30
September, 2026

A News 365Times Venture

30
Wednesday
September, 2026

A News 365Times Venture

BK ಹರಿಪ್ರಸಾದ್ ಪಾದಯಾತ್ರೆ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ-ಬಿವೈ ವಿಜಯೇಂದ್ರ ತಿರುಗೇಟು

Date:

ಚಿತ್ರದುರ್ಗ,ಸೆಪ್ಟಂಬರ್,30,2026 (www.justkannada.in):  ಬಿವೈ ವಿಜಯೇಂದ್ರ ಆರ್ ಟಿಜಿಎಸ್ ಮೂಲಕ ಹಣ ಪಡೆದಿದ್ದಾರೆಂದು ಆರೋಪ ಮಾಡಿದ ಕೆಪಿಸಿಸಿ ಅಧ್ಯಕ್ಷ  ಬಿಕೆ ಹರಿಪ್ರಸಾದ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಹರಿಪ್ರಸಾದ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ನಿರಪರಾಧಿ ಎಂದು ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಆದರೆ ಹರಿಪ್ರಸಾದ್ ಹತಾಶರಾಗಿ ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ನೂರು ದಿನ ಪೂರೈಸಿದ ಕಾರ್ಯಕ್ರಮಕ್ಕೂ ಹರಿಪ್ರಸಾದ್ ಕರೆದಿಲ್ಲ. ಈಗ ಹರಿಪ್ರಸಾದ್ ಪಾದಯಾತ್ರೆ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿಎಂ ಡಿಕೆಶಿ ಬರಗಾಲದಲ್ಲಿ ರೈತರಿಗೆ ಪರಿಹಾರ ನೀಡಿಲ್ಲ ಮಾಠಾಧೀಶರು ನನ್ನ ಸೇವೆ ಮಾಡಬೇಕೆಂದು ಡಿಕೆಶಿ ಹೇಳಿದ್ದಾರೆ . ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ ಎಂದರು.

ಬಿಜೆಪಿ ಬಳ್ಳಾರಿ ಪಾದಯಾತ್ರೆ ಪ್ರೇರಣೆಯಿಂದ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ.  ಕೆಪಿಸಿಸಿ ಅಧ್ಯಕ್ಷರು ನನ್ನ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ.  ರಾಜ್ಯದಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದ ಕೀರ್ತಿ ಶಿಕಾರಿಪುರಕ್ಕಿದೆ.  ಹರಿಪ್ರಸಾದ್ ಗೆ ಒಳ್ಳೆಯದಾಗಲಿ. ನಾನು ಎಲ್ ಕೆಜಿ ಇರಬಹುದು ಮೊದಲ ಸಲ ಶಾಸಕ ಇರಬಹುದು. ಹರಿಪ್ರಸಾದ್ ಪಿಎಚ್ ಡಿ ಮಾಡಿದ್ದರೂ ಚುನಾವಣೆ ಗೆದ್ದಿಲ್ಲ.  ಬ್ಯಾನರ್ ಹರಿದು ಹಾಕುವ ಕೀಳು ರಾಜಕಾರಣ ಮಾಡುವುದಿಲ್ಲ ಬ್ಯಾನರ್ ಹರಿದು ಹಾಕಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಹರಿಹಾಯ್ದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಜೆಪಿ ಸರ್ಕಾರಗಳ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆ  ನಮಗೆ ಪತ್ರ ಬರೆದಿದ್ದಾರೆ: ಸಿಎಂ ಡಿ. ಕೆ ಶಿವಕುಮಾರ್

ಚಾಮರಾಜನಗರ, ಸೆಪ್ಟಂಬರ್‌,30,2026 (www.justkannada.in) ಯಡಿಯೂರಪ್ಪನವರು ಬಜೆಟ್ ಮೀರಿ ಯೋಜನೆಗಳ ಕಾಮಗಾರಿ ಪ್ರಾರಂಭಿಸಿದ್ದರು....

ಬಾಕಿ ಬಿಲ್​​ ಪಾವತಿ: ಗಡುವು ತಪ್ಪಿದ್ರೆ ಕಮಿಷನ್​​ ದಂಧೆ ದಾಖಲೆ ಬಿಡುಗಡೆ- ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ

ಬೆಂಗಳೂರು, ಸೆಪ್ಟೆಂಬರ್​ ,30,2026 (www.justkannada.in): ಬಾಕಿ ಹಣ ಬಿಡುಗಡೆಗೆ ಕೋರಿ ಸಿಎಂ...

ಪ್ರೀತಿಗೆ ನಿರಾಕರಣೆ: ಪೆಟ್ರೋಲ್ ಸುರಿದು, ಯುವತಿ ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡ ಯುವಕ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ಪ್ರೀತಿಸುವಂತೆ ನಿರಂತರವಾಗಿ ದುಂಬಾಲು ಬಿದ್ದಿದ್ದ ಯುವಕನೊಬ್ಬ...

ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ- ಸಿಎಂ ಡಿಕೆಶಿಗೆ ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ಆರ್ಥಿಕ ಇಲಾಖೆ ನೀಡಿರುವ ಪತ್ರ ರಾಜ್ಯದ ಹಣಕಾಸು ಪರಿಸ್ಥಿತಿ...