5
April, 2026

A News 365Times Venture

5
Sunday
April, 2026

A News 365Times Venture

MYSORE: 2113 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ—ಡ್ರೋನ್ ಸರ್ವೆಗೆ ಚಾಲನೆ

Date:

 

ಮೈಸೂರು, ಏ.04: ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ವ್ಯಾಪ್ತಿಯಲ್ಲಿ ದೊಡ್ಡಮಾರಗೌಡನಹಳ್ಳಿ, ಕಮರವಳ್ಳಿ, ಬೊಮ್ಮೇನಹಳ್ಳಿ ಹಾಗೂ ನಾಗವಾಲ ಗ್ರಾಮಗಳಲ್ಲಿ ಅಂದಾಜು 2113 ಎಕರೆ ಪ್ರದೇಶದಲ್ಲಿ 50:50 ಅನುಪಾತದಲ್ಲಿ ಹೊಸ ಬಡಾವಣೆ ನಿರ್ಮಾಣ ಯೋಜನೆಗೆ ಇಂದು ಡ್ರೋನ್ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ MDA ಅಧ್ಯಕ್ಷರಾದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ ಮತ್ತು ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್‌ ಸಂಯುಕ್ತವಾಗಿ ಸರ್ವೆಗೆ ಹಸಿರು ನಿಶಾನೆ ತೋರಿಸಿದರು. ಭೂಮಿಯ ಅಳತೆ, ಗಡಿ ಗುರುತು ಹಾಗೂ ಯೋಜನಾ ರೂಪರೇಷೆಗಳನ್ನು ತ್ವರಿತವಾಗಿ ಸಿದ್ಧಗೊಳಿಸುವ ಉದ್ದೇಶದಿಂದ ಡ್ರೋನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಈ ವೇಳೆ ಡ್ರೋನ್ ಸರ್ವೆ ಕಾರ್ಯದ ಉಸ್ತುವಾರಿ ವಹಿಸಿರುವ ARV Environment Conservation Care Ltd., ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ರಾಜಗುರು, ಸೂಪರಿಂಟೆಂಡೆಂಟ್ ಇಂಜಿನಿಯರ್, ಕಾರ್ಯದರ್ಶಿಗಳು, ನಗರ ಯೋಜನಾ ಸದಸ್ಯರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ವ್ಯವಸ್ಥಾಪಕರು, ವಿಶೇಷ ರಾಜಸ್ವ ನಿರೀಕ್ಷಕರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಮುಖಂಡರು ಮತ್ತು ಭೂಮಿಯ ಮಾಲೀಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಯೋಜನೆ ಕುರಿತ ನಿರೀಕ್ಷೆಗಳು ಹೆಚ್ಚಿರುವುದಾಗಿ ತಿಳಿದುಬಂದಿದೆ.

Key words: Mysuru, Drone Survey, Begins for 2,113-Acre New Layout, MDA, Mysore.

SUMMARY: 

Mysuru: Drone Survey Begins for 2,113-Acre New Layout

Mysuru, Apr 4: The Mysuru Development Authority (MDA) has launched a drone-based survey for developing a new layout across 2,113 acres in Doddamaragowdanahalli, Kamaravalli, Bommenahalli, and Nagawala villages under a 50:50 scheme.

The survey was inaugurated by the Deputy Commissioner, who also serves as MDA Chairman, along with the Commissioner. The initiative aims to speed up land measurement, boundary identification, and planning using drone technology.

Officials from ARV Environment Conservation Care Ltd., Bengaluru, including Vice President Rajaguru, along with engineers, planning members, revenue officials, local leaders, and landowners, were present.

The post MYSORE: 2113 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ—ಡ್ರೋನ್ ಸರ್ವೆಗೆ ಚಾಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗ್ಯಾಸ್ ಸಿಗದೆ ಆಟೋ ಚಾಲಕರ ಪರದಾಟ: ಕೇಂದ್ರದ ವಿರುದ್ದ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು,ಏಪ್ರಿಲ್,4,2026 (www.justkannada.in):  ಗ್ಯಾಸ್ ಸಿಗದೆ ಆಟೋ ಚಾಲಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ...

IPL ಟಿಕೆಟ್ ಗಾಗಿ ಭಿಕ್ಷೆ ಬೇಡುತ್ತಿದ್ದಾರೆ: ಶಾಸಕರಿಗೆ ನಾಚಿಕೆಯಾಗಬೇಕು-ಡಿ.ವಿ ಸದಾನಂದಗೌಡ

ಬೆಂಗಳೂರು,ಏಪ್ರಿಲ್,4,2026 (www.justkannada.in):  ನಾಳೆ ನಡೆಯಲಿರುವ ಐಪಿಎಲ್  ಆರ್ ಸಿಬಿ ವರ್ಸಸ್ ಸಿಎಸ್...

ಗ್ಯಾಸ್ ಅಭಾವ: ಕೇಂದ್ರ ಸರ್ಕಾರವೇ ಸರಿಪಡಿಸಬೇಕು- ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು,ಏಪ್ರಿಲ್,4,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ ಪಿಜಿ ಗ್ಯಾಸ್...

ಅನುದಾನ ಕಡಿತ : ಯಾವ ಮುಖ ಇಡ್ಕೊಂಡು ವೋಟ್ ಕೇಳ್ತಾರೆ-ಆರ್.ಅಶೋಕ್

ಬಾಗಲಕೋಟೆ, ಏಪ್ರಿಲ್, 4,2026 (www.justkannada.in):   ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ಜಾತಿಗಳ...