಲ್,15,2026(www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಮತ್ತೆ ಕೇಂದ್ರ ಸಚಿವ...

ಯೋಗೀಶ್ ಗೌಡ ಕೊಲೆ ಕೇಸ್: ಶಾಸಕ ವಿನಯ್ ಕುಲಕರ್ಣಿ ಅಪರಾಧಿ- ಕೋರ್ಟ್ ತೀರ್ಪು ಪ್ರಕಟ

ಬೆಂಗಳೂರು,ಏಪ್ರಿಲ್,15,2026 (www.justkannada.in):  ಬಿಜೆಪಿ ಮುಖಂಡ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್...

ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಏಪ್ರಿಲ್,15,2026 (www.justkannada.in): ಸಚಿವ ಸಂಪುಟ ಪುನಾರಚನೆ ಮಾಡಿ ಸಚಿವ ಸ್ಥಾನ ನೀಡುವಂತೆ...