6
April, 2026

A News 365Times Venture

6
Monday
April, 2026

A News 365Times Venture

KSOU ರಿಜಿಸ್ಟ್ರಾರ್ ನೇಮಕಾತಿ ಆದೇಶ ಹಿಂಪಡೆದ ಸರ್ಕಾರ — ನಿಗೂಢ ನಿರ್ಧಾರಕ್ಕೆ ಪ್ರಶ್ನೆಗಳ ಮಳೆ

Date:

 

ಮೈಸೂರು, April.06,2026: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ರಿಜಿಸ್ಟ್ರಾರ್ ಹುದ್ದೆಗೆ ಕೆಎಎಸ್ ಅಧಿಕಾರಿ ಎಸ್‌. ಕುಸುಮಾ ಕುಮಾರಿ ಅವರನ್ನು ನೇಮಕಗೊಳಿಸಿ ಶನಿವಾರವೇ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಅದೇ ಆದೇಶವನ್ನು ಸೋಮವಾರ ಅಚಾನಕ್ ಹಿಂಪಡೆದು ಹೊಸ ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಅಧಿಕಾರ ಸ್ವೀಕರಿಸಲು ಸಕಲ ಸಿದ್ಧತೆ ನಡೆಸಿದ್ದ ಕುಸುಮಾ ಕುಮಾರಿ ಅವರಿಗೆ ಕೊನೆಯ ಕ್ಷಣದಲ್ಲಿ ಆಘಾತ ಎದುರಾಗಿದೆ. ಸರ್ಕಾರದ ಈ ಹಠಾತ್‌ ಯು-ಟರ್ನ್‌ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ನಿರ್ಧಾರದ ಹಿಂದೆ ಯಾವ ಒತ್ತಡ ಕಾರ್ಯನಿರ್ವಹಿಸಿದೆ? ರಾಜಕೀಯ ಅಥವಾ ಆಡಳಿತಾತ್ಮಕ ಹಸ್ತಕ್ಷೇಪವೇ ಕಾರಣವೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಧಿಕಾರಿಗಳ ವಲಯದಲ್ಲಿಯೂ ಚರ್ಚೆಗಳು ಜೋರಾಗಿವೆ.

ಸರ್ಕಾರದಿಂದ ಯಾವುದೇ ಸ್ಪಷ್ಟನೆ ಹೊರಬಾರದ ಹಿನ್ನೆಲೆಯಲ್ಲಿ, ಈ ನಿರ್ಧಾರ ನಿಗೂಢತೆಯನ್ನು ಮತ್ತಷ್ಟು ಗಾಢಗೊಳಿಸಿದೆ. KSOU ಆಡಳಿತದಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

Key words:  KSOU, Registrar Appointment, Revoked by Govt, Mystery Deepens, Mysore

SUMMARY:

KSOU Registrar Appointment Revoked by Govt, Mystery Deepens

Mysuru: The state government has abruptly withdrawn its order appointing KAS officer S. Kusuma Kumari as Registrar of KSOU, just two days after issuing it on Saturday. The move comes even as she was set to assume charge on Monday, triggering surprise and speculation.

The sudden U-turn has raised questions over possible pressure or interference behind the decision. With no official clarification from the government, the reason remains unclear, adding to the uncertainty within KSOU administration.

The post KSOU ರಿಜಿಸ್ಟ್ರಾರ್ ನೇಮಕಾತಿ ಆದೇಶ ಹಿಂಪಡೆದ ಸರ್ಕಾರ — ನಿಗೂಢ ನಿರ್ಧಾರಕ್ಕೆ ಪ್ರಶ್ನೆಗಳ ಮಳೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಉಪಚುನಾವಣೆಯಲ್ಲಿ ನೂರಕ್ಕೆ ನೂರು ಎರಡೂ ಕ್ಷೇತ್ರದಲ್ಲಿ ಗೆಲ್ತೇವೆ- ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಏಪ್ರಿಲ್,6,2026 (www,justkannada.in): ಉಪಚುನಾವಣೆಯಲ್ಲಿ ನೂರಕ್ಕೆ ನೂರು ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು...

ಏ. 19 ರಿಂದ ಅಗ್ನಿವೀರ್ ರ‍್ಯಾಲಿ, 6235 ಅಭ್ಯರ್ಥಿಗಳು ಭಾಗಿ: ಕರ್ನಲ್ ವಿವೇಕ್ ಜಮದರ್

ಮೈಸೂರು, ಏಪ್ರಿಲ್, 6,2026 (www.justkannada.in): ಜಿಲ್ಲೆಯ‌ ನಜರ್ ಬಾದ್ ನಲ್ಲಿರುವ ಚಾಮುಂಡಿ...

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರು ಪರಿಶೀಲನೆ, ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಏಪ್ರಿಲ್, 6,2026 (www.justkannada.in): ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ...

ಯುವಕ, ಯುವತಿಯರಿಗೆ ಆತಂಕ ಬೇಡ: ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿ- ಸಿಎಂ ಸಿದ್ದರಾಮಯ್ಯ ಭರವಸೆ

ದಾವಣಗೆರೆ,ಏಪ್ರಿಲ್,6,2026 (www.justkannada.in):  ರಾಜ್ಯದಲ್ಲಿ ನೇಮಕಾತಿಗಳಿಗೆ ತಡೆ ಬದ್ದು ಎರಡು ವರ್ಷಗಳೇ ಕಳೆದಿದ್ದು...