29
August, 2025

A News 365Times Venture

29
Friday
August, 2025

A News 365Times Venture

MYSORE DRUGS MAFIA: ಎನ್.ಐ.ಎ ತನಿಖೆಗೆ ವಹಿಸಲಿ : ಬಿಜೆಪಿ OBC ಮೊರ್ಚ ಆಗ್ರಹ

Date:

ಮೈಸೂರು, ಆ.೧೬,೨೦೨೫:   390 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣ ಹಾಗೂ ಬೃಹತ್ ಡ್ರಗ್ಸ್ ಜಾಲ ತಯಾರಿಕಾ ಘಟಕ ರಿಂಗ್ ರಸ್ತೆಯಲ್ಲೇ ಪತ್ತೆಯಾಗಿದ್ದು ಆತಂಕಕಾರಿ ಸಂಗತಿ. ರಾಜ್ಯ ಪೊಲೀಸರು ಈ ಜಾಲ ಪತ್ತೆ ಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಬಿಜೆಪಿ ಒತ್ತಾಯಿಸಿದೆ.

ಈ ಸಂಬಂಧ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ದ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದಿಷ್ಟು..

ಮೈಸೂರಿನಲ್ಲಿರುವ ಡ್ರಗ್ಸ್ ತಯಾರಿಕೆಯ ಸುಳಿವನ್ನು ಮಹಾರಾಷ್ಟ್ರ ಪೋಲಿಸರು ಬೇಧಿಸಿರುವುದು ಇಡೀ ರಾಜ್ಯದಲ್ಲೆ ಬಹುದೊಡ್ಡ ಡ್ರಗ್ಸ್ ಕಾರ್ಯಾಚರಣೆ ಇದು ಎಂದು ವರದಿಯಾಗಿದೆ. ಇದು ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸಕ್ಕೆ ಕಪ್ಪು ಚುಕ್ಕಿ ಬಳಿದಂತಾಗಿದೆ.

ಈ ಡ್ರಗ್ಸ್ ಹಗರಣ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಈ ಸಂಬಂಧ ಪೋಲಿಸರು ಮಾಮೂಲಿ ಪ್ರಕರಣದಂತೆ ಸಣ್ಣ-ಪುಟ್ಟ ಡ್ರಗ್ಸ್ ವ್ಯಸನಿಗಳನ್ನು ಕರೆತಂದು ವಿಚಾರಣೆ ನಡೆಸಿ, ತನಿಖೆ ವಿಚಾರಣೆ ಹಳ್ಳ ಹಿಡಿಸಿದ್ದಾರೆ.  ರಾಜ್ಯ ಸರ್ಕಾರವಾಗಲೀ, ಜಿಲ್ಲಾಡಳಿತವಾಗಲೀ, ಸ್ಥಳೀಯ ಆಡಳಿತವಾಗಲೀ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಈ ಡ್ರಗ್ಸ್ ಜಾಲದ ಹಿಂದೆ ದೊಡ್ಡ ಮಾಫಿಯಾ ಕೈವಾಡ ಇರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಪೋಲಿಸರಿಗೆ ಬಂದು ಈ ಡ್ರಗ್ಸ್ ಮಾಫಿಯಾ ಬೇಧಿಸುತ್ತಾರೆ ಎಂದರೆ ಮೈಸೂರಿನ ಕಾನೂನು ಸುವ್ಯವಸ್ಥೆ ಹಾಗೂ ಕ್ರಿಮಿನಲ್‌ ಅಪರಾಧಗಳನ್ನು ಪತ್ತೆ ಹಚ್ಚಲೆಂದೇ ನೇಮಿಸಿರುವ ಸಿಸಿಬಿ ಏನು ಮಾಡುತ್ತಿದೆ? ಇದರಲ್ಲಿ ಕಾಣದ ಕೈಗಳು ಈ ಜಾಲವನ್ನು ನಿಯಂತ್ರಿಸುತ್ತಿದ್ದು, ಜಾಲ ಬೇಧಿಸಲು ಪೋಲಿಸ್ ಕಮಿಷನರ್ ನೇಮಿಸಿದ 2 ತಂಡ ಈವರೆವಿಗೂ ಏನು ಮಾಡಿದೆ? ಈ ಜಾಲದ ಹಿಂದಿರುವ ಆ ಶಕ್ತಿ ಯಾವುದು? ಈ ನಿಟ್ಟಿನಲ್ಲಿ ಎಷ್ಟು ಪ್ರಭಾವಿಗಳನ್ನು ಬಂಧಿಸಲಾಗಿದೆ ಎಂಬ ಪ್ರಶ್ನೆ ನಗರದ ನಾಗರಿಕರನ್ನು ಕಾಡುತ್ತಿದೆ ಎಂದರು.

ಘಟನೆ ಬಳಿಕ ಇನ್ಸ್‌ಪೆಕ್ಟರ್‌ ಲಕ್ಷ್ಮೀಕಾಂತ್ ಕೆ. ತಳವಾರ್ ಅವರನ್ನು ಅಮಾನತ್ತು ಮಾಡಲಾಯಿತು. ಆದರೆ ವಿಪರ್ಯಾಸವೆಂದರೆ ಈ ಆದೇಶ ಹೊರ ಬಿದ್ದು ಕೆಲವೇ  ಗಂಟೆಗಳಲ್ಲಿ ಅಮಾನತ್ತು ರದ್ದಾಯಿತು. ಅಮಾನತ್ತುಗೊಳಿಸಿದ್ದಾದರೂ ಏಕೆ? ಅಮಾನತ್ತನ್ನು ರದ್ದು ಪಡಿಸಿದ್ದಾದರೂ ಏಕೆ? ರದ್ದು ಪಡಿಸಿದ ಹಿಂದಿನ ಕಾರಣವೇನು? ಎನ್ನುವದನ್ನು ಪೋಲಿಸರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕಿದೆ ಎಂದು ರಘು ಕೌಟಿಲ್ಯ ಒತ್ತಾಯಿಸಿದರು.

ಡ್ರಗ್ ಮಾಫಿಯಾ ಜಾಲದಲ್ಲಿ ಕರ್ನಾಟಕ ಸಿಲುಕಿ ನರಳದಂತೆ ಅದರನ್ನೂ ಶಾಂತಿಪ್ರಿಯ ಸಾಂಸ್ಕೃತಿಕ ನಗರಿ ಮೈಸೂರು ಡ್ರಗ್ ಜಾಲಕ್ಕೆ ಸಿಕ್ಕಿ ಮುಳುಗದಂತೆ ಎಚ್ಚರಿಕೆ ವಹಿಸಬೇಕಿದೆ. ದೇಶದ ಯುವ ಶಕ್ತಿಯನ್ನು ಡ್ರಗ್ ಮಾಫಿಯಾ ಜಾಲದಲ್ಲಿ ಸಿಲುಕಿಸಿ, ಆ ಮೂಲಕ ಅವರನ್ನು ದುರ್ಬಲಗೊಳಿಸುವ ಹುನ್ನಾರದ ಹಿಂದೆ ವಿದೇಶಿ ಶಕ್ತಿಗಳ ಪಿತೂರಿ ಇರುವಂತಿದೆ.  ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಮೈಸೂರಿನ ಡ್ರಗ್ ಮಾಫಿಯಾ ಜಾಲದ ಹಿಂದಿರುವ ಶಕ್ತಿಗಳ  ಕೈವಾಡ ಬಯಲಿಗೆಳೆಯಲು “ ರಾಷ್ಟ್ರೀಯ ತನಿಖಾ ದಳ” ಕ್ಕೆ ಈ ಪ್ರಕರಣವನ್ನು ವಹಿಸುವಂತೆ ಆದೇಶಿಸಲಿ ಎಂದು ರಘು ಒತ್ತಾಯಿಸಿದರು.

key words: MYSORE DRUGS MAFIA, NIA, investigation, BJP OBC Morcha, Raghu Kautilya

vtu

SUMMARY: 

MYSORE DRUGS MAFIA: NIA should be entrusted with the investigation: BJP OBC Morcha demands

The case of seizure of drugs worth Rs 390 crore and the discovery of a huge drug manufacturing unit on the Ring Road itself is a worrying fact. The state police have completely failed to detect this network and the BJP has demanded that the case be handed over to the National Investigation Agency.

The post MYSORE DRUGS MAFIA: ಎನ್.ಐ.ಎ ತನಿಖೆಗೆ ವಹಿಸಲಿ : ಬಿಜೆಪಿ OBC ಮೊರ್ಚ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...