11
March, 2026

A News 365Times Venture

11
Wednesday
March, 2026

A News 365Times Venture

LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ- ಗೃಹ ಸಚಿವ ಪರಮೇಶ್ವರ್

Date:

ಬೆಂಗಳೂರು,ಮಾರ್ಚ್,11,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ ಭಾರತದ ಮೇಲೂ ಪರಿಣಾಮ ಬೀರಿದ್ದು ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈಗ ನಾವು ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ರಾಜ್ಯದ ಹಲವೆಡೆ  ಯಾರು ನಿರೀಕ್ಷೆ  ಮಾಡದಂತಹ ಬೆಳವಣಿಗೆ ಆಗಿದೆ . ಅಂತರಾಷ್ಟ್ರಿಯ ಮಟ್ಟದಲ್ಲಿ ಆಗುತ್ತಿರುವ ಯುದ್ದದಿಂದ ಎಫೆಕ್ಟ್ ಆಗಿದೆ.  ಕೇಂದ್ರ ಸರ್ಕಾರ ಸಹ ಕಮಿಟಿ ರಚನೆ ಮಾಡಿ ಕ್ರಮಕ್ಕೆ ಮುದಾಗಿದೆ ರಾಜ್ಯದಲ್ಲೂ ಆದ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದರು.

ಜನಸಾಮಾನ್ಯರು ಹೋಟೆಲ್ ಗಳಿಗೆ ತೊಂದರೆ ಆಗುತ್ತಿದೆ.  ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದಲೂ ಪತ್ರ ಬರೆಯುತ್ತೇವೆ.  ಸಂಬಂಧಪಟ್ಟವರ ಜತೆ ರಾಜ್ಯಮುಖ್ಯಕಾರ್ಯದರ್ಶಿ ಮಾತನಾಡುತ್ತಾರೆ. ಈಗ ನಾವು ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ ಈಗ ರಾಜಕೀಯ ಮಾಡುತ್ತಾ ಕೂತರೆ ಅದಕ್ಕೆ ಪರಿಹಾರ ಸಿಗಲ್ಲ. ಕೇಂದ್ರ ಸರ್ಕಾರವೇ ಕ್ರಮಕೈಗೊಳ್ಳಬೇಕಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

Key words: Disruption, LPG cylinder, supply, Home Minister, Parameshwara

The post LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆ್ಯಸಿಡ್ ಸಂತ್ರಸ್ತರಿಗೆ 50 ಸಾವಿರ ರೂ. ಭತ್ಯೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ

ಬೆಂಗಳೂರು,ಮಾರ್ಚ್,11,2026 (www.justkannada.in): ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಜೀವನ ನಿರ್ವಹಣೆಗಾಗಿ 50 ಸಾವಿರ...

ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ವ್ಯವಸ್ಥಾಪಕಿ ಶೃತಿ.ಬಿ ಪ್ರತಿನಿಯೋಜನೆ ರದ್ದು

  ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ವ್ಯವಸ್ಥಾಪಕರಾಗಿ ಪ್ರತಿನಿಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ...

ಶೇ 80ರಿಂದ 90 ರಷ್ಟು ಇಂಧನ ಮಧ್ಯಪ್ರಾಚ್ಯದಿಂದ ಬರಬೇಕಿದೆ: ಗ್ಯಾಸ್ ಪೂರೈಕೆ ನಮ್ಮ ಆದ್ಯತೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನವದೆಹಲಿ,ಮಾರ್ಚ್,10,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶೇ 80ರಿಂದ...

MUDA ಪ್ರಕರಣ: ದಿನೇಶ್ ಕುಮಾರ್ ವಿರುದ್ದ ವಿಚಾರಣೆಗೆ ತಡೆ ನೀಡಿದ ಹೈಕೋರ್ಟ್

ಬೆಂಗಳೂರು,ಮಾರ್ಚ್,10,2026 (www.justkannada.in):  ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ  ಹಗರಣಕ್ಕೆ ಸಂಬಂಧಿಸಿದಂತೆ  ಮಾಜಿ...