ಬೆಂಗಳೂರು,ಜೂನ್,6,2026 (www.justkannada.in): ಬೆಂಗಳೂರು ಅಭಿವೃದ್ದಿ ಖಾತೆ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗರೆಡ್ಡಿ ಅವರನ್ನ ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ.
ಹೌದು ಸಚಿವ ರಾಮಲಿಂಗರೆಡ್ಡಿ ಹೈಕಮಾಂಡ್ ಮನವೊಲಿಕೆ ಬಳಿಕ ತಮ್ಮ ರಾಜೀನಾಮೆಯನ್ನ ವಾಪಸ್ ಪಡೆದಿದ್ದಾರೆ. 
ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ನನ್ನ ರಾಜೀನಾಮೆಯನ್ನ ಸಿಎಂ ಸ್ವೀಕಾರ ಮಾಡಲ್ಲ ಅಂದರು. ಸ್ವೀಕಾರ ಮಾಡಲ್ಲ ಅಂದರೆ ರಾಜೀನಾಮೆ ರಿಜೆಕ್ಟ್ ಎಂದರ್ಥ ಸಿಎಂ ಜತೆ ಮಾತನಾಡಿದ್ದೇನೆ. ಯಾವುದೇ ಗೊಂದಲವಿಲ್ಲ. ಖಾತೆ ವಿಚಾರ ವರಿಷ್ಠರು, ಸಿಎಂ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
Key words: Minister, Ramalinga Reddy, withdraws, resignation
The post ರಾಜೀನಾಮೆ ವಾಪಸ್ ಪಡೆದ ಸಚಿವ ರಾಮಲಿಂಗರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




