ಮೈಸೂರು, ಜುಲೈ,9,2025 (www.justkannada.in): ನಾನು ಜೆಡಿಎಸ್ ನಲ್ಲಿ ಇರಬೇಕಾ ಬೇಡವಾ? ಬಿಜೆಪಿಗೆ ಹೋಗಬೇಕಾ ಬೇಡವಾ? ಕಾಂಗ್ರೆಸ್ ಗೆ ಹೋಗ್ಬೇಕಾ ಬೇಡವಾ ಎಂದು ನನ್ನ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ನಾನು ಪಕ್ಷಾಂತರ ಮಾಡಲ್ಲ ಎಂದು ಶಾಸಕ ಜಿಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿಇಂದು ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದುಬಿಡು ಅಂತ ಕರೆದಿಲ್ಲ. ಡಿಕೆ ಶಿವಕುಮಾರ್ ಕೂಡ ಕರೆದಿಲ್ಲ. ಚನ್ನಪಟ್ಟಣ ಬೈ ಎಲೆಕ್ಷನ್ ನಲ್ಲಿ ನನ್ನ ಯಾರೂ ಕರೆದಿಲ್ಲ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಯಾರೂ ಕರೆದಿಲ್ಲ ಎಂದರು.
ಸ್ವಪಕ್ಷದ ನಾಯಕರ ವಿರುದ್ಧವೂ ಹರಿಹಾಯ್ದ ಶಾಸಕ ಜಿಟಿ ದೇವೇಗೌಡ, ನಿನ್ನೆ ಮೊನ್ನೆ ಬಂದ ಶಾಸಕರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಮುಂದೆ ನಿಲ್ಲುವ ಶಕ್ತಿ ಇಲ್ಲದವರು ಕೂಡ ಏನೇನೋ ಮಾತನಾಡುತ್ತಿದ್ದಾರೆ. ನಾನು ದೇವೇಗೌಡರ ಜೊತೆ ಬಾವುಟ ಕಟ್ಟಿ ಪಕ್ಷ ಕಟ್ಟಿದವನು. ಮುಂದೆ ಏನು ಮಾಡಬೇಕು ಅಂತ ಕ್ಷೇತ್ರದ ಹೇಳುತ್ತಾರೆ. ಜನ ಜೆಡಿಎಸ್ ಅಲ್ಲಿ ಇರು ಅಂದರೆ ಇರ್ತೀನಿ . ಕಾಂಗ್ರೆಸ್ ಗೆ ಹೋಗಿ ಅಂದರೆ ಹೋಗುತ್ತೇನೆ. ಬಿಜೆಪಿಗೆ ಹೋಗು ಅಂದರೂ ಹೋಗುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದರು.
ಬಿಜೆಪಿ ಜೆಡಿಎಸ್ ನಲ್ಲಿ ಸಮನ್ವಯ ಕೊರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡ, ನಾನು ಜೆಡಿಎಸ್ ಶಾಸಕ. ಚುನಾವಣೆ ಗೆದ್ದು ಶಾಸಕ ರಾಜೀನಾಮೆ ಕೊಟ್ಟು. ಪಕ್ಷಾಂತರ ಮಾಡಿಲ್ಲ. ಈ ಹಿಂದೆ 20 ತಿಂಗಳು ಯಡಿಯೂರಪ್ಪಗೆ ಅಧಿಕಾರ ಕೊಡಲಿಲ್ಲ ಅಂತ ಬೆಂಬಲ ನೀಡಿದ್ದೆ. ಇನ್ನು ನಮ್ಮ ಅವಧಿ 3 ವರ್ಷ ಇದೆ. ನನಗೆ ವಿರೋಧ ಪಕ್ಷ ಸ್ಥಾನ ಕೊಡಲಿಲ್ಲ ಅಂತ ಬೇಸರವಿದೆ. ಹಿರಿಯನಾಗಿದ್ದು ನನಗೆ ಅವಕಾಶ ಕೊಡಲಿಲ್ಲ. ಸುರೇಶ್ ಬಾಬು ಗೆ ಕುಮಾರಸ್ವಾಮಿ ಅಧಿಕಾರ ಕೊಟ್ಟರು. ಸದ್ಯ ನಾನು ಶಾಸಕನಾಗಿ ಕೆಲ್ಸ ಮಾಡ್ತಿದ್ದೇನೆ. ಪಕ್ಷದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಈ ಹಿಂದೆ ದೊಡ್ಡ ನಾಯಕನ ಮುಂದೆ ನಾನು ಹೋರಾಟ ಮಾಡಿ ಗೆದ್ದು ಬಂದಿದ್ದೇನೆ. ಸಿದ್ದರಾಮಯ್ಯ ಅಂತ ನಾಯಕರ ಮುಂದೆ ಗೆದ್ದಿದ್ದೇನೆ. ಅರ್ಧದಲ್ಲಿ ಜೆಡಿಎಸ್ ಬಿಟ್ಟು ಯಾವ ಪಕ್ಷಕ್ಕೂ ನಾನು ಹೋಗಲ್ಲ. ನಾನು ನನ್ನ ಜೀವನದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಪಕ್ಷಾಂತರ ಮಾಡಿಲ್ಲ. ನನ್ನನ್ನ ಪಕ್ಷಾಂತರಿ ಎಂದು ಹೇಳುವ ತಾಕತ್ತು ಯಾರಿಗೂ ಇಲ್ಲ. ಮುಂದೆ ನನ್ನ ಕ್ಷೇತ್ರದ ಜನ ಹೇಳಿದ ಹಾಗೆ ಮಾಡುತ್ತೇನೆ ಎಂದರು.
ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿಟಿಡಿ, ನಿಖಿಲ್ ನಟ ಕೂಡ ಹೌದು. 3 ಬಾರಿ ಚುನಾವಣೆ ಸೋತಿದ್ದಾನೆ. ಈಗ ಆತನಿಗೂ ರಾಜಕೀಯದ ಅನುಭವ ಇದೆ. ದೇವೇಗೌಡರು ಕಟ್ಟಿದ್ದ ಜನತಾದಳವನ್ನು ಸದೃಢವಾಗಿ ಮುಂದೆ ತೆಗೆದುಕೊಂಡು ಹೋಗುವ ಗಟ್ಟಿ ನಾಯಕತ್ವ ನಿಖಿಲ್ ಗೆ ಇದೇ. ನಾನು ಪಕ್ಷದ ಕಾರ್ಯಕ್ರಮದಿಂದ ದೂರವಿದ್ದೇನೆ. ಶಾಸಕನಾಗಿ ನನ್ನ ಕೆಲ್ಸ ಮಾತ್ರ ಮಾಡುತ್ತೇನೆ ಎಂದರು.
Key words: MLA GT Deve Gowda, JDS , Congress , Mysore
The post JDS ತೊರೆದು ಕಾಂಗ್ರೆಸ್ ಸೇರ್ತಾರಾ ಶಾಸಕ ಜಿ.ಟಿ ದೇವೇಗೌಡ..? ಈ ಬಗ್ಗೆ ಸ್ವತಃ ಅವರ ಪ್ರತಿಕ್ರಿಯೆ ಹೀಗಿತ್ತು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.