9
May, 2026

A News 365Times Venture

9
Saturday
May, 2026

A News 365Times Venture

ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್

Date:

ಚೆನ್ನೈ,ಮೇ,8,2026 (www.justkannada.in): ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನ ಗೆದ್ದರೂ ಬಹುಮತ ಸಾಬೀತಿಗೆ  ಬೇಕಾದಷ್ಟು ಶಾಸಕರ ಸಂಖ್ಯೆ ಇಲ್ಲದ ಕಾರಣ ಸರ್ಕಾರ ರಚನೆಗೆ ಹೆಣಗಾಡುತ್ತಿದ್ದ ವಿಜಯ ನೇತೃತ್ವ ಟಿವಿಕೆಗೆ ಇದೀಗ ಕಾಂಗ್ರೆಸ್ ಜೊತೆಗೆ ಇತರೆ ಪಕ್ಷಗಳು ಕೈಜೋಡಿಸಿವೆ.

ಹೌದು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆಗೆ ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ಘೋಷಿಸುವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಟಿವಿಕೆಗೆ 120 ಸ್ಥಾನಗಳ ಬೆಂಬಲ ಸಿಕ್ಕಿದ್ದು ಈ ಸಂಬಂಧ ಟಿವಿಕೆ ಮುಖ್ಯಸ್ಥ ವಿಜಯ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ 108 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ತನ್ನ 5 ಶಾಸಕರೊಂದಿಗೆ ಬೆಂಬಲವನ್ನು ನೀಡಿದೆ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ಸಿಪಿಐ ಮತ್ತು ಸಿಪಿಐ(ಎಂ) ಸಹ ಇಂದಿನ ಸಭೆಗಳ ನಂತರ ಟಿವಿಕೆಯನ್ನು ಬೆಂಬಲಿಸಿವೆ. ಇಬ್ಬರು ಶಾಸಕರನ್ನು ಹೊಂದಿರುವ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಕೂಡ ವಿಜಯ್ ಅವರನ್ನು ಬೆಂಬಲಿಸಲು ಒಪ್ಪಿಕೊಂಡಿದೆ.

ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲದೊಂದಿಗೆ ವಿಜಯ್ ಅವರು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ.

Key words: Tamilnadu, TVK , 121 MLAs, Support, Vijay, Governor

The post ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಸರತ್ತು: DCM ಹುದ್ದೆ, ಪ್ರಮುಖ ಖಾತೆಗೆ ಬೇಡಿಕೆಯಿಟ್ಟ VCK

ಚೆನ್ನೈ, ಮೇ 9,2026 (www.justkannada.in):  ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನ...

ಸರ್ಕಾರಿ ಬಸ್ ಪಲ್ಟಿ: ಓರ್ವ ವಿದ್ಯಾರ್ಥಿ ಸಾವು: 20ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಚಿಂತಾಜನಕ

ದಾವಣಗೆರೆ,ಮೇ,8,2026 (www.justkannada.in): ಸರ್ಕಾರಿ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ 50...

BSY ಅಭಿಮಾನೋತ್ಸವ: ಬಿವೈವಿ ಎಚ್ಚರಿಕೆ ಹೆಜ್ಜೆ ಇಟ್ಟರೆ ಒಳ್ಳೆಯದು- ಸಚಿವ ಸತೀಶ್ ಜಾರಕಿಹೊಳಿ

ದಾವಣಗೆರೆ,ಮೇ,8,2026 (www.justkannada.in): ಅಧಿಕಾರದಿಂದ ಕೆಳಗಿಳಿಸಿದವರೇ ಬಿಎಸ್ ವೈ ಅಭಿಮಾನೋತ್ಸವ ಮಾಡುತ್ತಿದ್ದಾರೆ. ಬಿವೈ...

ಈ ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ – ಸಲೀಂ ಅಹ್ಮದ್

ಹಾವೇರಿ,ಮೇ,8,2026 (www.justkannada.in): ಈ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಬಹುದು...