18
April, 2025

A News 365Times Venture

18
Friday
April, 2025

A News 365Times Venture

JSS ವೈದ್ಯಕೀಯ ಕಾಲೇಜಿನಿಂದ ವಿಶ್ವ ಆರೋಗ್ಯ ದಿನಾಚರಣೆ: ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ

Date:

ಮೈಸೂರು, ಏಪ್ರಿಲ್ ,8,2025 (www.justkannada.in):  ವಿಶ್ವ ಆರೋಗ್ಯ ದಿನದ ಅಂಗವಾಗಿ “ಆರೋಗ್ಯಕರ ಆರಂಭ, ಭರವಸೆಯ ಭವಿಷ್ಯ” ಎಂಬ ಥೀಮ್‌ನೊಂದಿಗೆ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ವಿದ್ಯಾರ್ಥಿ ನಿಲಯದ ನೌಕರರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರದಲ್ಲಿ BMI, ಕಣ್ಣಿನ ತಪಾಸಣೆ, ರಕ್ತದ ಒತ್ತಡ, ಹಿಮೋಗ್ಲೋಬಿನ್, ಸಕ್ಕರೆ ಕಾಯಿಲೆ ಮತ್ತು ECG ಪರೀಕ್ಷೆಗಳೊಂದಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು.

ಡಾ. ಪ್ರವಿಣ್ ಕುಲಕರ್ಣಿ (ಉಪಪ್ರಾಚಾರ್ಯರು) ಮತ್ತು ಆಡಳಿತಾಧಿಕಾರಿ ಎಸ್.ಆರ್. ಸತೀಶ್ ಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಡಾ. ಸುನೀಲ್ ಕುಮಾರ್ ಡಿ, ಡಾ. ಅನಿಲ್ ಎಸ್ ಬಿಲಿಮಲೆ, ಡಾ. ವನಿತಾ ರೆಡ್ಡಿ ಮತ್ತು ಡಾ. ಪ್ರಿಯಾಂಕಾ ಉಪಸ್ಥಿತರಿದ್ದರು.

ಒಟ್ಟು 157 ನೌಕರರನ್ನು ತಪಾಸಣೆಗೊಳಪಡಿಸಲಾಯಿತು. ECG ತಪಾಸಣೆಗೆ ಒಳಪಟ್ಟ 12 ನೌಕರರಲ್ಲಿ 7 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಲಾಯಿತು.

ಶಿಬಿರವನ್ನು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಸುನೀಲ್ ಕುಮಾರ್ ಡಿ, ಸಹ ಪ್ರಾಧ್ಯಾಪಕ ಡಾ. ಶ್ವೇತಾಶ್ರೀ ಎಮ್, ಸೀನಿಯರ್  ರೆಸಿಡೆಂಟ್ ಡಾ. ಶ್ವೇತಾ ಎನ್ ಕುರ್ಕುರಿ ಅವರ ನೇತೃತ್ವದಲ್ಲಿ ಹಾಗೂ ಇತರೆ ಸಿಬ್ಬಂದಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಗೃಹ ವೈದ್ಯರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸಲಾಯಿತು.

Key words: Mysore,  JSS Medical College, World Health Day

The post JSS ವೈದ್ಯಕೀಯ ಕಾಲೇಜಿನಿಂದ ವಿಶ್ವ ಆರೋಗ್ಯ ದಿನಾಚರಣೆ: ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜಾತಿಗಣತಿ ವರದಿ ವಿಚಾರ: ವಿಶೇಷ ಸಚಿವ ಸಂಪುಟ ಸಭೆ ಆರಂಭ

ಬೆಂಗಳೂರು,ಏಪ್ರಿಲ್,17,2025 (www.justkannada.in): ಜಾತಿ ಜನಗಣತಿ ವರದಿ ಬಿಡುಗಡೆ ಕುರಿತು ಚರ್ಚಿಸಲು ಇಂದು...

ಲಾರಿ ಬೈಕ್ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವು:  ಮತ್ತೋರ್ವನ ಸ್ಥಿತಿ ಗಂಭೀರ

ಮೈಸೂರು,ಏಪ್ರಿಲ್,17,2025 (www.justkannada.in):  ಲಾರಿ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ...

ಲಾರಿ ಮಾಲೀಕರ ಜೊತೆ ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್​: ಮುಷ್ಕರ ವಾಪಸ್​

ಬೆಂಗಳೂರು, ಏಪ್ರಿಲ್​ 17,2025 (www.justkannada.in):  ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ...

ಜಾತಿ ಗಣತಿ: ಅಧಿಕಾರದ ನೆಲೆ ಕುಸಿಯುವ ಭೀತಿಯಲ್ಲಿ ಪ್ರಬಲ ಸಮುದಾಯಗಳು..

ಬೆಂಗಳೂರು,ಏಪ್ರಿಲ್,17,2025 (www.justkannada.in): 2019: ಲೋಕಸಭೆ ಚುನಾವಣೆ ಹೊತ್ತಿನೊಳಗೆ ಪ್ರಧಾನಿ ನರೇಂದ್ರ ಮೋದಿ...