14
February, 2026

A News 365Times Venture

14
Saturday
February, 2026

A News 365Times Venture

Bannerghatta safari: ವ್ಯಾನ್‌ನಲ್ಲಿದ್ದ ಬಾಲಕನ ಕೈ ಹಿಡಿದ ಚಿರತೆ; ಬಾಲಕನಿಗೆ ಗಾಯ

Date:

ಬೆಂಗಳೂರು, ಆ.೧೬,೨೦೨೫ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ)  ಕುಟುಂಬದ ಜತೆ ಚಿರತೆ ಸಫಾರಿಯಲ್ಲಿದ್ದ 12 ವರ್ಷದ ಬಾಲಕ ಚಿರತೆ ಜತೆಗಿನ ಆಕಸ್ಮಿಕ ಘರ್ಷಣೆಯಲ್ಲಿ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಬಾಲಕನು ಜಾಲರಿಯಿಂದ ಕೂಡಿದ ನಾನ್-ಎಸಿ ಸಫಾರಿ ಬಸ್ಸಿನ ಹೊರಗೆ ತನ್ನ ಕೈಯನ್ನು ಇರಿಸಿದ್ದಾಗ, ಸಫಾರಿ ಆವರಣದಲ್ಲಿದ್ದ ಚಿರತೆಯೊಂದು ಬಸ್ಸಿನ ಮೇಲೆ ಹತ್ತಲು ಪ್ರಯತ್ನಿಸಿತು, ಮತ್ತು ಅದು ಬಾಲಕನ ತೋಳನ್ನು ತನ್ನ ಪಂಜದಿಂದ ಹಿಡಿದುಕೊಂಡಿತು. ಈ ವೇಳೆ ಚಿರತೆ ಉಗುರು ತರಚಿ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚಿರತೆ ಬಾಲಕನ ಮೇಲೆ ದಾಳಿ ಮಾಡಿಲ್ಲ, ಮತ್ತು ಆ ಬಾಲಕನಿಗೂ ಚಿರತೆಯ ಚಲನವಲನಗಳ ಬಗ್ಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಪ್ರವಾಸಿಗರು ಈ ಬಗ್ಗೆ ಎಚ್ಚರಿದಾಗ, ಸಫಾರಿ ಬಸ್ ಅನ್ನು ತಕ್ಷಣವೇ ಮುಖ್ಯ ಕಚೇರಿಗೆ ತರಲಾಯಿತು. ಬಾಲಕನನ್ನು ಜಿಗಣಿಯಲ್ಲಿರುವ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.ಬಿಬಿಪಿ ಆಡಳಿತ ಮಂಡಳಿಯ ವಿರುದ್ಧ ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದೆ.

ಕ್ಯಾಮೆರಾ ಸ್ಲಾಟ್‌ಗಳು ಸೇರಿದಂತೆ ಬಸ್‌ಗಳ ಕಿಟಕಿಗಳನ್ನು ಜಾಲರಿಯಿಂದ ಮುಚ್ಚಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ಹೇಳಿದ್ದಾರೆ. ಜತೆಗೆ ಎಸಿ ಅಲ್ಲದ ಸಫಾರಿ ಬಸ್‌ಗಳನ್ನು ನಿರ್ವಹಿಸುವ ಚಾಲಕರು ಜಾಗರೂಕರಾಗಿರಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದರು.

key words: Leopard, grabs boy’s hand, Bannerghatta safari van, boy injured, Bengaluru, BBP

vtu

SUMMARY:

Leopard grabs boy’s hand in Bannerghatta safari van; boy injured as a result. A 12-year-old boy, who was on a leopard safari with his family at the Bannerghatta Biological Park (BBP), was injured in an accidental collision with a leopard on Friday afternoon.

The post Bannerghatta safari: ವ್ಯಾನ್‌ನಲ್ಲಿದ್ದ ಬಾಲಕನ ಕೈ ಹಿಡಿದ ಚಿರತೆ; ಬಾಲಕನಿಗೆ ಗಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ಪೊಲೀಸರ ಕಾರ್ಯಾಚರಣೆ: 4 ಲಕ್ಷ ಮೌಲ್ಯದ ಮಾದಕ ವಸ್ತು ವಶ: ಆರೋಪಿ ಬಂಧನ

ಮೈಸೂರು,ಫೆಬ್ರವರಿ,14,2026 (www.justkannada.in): ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು...

ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ- ಜಯದೇವ್

ಮೈಸೂರು,ಫೆಬ್ರವರಿ,14,2026 (www.justkannada.in): ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ ಗಾಂಧಿವಾದಿ ಜಯದೇವ್...

ಮೈಸೂರು: ಶ್ರದ್ಧೆ, ಭಕ್ತಿಭಾವದಿಂದ ನೆರವೇರಿದ ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಾರಾಯಣ

ಮೈಸೂರು,ಫೆಬ್ರವರಿ,14,2026 (www.justkannada.in):  ಅವಧೂತ ದತ್ತಪೀಠದ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ...

ದಾಖಲೆಗಳ ನಿರ್ಮಿಸಿದ ಭಾಗ್ಯಗಳ ಸರದಾರ..

ಬೆಂಗಳೂರು,ಫೆಬ್ರವರಿ,14,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನ...