30
May, 2026

A News 365Times Venture

30
Saturday
May, 2026

A News 365Times Venture

ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ- ಶಾಸಕ ತನ್ವೀರ್ ಸೇಠ್

Date:

ಮೈಸೂರು,ಮೇ,29,2026 (www.justkannada.in): ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಇತ್ತ ರಚನೆಯಾಗುವ ಹೊಸ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲು ಶಾಸಕರು ತೀವ್ರ ಲಾಬಿಗೆ ಮುಂದಾಗಿದ್ದಾರೆ. ಇದೀಗ ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.

ಇಂದು ಮಾಧ್ಯಮದ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್,  ನಮ್ಮ ಜಿಲ್ಲೆಯವರು ಸಿಎಂ ಆಗಿದ್ದ ಕಾರಣ ಸಚಿವ ಸ್ಥಾನ ತಪ್ಪಿತ್ತು. ಈ ಬಾರಿ ಆ ರೀತಿ ಆಗುವುದಿಲ್ಲ  ಅನ್ನೋ ವಿಶ್ವಾಸವಿದೆ.  ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ  ಆಕಾಂಕ್ಷಿಯಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ.  ಅರ್ಹರಿಗೆ ಅದನ್ನ ಕೊಡಲಿ ಸಚಿವರು ತ್ಯಾಗ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯಗೆ ಡಿಸಿಎಂ ಹುದ್ದೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಎಲ್ಲರೂ ಎಲ್ಲಾ ಹುದ್ದೆಗೂ ಅರ್ಹರಾಗಿದ್ದಾರೆ. ಹೊಸ ಸರ್ಕಾರದ ರಚನೆ ಜನರ ಅಭಿವೃದ್ದಿಗೆ ಪೂರಕವಾಗಲಿ.   ಹಿಂದೆ  ಹೈಕಮಾಂಡ್ ನಾಯಕರು ಮೌನವಾಗಿದ್ದಿದ್ದು ಸರಿಯಲ್ಲ.  ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

Key words: I am, strong aspirant, ministerial post, MLA, Tanveer Sait

The post ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ- ಶಾಸಕ ತನ್ವೀರ್ ಸೇಠ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡಿಕೆಶಿ ಜೊತೆ  14 ಮಂದಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ: ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ..?

ಬೆಂಗಳೂರು, ಮೇ,30,2026 (www.justkannada.in): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಜೂನ್...

ಡಿಸಿಎಂ ಹುದ್ದೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ದ- ಶಾಸಕ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮೇ,30,2026 (www.justkannada.in):  ತಮಗೆ ಡಿಸಿಎಂ ಹುದ್ದೆ ನೀಡುವಂತೆ ತಮ್ಮ ಕಾರ್ಯಕರ್ತರು ಆಗ್ರಹಿಸುತ್ತಿರುವ...

ಖಾಸಗಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ

ಬೆಂಗಳೂರು,ಮೇ,30,2026 (www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನ ಖಾಸಗಿ ಶಾಲೆಯಯೊಂದರಲ್ಲಿ  ಬಾರೀ ಅಗ್ನಿ...

ಮಂತ್ರಿಗಿರಿಗಾಗಿ ಲಾಬಿ: ಸಿದ್ದರಾಮಯ್ಯರನ್ನ ಭೇಟಿಯಾದ ಸಚಿವಾಕಾಂಕ್ಷಿಗಳು

ಬೆಂಗಳೂರು,ಮೇ,30,2026 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆಯ ಗೊಂದಲ ಬಗೆಹರಿದಿದ್ದು ಇಂದು ನಡೆಯುವ...