ಚಿತ್ರದುರ್ಗ,ಮೇ,9,2026 (www.justkannada.in): ರಾಜ್ಯದಲ್ಲಿ ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ ಬಿಎಸ್ ಯಡಿಯೂರಪ್ಪ ಅವರ ಆಶೀರ್ವಾದದಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಬರಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಎಸ್ ವೈ ಅಭಿಮಾನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಎಂಬ ಹೆಸರಲ್ಲಿ ದೊಡ್ಡ ಶಕ್ತಿಯಿದೆ. ಬಡವರು ದೀನ ದಲಿತರ ಹೃದಯದಲ್ಲಿ ಬಿಎಸ್ ವೈ ಹೆಸರಿದೆ. ಚಿತ್ರದುರ್ಗದ ಬಯಲು ಸೀಮೆಗೆ ನೀರು ಹರಿಸುವ ಯೋಜನೆ ಭದ್ರ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದು ಬಿಎಸ್ ವೈ. ಬಯಲು ಸೀಮೆಗೆ ನೀರು ಕೊಟ್ಟ ಭಗೀರಥ ಬಿಎಸ್ ವೈ ಎಂದು ಬಣ್ಣಿಸಿದರು.
ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಬೇಡ. ಅಧಿಕಾರಕ್ಕಾಗಿ ಜನರಿಗೆ ದಾರಿ ತಪ್ಪಿಸುವ ಕಾಲವಿದು. ಸಿದ್ದರಾಮಯ್ಯರನ್ನ ಮಾಸ್ ಲೀಡರ್ ಅಂತಾರೆ ಆದರೆ ಏಕಮೇವ ಮಾಸ್ ಲೀಡರ್ ಬಿಎಸ್ ಯಡಿಯೂರಪ್ಪ. ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುತ್ತಾರೆ. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸಿಎಂ ಅನ್ಯಾಯ ಮಾಡಿದ್ದಾರೆ. ಸ್ಥಾನಮಾನ ಗೌರವ ಕೊಟ್ಟು ಶಕ್ತಿ ತುಂಬಿದ ನನ್ನ ನಾಯಕ ಬಿಎಸ್ ಯಡಿಯೂರಪ್ಪ. ಬಿಎಸ್ ವೈಗೆ ನೂರ ವರ್ಷ ತುಂಬಲಿ ಎಂದು ಹಾರೈಸಿದರು.
ಆಡಳಿತ ಪಕ್ಷದ ಹಡುಗು ಮುಳುಗುತ್ತಿದೆ. ನಮ್ಮ ಹಡಗು ತೇಲುತ್ತಿದೆ ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ. ಬಿಎಸ್ ವೈ ಆಶೀರ್ವಾದದ ನಮ್ಮ ಸರ್ಕಾರ ರಾಜ್ಯದಲ್ಲಿ ಬರಲಿ. ಬಿಎಸ್ ವೈ ಮೂಲಕ ನಮ್ಮ ಸರ್ಕಾರ ಬರಲಿ ಎಂದರು.
Key words: BSY Abhimanotsav, Former CM, Basavaraj Bommai
The post ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ: ಬಿಎಸ್ ವೈ ಮೂಲಕ ನಮ್ಮ ಸರ್ಕಾರ ಬರಲಿ- ಬಸವರಾಜ್ ಬೊಮ್ಮಾಯಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




