24
June, 2026

A News 365Times Venture

24
Wednesday
June, 2026

A News 365Times Venture

ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ‘ಭರತನಾಟ್ಯಂ ರಂಗಪ್ರವೇಶ’

Date:

ಮೈಸೂರು,ಮೇ,26,2026 (www.justkannada.in): ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ಭರತನಾಟ್ಯಂ ರಂಗಪ್ರವೇಶ ಕಾರ್ಯಕ್ರಮವನ್ನ ಮೈಸೂರಿನಲ್ಲಿ ಆಯೋಜಿಸಲಾಗಿದೆ.

ಅಂದು ಸಂಜೆ 5.20ಕ್ಕೆ ನಗರದ ಜಗನ್ನಾಥ ಸೆಂಟರ್ ಫಾರ್ ಅರ್ಟ್ ಅಂಡ್ ಕಲ್ಚರ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ,  ಮೈಸೂರು ಅರಮನೆ ಮಂಡಳಿ  ಉಪನಿರ್ದೇಶಕ ಟಿ.ಎಸ್ ಸುಬ್ರಮಣ್ಯ, ಕಲಾಸಂದೇಶ ಪ್ರತಿಷ್ಠಾನದ ಸಂಸ್ಥಾಪಕ ಸಂದೇಶ್ ಭಾರ್ಗವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗುರು ವಿದುಷಿ ಮಿತ್ರಾ ನವೀನ್ ಮತ್ತು ಎಂ.ಎಸ್ ನವೀನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಬೆಂಗಳೂರಿನಲ್ಲಿ ಜನಿಸಿ ಮೈಸೂರಿನಲ್ಲಿ ಬೆಳೆದ ದೀಕ್ಷಿತಾ ವೇಣುಗೋಪಾಲ್, ಭರತನಾಟ್ಯದ ಮಾರ್ಗವನ್ನು ಶಿಸ್ತು, ಸೌಂದರ್ಯ ಮತ್ತು ಆಳವಾದ ಭಕ್ತಿಯಿಂದ ಅನುಸರಿಸುತ್ತಿದ್ದಾರೆ. ಹತ್ತನೇ ವಯಸ್ಸಿನಲ್ಲಿ ಗುರು ವಿದುಷಿ ಮಿತ್ರಾ ನವೀನ್ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಆರಂಭಿಸಿದ ಅವರು, ನಾದವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡಾನ್ಸ್‌ ನಲ್ಲಿ ವಿದ್ವಾನ್ ಎಂ.ಎಸ್. ನವೀನ್ ಅವರಿಂದ ಕರ್ಣಾಟಕ ಸಂಗೀತದ ತರಬೇತಿಯನ್ನು ಸಹ ಪಡೆದಿದ್ದಾರೆ.

Key words: Dikshitha Venugopal, ‘Bharatanatyam Rangapravesha, Mysore

The post ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ‘ಭರತನಾಟ್ಯಂ ರಂಗಪ್ರವೇಶ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ, ಆ ಕಡೆ ಗಮನ ಹರಿಸಿ- MLC  ಸಿ.ಟಿ ರವಿ ತಿರುಗೇಟು

ಬೆಂಗಳೂರು,ಜೂನ್,23,2026 (www.justkannada.in): ಆರ್ ಎಸ್ ಎಸ್ ನೋಂದಣಿ ವಿಚಾರದಲ್ಲಿ ದಾಖಲೆ ಕೊಡದೆ...

ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಟೌನ್ ಶಿಪ್ ಗೆ  HDK ವಿರೋಧ- ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಜೂನ್,23,2026 (www.justkannada.in):  ಬಿಡದಿ ಟೌನ್ ಶಿಪ್ ಗೆ ಕೇಂದ್ರ ಸಚಿವ ಹೆಚ್...

ಬಿಡದಿ ಟೌನ್ ಶಿಪ್ ಜಟಾಪಟಿ: ಹೆಚ್ ಡಿಕೆಗೆ ಟಾಂಗ್ ಕೊಟ್ಟ ಸಚಿವ ಯುಟಿ ಖಾದರ್

ಮಂಗಳೂರು,ಜೂನ್,23,2026 (www.justkannada.in): ಬಿಡದಿ ಟೌನ್ ಶಿಪ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್...

ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಆವರಿಗೆ ಸಿಎಂ ಡಿ.ಕೆ ಶಿವಕುಮಾರ್ ಅಂತಿಮ ನಮನ

ರಾಮನಗರ, ಜೂನ್ 23,2026 (www.justkannada.in): ಸೋಮವಾರ ಲಿಂಗೈಕ್ಯರಾದ ಕನಕಪುರ ದೇಗುಲ ಮಠದ...