ಮೈಸೂರು,ಜೂನ್,21,2025 (www.justkannada.in): 20 ವರ್ಷಗಳಲ್ಲಿಯೇ ನಾನು ನೋಡಿರದ ರೀತಿ ಹೃದಯಾಘಾತಗಳು ಸಂಭವಿಸುತ್ತಿವೆ. ಮೈಸೂರಿನಲ್ಲೇ ಪ್ರತಿನಿತ್ಯ 30-40 ಮಂದಿಗೆ ಹೃದಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ಮುಖ್ಯಸ್ಥ ಡಾ.ಸದಾನಂದ್ ಕಳವಳ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಜಯದೇವ ಆಸ್ಪತ್ರೆ ವೈದ್ಯ ಡಾ.ಸದಾನಂದ್, ನಾಲ್ಕೈದು ವರ್ಷಗಳಿಂದ ಹೆಚ್ಚಾಗಿ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹಠಾತ್ ಹೃದಯಾಘಾತ ಸಂಭವಿಸಿ ಚಿಕಿತ್ಸೆಗೂ ಸಮಯ ಸಿಗುತ್ತಿಲ್ಲ. 18 ವರ್ಷ, 20 ವರ್ಷದ ಯುವಕ- ಯುವತಿಯರ ಹಠಾತ್ ಸಾವು ಶಾಕ್ ಎನಿಸಿದೆ. ಮುಂಚೆ 50-60 ವರ್ಷ ಆದ ಮೇಲೆ ಹೃದಯಾಘಾತ ಕಂಡು ಬರುತ್ತಿತ್ತು.ಈಗ ಸಣ್ಣಮಕ್ಕಳಿಗೆ ಹೃದಯಾಘಾತ ಸಂಭವಿಸುತ್ತಿದೆ. ಬದಲಾದ ಜೀವನಶೈಲಿ, ಒತ್ತಡದ ಬದುಕೇ ಪ್ರಮುಖ ಕಾರಣ ಎಂದು ತಿಳಿಸಿದರು.
ಮದುವೆ ಮನೆಗಳಲ್ಲಿ, ಸಂತೋಷಕೂಟಗಳಲ್ಲಿ ,ಡ್ಯಾನ್ಸ್ ಮಾಡುತ್ತಲೇ ಸಾವುಗಳಾಗುತ್ತಿವೆ. ಕನ್ನಡದ ಕಾಮಿಡಿಯನ್ ರಾಕೇಶ್ ಪೂಜಾರಿ, ಗುಜರಾತಿನಲ್ಲಿನ ಸಾಲು-ಸಾಲು ಯುವಕರ ಸಾವು, ಯುವಕರ ಹಠಾತ್ ಸಾವು ಆತಂಕ ಹೆಚ್ಚಿಸಿದೆ. ಎಲ್ಲರದ್ದೂ ಟೇಬಲ್ ವರ್ಕ್ ಆಗಿದೆ. ಅರ್ಧ ಗಂಟೆಯೂ ಕೂಡ ವ್ಯಾಯಾಮ ಮಾಡುತ್ತಿಲ್ಲ. ಕೋವಿಡ್ ನಿಂದಲೂ ಹೃದಯಾಘಾತ ಆಗುತ್ತಿರಬಹುದು. 2020 ರಿಂದ ಹೃದಯಾಘಾತ ಪ್ರಕರಣ ಹೆಚ್ಚಾಗಿದೆ. ಕೋವಿಡ್ ನಿಂದ ರಕ್ತನಾಳ ಡ್ಯಾಮೆಜ್ ಆಗುತ್ತದೆ. ಲಾಂಗ್ ಕೋವಿಡ್ ನಿಂದಲೂ ಕೂಡ ಹೃದಯಾಘಾತ ಆಗುತ್ತಿದೆ ಎಂದು ದಯಾನಂದ್ ತಿಳಿಸಿದರು.
ಹಾಗೆಯೇ ದಿನಕ್ಕೆ 15 ನಿಮಿಷ ಸೂರ್ಯನ ಬೆಳಕಿಗೆ ಮೈ ಒಡ್ಡಬೇಕು. ಮದ್ಯಪಾನ, ಧೂಮಪಾನ ತ್ಯಜಿಸಬೇಕು. ಕರಿದ ತಿಂಡಿ ಪದಾರ್ಥಗಳ ಸೇವನೆಯೂ ಕಾರಣ ಇರಬಹುದು. ವ್ಯಾಯಾಮವನ್ನೇ ಮಾಡದೆ ಅತಿ ಹೆಚ್ಚು ವ್ಯಾಯಾಮ ಮಾಡುವುದು. ಬಲವಂತವಾಗಿ ದೇಹಕ್ಕೆ ಹೆಚ್ಚು ಒತ್ತಡ ನೀಡಿದರೆ ಸಡನ್ ಡೆತ್ ಆಗ್ತಾರೆ. ಅನ್ ಕಸ್ಟಮೈಸಡ್ ಎಕ್ಸಸೈಜ್ ನಿಂದ ಹಠಾತ್ ಸಾವು ಆಗುತ್ತವೆ. ಮೈಸೂರಿನಲ್ಲಿ ನಿತ್ಯ 30-40 ಮಂದಿಗೆ ಹೃದಯಾಘಾತದ ಚಿಕಿತ್ಸೆ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ಹೃದಯಾಘಾತ ಕುರಿತು ಡಾ.ಸದಾನಂದ್ ಆತಂಕ ವ್ಯಕ್ತಪಡಿಸಿದರು.
Key words: Mysore, 30-40 people, heart treatment every day, Dr. Sadanand
The post Mysore: ಪ್ರತಿನಿತ್ಯ 30-40 ಮಂದಿಗೆ ಹೃದಯ ಚಿಕಿತ್ಸೆ, ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.