ಬೆಂಗಳೂರು,ಮಾರ್ಚ್,17,2026 (www.justkannada.in): ಸಣ್ಣಕೈಗಾರಿಕೆಗಳಲ್ಲಿ(MSME) ಉದ್ಯೋಗ ಸೃಷ್ಠಿ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ರಾಜ್ಯ ಸರ್ಕಾರ ಏನು ಮಾಡಬೇಕೋ ಅದನ್ನ ಮಾಡುತ್ತಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಸಣ್ಣ ಕೈಗಾರಿಕೆ ಮುಚ್ಚಿರುವ ಬಗ್ಗೆ ವಿಧಾನಪರಿಷತ್ ನಲ್ಲಿ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಟಿ.ಎ ಶರವಣ, ಧಾರವಾಡದಲ್ಲಿ ಉದ್ಯೋಗಕ್ಕಾಗಿ ಎಷ್ಟು ಗಲಾಟೆ ಆಯಿತು. ಉದ್ಯೋಗ ಸೃಷ್ಠಿ ಮಾಡುತ್ತಿರುವುದು ಸಣ್ಣ ಕೈಗಾರಿಕೆಗಳು ನಮ್ಮ ಪ್ರಶ್ನಗೆಳಗೆ ಉತ್ತರ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಶಿವಾನಂದ ಪಾಟೀಲ್, ಎಂಎಸ್ ಎಂಇಗಳಲ್ಲಿ ಉದ್ಯೋಗ ಸೃಷ್ಠಿ ಮಾಡುವುದು ಕೇಂದ್ರದ ಕೆಲಸ. ರಾಜ್ಯ ಸರ್ಕಾರ ಏನು ಮಾಡಬೇಕಿದೆಯೋ ಅದನ್ನು ಮಾಡುತ್ತಿದೆ. ಸಣ್ಣ ಕೈಗಾರಿಕೆಗಳಿಂದ ದೊಡ್ಡ ಮಟ್ಟದ ಉದ್ಯೋಗ ಸೃಷ್ಠಿ ಆಗುತ್ತಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ದೊಡ್ಡದು. ಆರ್ ಬಿಐ ಮಾರ್ಗಸೂಚಿಯಲ್ಲಿ ಸಣ್ಣಕೈಗಾರಿಕೆಗಳು ಕೇಂದ್ರದ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು.
Key words: MSME, job creation , Minister, Shivanand Patil
The post MSME ಉದ್ಯೋಗ ಸೃಷ್ಠಿ ಮಾಡುವುದು ಕೇಂದ್ರದ ಕೆಲಸ- ಸಚಿವ ಶಿವಾನಂದ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




