ಬೆಂಗಳೂರು,ಏಪ್ರಿಲ್,29,2026 (www.justkannada.in): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಸಂತೋಷ. ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಿಎಂ ವಿಚಾರವಾಗಿ ಹೆಚ್ಚು ಮಾಹಿತಿ ನಮಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯದ ಎಲ್ಲಾ ವಿಚಾರ ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರೋದೇ ಸೌಭಾಗ್ಯ. ಖರ್ಗೆಗೆ ರಾಜ್ಯದ ರಾಜಕಾರಣ ಗೊತ್ತಿದೆ. ಅನುಭವ ಎಲ್ಲವೂ ಇದೆ. ಖರ್ಗೆ ಸಿಎಂ ಆದರೆ ಬಹಳ ಸಂತೋಷ ಸ್ವಾಗತ ಮಾಡುತ್ತೇವೆ ಎಂದರು.
56 ಸಾವಿರ ಹುದ್ದೆಗಳ ನೇಮಕಾತಿ ಆಗಲಿದೆ
ಒಳಮೀಸಲಾತಿ ಅಧಿಸೂಚನೆ ಪ್ರಕಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ತೀರ್ಮಾನಕ್ಕೆ ತಕ್ಕಂತೆ ಅಧಿಸೂಚನೆ ಬಂದಿದೆ. ಖಾಲಿಯಿರುವ 56 ಸಾವಿರ ಹುದ್ದೆಗಳ ನೇಮಕಾತಿ ಆಗಲಿದೆ ನಮ್ಮ ಇಲಾಖೆಯಲ್ಲೂ ಖಾಲಿ ಹುದ್ದೆಗಳ ಭರ್ತಿ ಮಾಡುತ್ತೇವೆ ಎಂದರು.
ವಿನಯ್ ಕುಲಕರ್ಣಿ ವಿಚಾರದಲ್ಲಿ ಸ್ಪೀಕರ್ ಮೌನ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಒಂದು ಪ್ರಕ್ರಿಯೆ ಅದನ್ನ ತಡೆಯಲು ಆಗುವುದಿಲ್ಲ. ಒಂದೆರಡು ದಿನ ವಿಳಂಬ ಆಗಬಹುದು ಅಷ್ಟೆ ಎಂದರು.
Key words: welcome, Mallikarjun Kharge, CM, Home Minister, Parameshwar
The post ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಸಂತೋಷ, ಸ್ವಾಗತ ಮಾಡ್ತೇವೆ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




