17
April, 2026

A News 365Times Venture

17
Friday
April, 2026

A News 365Times Venture

ಬ್ರೇಕಿಂಗ್ ನ್ಯೂಸ್ | UOM ಕುಲಪತಿ ಪ್ರೊ.ಲೋಕನಾಥ್  ವಿರುದ್ಧ FIR ದಾಖಲಿಸಲು ಸೂಚನೆ!

Date:

 

ಮೈಸೂರು, ಏ.೧೭, ೨೦೨೬ : ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ, ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ, ಕುಲಪತಿ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ FIR ದಾಖಲಿಸಲು ಆಯೋಗ ಆದೇಶಿಸಿದೆ. ಏ.16 ರಂದು ಈ ಸಂಬಂಧ ಜಯಲಕ್ಷ್ಮಿ ಪುರಂ ಠಾಣಾ ಪೊಲೀಸರಿಗೆ ಪತ್ರ ಬರೆಯಲಾಗಿದೆ.

ಏನಿದು ಘಟನೆ:

ಅರ್ಜಿದಾರ ಕಾರ್ತಿಕ್ ಜಿ.ಎನ್ ನೀಡಿದ ದೂರಿನ ಆಧಾರದ ಮೇಲೆ, ಕುಲಪತಿ  ಮತ್ತು ಪ್ರಾಧ್ಯಾಪಕರು ವಿದ್ಯಾರ್ಥಿಗೆ ಜಾತಿ ಆಧಾರಿತ ಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನ್ಯಾಯ ಕೇಳಲು ಹೋದ ವಿದ್ಯಾರ್ಥಿಗೆ ಅವಮಾನಕಾರಿ ವರ್ತನೆ, ಮಾನಸಿಕ ಹಿಂಸೆ, ಜೊತೆಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ಆರೋಪಗಳು ಕೂಡ ದಾಖಲಾಗಿದೆ.

ದೂರು ನೀಡಲು ಹೋದಾಗ ಪೊಲೀಸರು ಸಹ ಸರಿಯಾದ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪ ಕೂಡ ಹೊರಬಂದಿದೆ.

 ಆಯೋಗದ ಕಠಿಣ ಆದೇಶ:

ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸೇರಿದಂತೆ  ಡಾ. ಎಂ. ಸುರೇಶ್ ಬೆಂಜಮೀನ್, ಪ್ರೊ. ಆರ್.ಎಸ್. ಉಮಾಕಾಂತ್ ಹಾಗೂ ಅಶ್ವಥ್ ಪ್ರಸಾದ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ ಅಡಿಯಲ್ಲಿ ತಕ್ಷಣ FIR ದಾಖಲಿಸಲು ಜಯಲಕ್ಷ್ಮೀಪುರಂ ಪೊಲೀಸರಿಗೆ ಸೂಚನೆ ನೀಡಲಾಗಿದೆ.

FIR ಪ್ರತಿಯನ್ನು ಕೂಡಲೇ ಆಯೋಗಕ್ಕೆ ಸಲ್ಲಿಸಲು ಪತ್ರದಲ್ಲಿ ಸೂಚನೆ ನೀಡಲಾಗಿದೆ.

 ಶಿಕ್ಷಣ ಸಂಸ್ಥೆಯಲ್ಲೇ ಜಾತಿ ಹಿಂಸೆ?

ಈ ಘಟನೆ ರಾಜ್ಯದ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಅಧಿಕಾರಿಗಳ ವಿರುದ್ಧ ಮುಂದಿನ ಕಾನೂನು ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.

Key words: The Karnataka State Commission for Scheduled Castes & Scheduled Tribes, FIR ,  Vice-Chancellor, Mysore, harassment, Dalit student.

SUMMARY: 

🔴 Breaking News | Mysuru FIR ordered against Vice-Chancellor

Mysuru: The Karnataka State Commission for Scheduled Castes & Scheduled Tribes has directed police to file an FIR against the Vice-Chancellor and other university officials over alleged caste-based harassment of a Dalit student.

👉 Based on a complaint by Karthik G.N, officials allegedly subjected him to mental harassment and prevented him from writing exams.

👉 The Commission has ordered action under the SC/ST (Prevention of Atrocities) Act.

📌 Police have been asked to register the FIR immediately and submit a report.

#BreakingNews #Mysuru #SCSTAct #DalitIssue

The post ಬ್ರೇಕಿಂಗ್ ನ್ಯೂಸ್ | UOM ಕುಲಪತಿ ಪ್ರೊ.ಲೋಕನಾಥ್  ವಿರುದ್ಧ FIR ದಾಖಲಿಸಲು ಸೂಚನೆ! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು TO ಹೈದರಾಬಾದ್ : ಅತಿ ಶೀಘ್ರದಲ್ಲೇ ಮತ್ತೊಂದು ವಿಮಾನ ಸಂಚಾರ ಆರಂಭ

ಮೈಸೂರು, ಏಪ್ರಿಲ್,16,2026 (www.justkannada.in):  ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಾಂಸ್ಕೃತಿಕ ರಾಜಧಾನಿಯ ನಾಗರಿಕರಿಗೆ...

ರೈತರಿಗೆ ಅಗತ್ಯವಿಲ್ಲದ ರಸಗೊಬ್ಬರ ಖರೀದಿಸುವಂತೆ ಒತ್ತಾಯಿಸಿದ್ರೆ ಕ್ರಮ- ಡಿಸಿ ಲಕ್ಷ್ಮಿಕಾಂತ ರೆಡ್ಡಿ ವಾರ್ನಿಂಗ್

ಮೈಸೂರು, ಏಪ್ರಿಲ್,17,2026 (www.justkannada.in(www.justkannada.in): ರಸಗೊಬ್ಬರ ಮಾರಾಟಗಾರರು ರೈತರು ಯುರಿಯಾ ಸೇರಿದಂತೆ  ಅಗತ್ಯ...

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏ.18 ರಂದು ವಿಶೇಷ ಕಾರ್ಯಕ್ರಮ

ಬೆಂಗಳೂರು, ಏಪ್ರಿಲ್ ,16 ,2026 (www.justkannada.in): ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತ...

ಮೈಸೂರು: ಮನೆಯೊಳಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಚಿರತೆ ಸೆರೆ

ಮೈಸೂರು, ಏಪ್ರಿಲ್, 17,2026 (www.justkannada.in):  ಮೈಸೂರಿನ ಸಿದ್ದಾರ್ಥನಗರದ ಮನೆಯೊಂದರಲ್ಲಿ ಗಂಡು ಚಿರತೆಯೊಂದು...