ಮೈಸೂರು,ಜುಲೈ,29,2025 (www.justkannada.in): ಮೈಸೂರಿನಲ್ಲಿ ನಡೆದಿರುವ ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಎಂಬಂತೆ ಡ್ರಗ್ಸ್ ವಿಚಾರದಲ್ಲಿ ರಾಷ್ಟ್ರದ್ಯಂತ ಮಾನ ಹೋದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಮೈಸೂರು ಡ್ರಗ್ಸ್ ಮಾಫಿಯಾ ಇಡೀ ದೇಶವನ್ನ ಬೆಚ್ಚಿ ಬೀಳಿಸುವಂತಿದ್ದು, ಮೈಸೂರು ಟು ಮಹಾರಾಷ್ಟ್ರ ಲಿಂಕ್ ನಲ್ಲಿ ನೂರಾರು ಕೋಟಿ ಡ್ರಗ್ಸ್ ವ್ಯವಹಾರ ನಡೆದಿದೆ ಎನ್ನಲಾಗಿದೆ. ಇಡೀ ದೇಶಾದ್ಯಂತ ಜಾಲ ಹಬ್ಬಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಮೈಸೂರು ಡ್ರಗ್ಸ್ ಫ್ಯಾಕ್ಟರಿ ಕೇಸ್ ನಲ್ಲಿ ಬರೋಬ್ಬರಿ 390 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು, ಮೈಸೂರು ದಾಳಿಯ ಬಳಿಕ ಮುಂಬೈನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. 2 ದಾಳಿಯಲ್ಲಿ ಒಟ್ಟು 192 ಕೆಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು 8 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕಾರ್ಯಚರಣೆಯಲ್ಲಿ 4 ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಮೆಫೆ ಡ್ರೋನ್ ತಯಾರಿಸಲು ಮೂಲ ವಸ್ತು ಎಲ್ಲಿಂದ ಬಂತು ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು8 ಜನರ ಮೇಲೆ ಎನ್.ಡಿ. ಪಿ.ಎಸ್ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.
ಡ್ರಗ್ಸ್ ಫ್ಯಾಕ್ಟರಿ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ ಬಳಿಕ ನಡೆಸಿದ ಅಲರ್ಟ್ ಆದ ಮೈಸೂರು ಪೊಲೀಸರು ಡ್ರಗ್ಸ್ ದಂಧೆ ಮೇಲೆ ದಾಳಿ ನಡೆಸಿದ್ದಾರೆ. ಮೈಸೂರು ಪೊಲೀಸ್ ಕಮಿಷನರ್ ಮಿಂಚಿನ ಬೇಟೆ ನಡೆಸಿದ್ದು , ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಗಾಂಜಾ ಸೇವಿಸುತ್ತಿದ್ದ 42 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ.
ತಡರಾತ್ರಿ ನಗರದ ಅನೇಕ ಕಡೆ ಪೊಲೀಸರು ದಾಳಿ ನಡೆಸಿದ್ದು ಪೊಲೀಸ್ ಕಮಿಷನರ್ ಖುದ್ದು ಫಿಲ್ಡ್ ಗೆ ಇಳಿದು ಕಾರ್ಯಾಚರಣೆ ನಡೆಸಿದ್ದಾರೆ. ಮಂಡಿ, ಪುಲಿಕೇಶಿ ರಸ್ತೆ, ಮೀನಾ ಬಜಾರ್ , ಉದ್ಯಾನವನಗಳು ಸೇರಿ ಅನೇಕ ಕಡೆ ತಪಾಸಣೆ ಮಾಡಿದ್ದು ಗಾಂಜಾ ಸೇರಿ ಮಾದಕ ವಸ್ತುಗಳನ್ನ ಸೀಜ್ ಮಾಡಿದ್ದಾರೆ.
ಹೆಸರಿಗೆ ಕಾರ್ ಗ್ಯಾರೇಜ್ ಆದರೆ ಹಿಂದೆ ಮಾಡುತ್ತಿದ್ದುದ್ದು ಡ್ರಗ್ ತಯಾರಿ, ಹೌದು ಮುಂದೆ ಕಾರು ಗ್ಯಾರೇಜ್ ಮಾಡಿಕೊಂಡು ಹಿಂದೆ ಡ್ರಗ್ಸ್ ಉತ್ಪಾದನೆ ಮಾಡಿ ಮೈಸೂರಿನಿಂದ ಡ್ರಗ್ಸ್ ಬೇರೆ ಕಡೆಗೆ ಸರಬರಾಜು ಮಾಡಲು ಆರೋಪಿಗಳು ಪ್ಲಾನ್ ಹಾಕಿಕೊಂಡಿದ್ದರು.
ಅಜ್ಮಲ್ ಎಂಬುವವರು 20 ಸಾವಿರಕ್ಕೆ ಬಾಡಿಗೆಗೆ ಜಾಗ ಪಡೆದಿದ್ದರು. ಬಳಿಕ ಅದೇ ಜಾಗವನ್ನು 1 ಲಕ್ಷ ರೆಂಟ್ ಗೆ ಬೇರೆ ವ್ಯಕ್ತಿಗೆ ಬಾಡಿಗೆಗೆ ಕೊಟ್ಟಿದರು ಎಂಬ ಅಂಶ ಬೆಳಕಿಗೆ ಬಂದಿದೆ. ಆರೋಪಿಗಳು ಮುಂದೆ ಕಾರು ಗ್ಯಾರೇಜ್ ಮಾಡಿಕೊಂಡು ಹಿಂದೆ ಡ್ರಗ್ಸ್ ತಯಾರಿಸುತ್ತಿದ್ದು, 15 ದಿನಗಳಲ್ಲಿ 12 ಕೆಜಿ ಡ್ರಗ್ಸ್ ತಯಾರಿಸಲು ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ರಾತ್ರಿಯಿಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಡ್ರಗ್ಸ್ ಸಾಗಾಟದ ಕುರಿತು ತಲಾಶ್ ಮಾಡಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ರಿಂಗ್ ರಸ್ತೆಗಳಲ್ಲಿ ಓಡಾಡುವ ವಾಹನಗಳ ತೀವ್ರ ತಪಾಸಣೆ ನಡೆಸಿದ್ದು ಮೈಸೂರು ನಗರದಾದ್ಯಂತ ನಾಕಾಬಂದಿ ಹಾಕಿ ಮೈಸೂರು ನಗರದ ವಿವಿದೆಡೆ ಡಿಸಿಪಿ, ಎಸಿಪಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಾರು, ಆಟೋ, ಬಸ್, ಸ್ಕೂಟರ್ ಗಳನ್ನು ಪೊಲೀಸರು ತೀವ್ರ ತಪಾಸಣೆಗೊಳಪಡಿಸಿದ್ದಾರೆ.
ಮಾದಕವಸ್ತು ಜಾಲ ಪತ್ತಗೆ 7 ತಂಡ ರಚನೆ
ಹಾಗೆಯೇ ಮಾದಕವಸ್ತು ಜಾಲ ಪತ್ತೆಗೆ 7 ತಂಡ ರಚನೆ ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಇಬ್ಬರು ಡಿಸಿಪಿ, ನಾಲ್ವರು ಎಸಿಪಿಗಳು ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.
Key words: MYSORE, DRUGS MAFIA, Police, alerted, after, looting
The post MYSORE DRUGS MAFIA; ಕೊಳ್ಳೆ ಹೊಡೆದ ಮೇಲೆ ಎಚ್ಚೆತ್ತ ಪೊಲೀಸರು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.