8
October, 2026

A News 365Times Venture

8
Thursday
October, 2026

A News 365Times Venture

ನಮ್ಮದು ಕುಟುಂಬ ರಾಜಕಾರಣ ಅಲ್ಲ- ಹೆಚ್.ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು

Date:

ಮೈಸೂರು,ಏಪ್ರಿಲ್ ,15,2026 (www.justkannada.in): ತಮ್ಮ ವಿರುದ್ದ ಕುಟುಂಬ ರಾಜಕಾರಣ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ನಾನು ಎಂಎಲ್ ಸಿ ಆಗಿರುವುದು ಕುಟುಂಬ ರಾಜಕಾರಣಕ್ಕಾಗಿ ಅಲ್ಲ. ತಂದೆಯ ರಾಜಕೀಯ ಜೀವನ ಮುಂದುವರಿಕೆ ಭಾಗವಾಗಿ ಎಂಎಲ್ ಸಿ ಆದೆ. ನಮ್ಮ ಕ್ಷೇತ್ರದ ಜನರ ರಕ್ಣಣೆಗೆ  ಎಂಎಲ್ ಸಿ ಆಗಿದ್ದೇನೆ.  ನಮ್ಮದು ಕುಟುಂಬ ರಾಜಕಾರಣ  ಅಲ್ಲ. ನಮ್ಮ ತಂದೆ ಏನು ನನ್ನನ್ನು ಪಕ್ಷದ ಅಧ್ಯಕ್ಷ ಮಾಡಿದ್ದಾರಾ?  ಮಕ್ಕಳನ್ನೇ ಪಕ್ಷದ ಅಧ್ಯಕ್ಷ ಮಾಡುವುದು, ಮಕ್ಕಳನ್ನೇ ಶಾಸಕ, ಸಂಸದ ಮಾಡುವುದು ಕುಟುಂಬ ರಾಜಕಾರಣ. ಆದರೆ ನಮ್ಮದು ಕುಟುಂಬ ರಾಜಕಾರಣ  ಅಲ್ಲ.  ನಮ್ಮ ಅಣ್ಣ ಇರದ ಕಾರಣ ನಾನು ರಾಜಕೀಯಕ್ಕೆ ಬಂದೆ ಎಂದರು.

ನಮ್ಮ ತಂದೆಯೇ 5 ವರ್ಷ ಸಿಎಂ ಎಂದು ಪುನರುಚ್ಚರಿಸಿದ ಯತೀಂದ್ರ ಸಿದ್ದರಾಮಯ್ಯ,  ಖುದ್ದು ಸಿಎಂ ಅಧಿವೇಶನದಲ್ಲಿ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ.  ಸಿಎಂ ಖುದ್ದಾಗಿ ಹೇಳಿದ ಮೇಲೆ ಮತ್ತೆ ಚರ್ಚೆ ಇಲ್ಲ. ಸಚಿವ ಸಂಪುಟ ಪುನಾರಚನೆಗಾಗಿ ಶಾಸಕರು ದೆಹಲಿಗೆ ಹೋಗಿದ್ದಾರೆ. ಶಾಸಕರ ದೆಹಲಿ ಪ್ರವಾಸಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧವಿಲ್ಲ ಸರ್ಕಾರವೂ ಭದ್ರ ಸಿಎಂ ಸ್ಥಾನವೂ ಭದ್ರ ಎಂದು ನುಡಿದರು.

Key words:   not, family politics, Yathindra Siddaramaiah, HDK

The post ನಮ್ಮದು ಕುಟುಂಬ ರಾಜಕಾರಣ ಅಲ್ಲ- ಹೆಚ್.ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ? ಎಚ್ಚರಿಕೆಯಿಂದಿರುವ ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಅಕ್ಟೋಬರ್,7,2026 (www.justkannada.in): ರಾಜ್ಯ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮೂಲಕ...

ನಿಸ್ವಾರ್ಥ ಸೇವೆಯೇ ನನ್ನ ಏಕೈಕ ಧ್ಯೇಯ: ಅರ್ಥವ್ಯವಸ್ಥೆಯಲ್ಲಿ ವಿಶ್ವದ 3ರಲ್ಲಿ ಭಾರತ ಇರಲಿದೆ –ಪ್ರಧಾನಿ ಮೋದಿ

ನವದೆಹಲಿ,ಅಕ್ಟೋಬರ್,7,2026 (www.justkannada.in): ದೇಶಕ್ಕಾಗಿ ನಿಸ್ವಾರ್ಥ ಸೇವೆಯೇ ನನ್ನ ಜೀವನದ ಏಕೈಕ ಧ್ಯೇಯ....

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸಿಎಂ, ಡಿಸಿಎಂರಿಂದ ಸನ್ಮಾನ: ನಗದು ಬಹುಮಾನ ಮೊತ್ತ ಹೆಚ್ಚಳ

ಬೆಂಗಳೂರು, ಅಕ್ಟೋಬರ್, 6,2026 (www.justkannada.in): ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದ...

ಮೈಸೂರು: ವೈಯಕ್ತಿಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ – ಪಾಲಿಕೆ ಸಿಬ್ಬಂದಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

  ಮೈಸೂರು, OCT.06,2026: ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ...