12
November, 2025

A News 365Times Venture

12
Wednesday
November, 2025

A News 365Times Venture

 MYSORE PALACE:  ಅವ್ಯವಹಾರ ತನಿಖಾ ವರದಿ ಸಲ್ಲಿಸಿದ ಮೈಸೂರು ಪ್ರಾದೇಶಿಕ ಆಯುಕ್ತರು

Date:

ಮೈಸೂರು, ಫೆಬ್ರವರಿ,21,2025 (www.justkannada.in): ಮೈಸೂರು ಅರಮನೆಯ ಆಡಿಯೋ ಗೈಡ್ ಸೇವೆಯ ಟೆಂಡರ್ ಪ್ರಕ್ರಿಯೆಯಲ್ಲಿಅವ್ಯವಹಾರ ನಡೆಸಿರುವ ವಿಚಾರದಲ್ಲಿ ಹಿಂದಿನ ಅರಮನೆ ಮಂಡಳಿಯ ಉಪನಿರ್ದೇಶಕರಾಗಿದ್ದ ಪಿ.ವಿ. ಅವರಾದಿ ಹಾಗೂ ಮೆ|| ನ್ಯಾರೋಕ್ಯಾಸ್ಟರ್ಸ್ ಪ್ರೈಲಿ. ನವದೆಹಲಿ ಮತ್ತು ವಕೀಲ ವಿ.ರವಿಕುಮಾರ್ ಅವರ ವಿರುದ್ದ ವಕೀಲ ಆರ್.ರಮೇಶ್ ಸಲ್ಲಿಸಿರುವ ದೂರು ಮನವಿಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಂಡು ವರದಿಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಮೈಸೂರುವಿಭಾಗಕ್ಕೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಕನ್ನಡ ಮತ್ತು ಸಂಸ್ಕೃತ ಇಲಾಖೆ)  ಆದೇಶಿಸಿದ್ದರು.  ಈ ಸಂಬಂಧ ಇದೀಗ ಸರ್ಕಾರಕ್ಕೆ ಮೈಸೂರಿನ ಪ್ರಾದೇಶಿಕ ಆಯುಕ್ತರು ತಪಾಸಣಾ ವರದಿ ಸಲ್ಲಿಸಿದ್ದಾರೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿರುವ ಮೈಸೂರಿನ ಪ್ರಾದೇಶಿಕ ಆಯುಕ್ತರ ರಮೇಶ್ ಡಿಎಸ್  ಅವರು, ‘’ಮೈಸೂರು ವಕೀಲ ಆರ್.ರಮೇಶ್  ಅವರು ಸಲ್ಲಿಸಿರುವ ದೂರು ಮನವಿಯಲ್ಲಿ, ಮೈಸೂರು ಅರಮನೆ ಮಂಡಳಿಯ ಆಡಿಯೋಗೈಡ್ ಸೇವೆಯ ಟೆಂಡರ್ ಪ್ರಕ್ರಿಯೆಯಲ್ಲಿ ಮೆ|| ನ್ಯಾರೋ ಕ್ಯಾಸ್ಟರ್ಸ್ ಪ್ರೈ.ಲಿ. ನವದೆಹಲಿ ಅವರೊಂದಿಗೆ ಹಿಂದಿನ ಉಪನಿರ್ದೇಶಕರಾದ ಪಿ.ವಿ.ಅವರಾದಿರವರು ಕೈಜೋಡಿಸಿಅವ್ಯವಹಾರ ನಡೆಸಿರುವರೆಂದು, ವಕೀಲ ಆರ್.‌ ರಮೇಶ್‌ ರವರು ಮಾಡಿರುವ ಆರೋಪಗಳ ಕುರಿತಂತೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲು ಮತ್ತು ಪ್ರಸ್ತುತ ಮೈಸೂರು ಅರಮನೆ ಮಂಡಳಿಯಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಎಸ್.ಸುಬ್ರಮಣ್ಯ ‘ಅವರಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಸೂಕ್ತ ರಕ್ಷಣೆ ನೀಡುವಂತೆ ಕೋರಿರುತ್ತಾರೆ.

ದೂರು ಮನವಿಯನ್ನು ಪರಿಶೀಲಿಸಿದ ಮೈಸೂರು ಪ್ರಾದೇಶಿಕ ಆಯುಕ್ತರು, ಮೈಸೂರು ಅರಮನೆ ಮಂಡಳಿಗೆ ನ್ಯಾರೋಕ್ಯಾಸ್ಟರ್ಸ್ ಪ್ರೈ.ಲಿ., ದೆಹಲಿ ಇವರು ಆಡಿಯೋ ಗೈಡ್ ಸೇವೆ ಒದಗಿಸುತ್ತಿರುವ ಕುರಿತು ಸರ್ಕಾರದ ದಿನಾಂಕ 11-02-2014ರ ಪತ್ರದ ನಿರ್ದೇಶನದಂತೆ ಈ ಕಚೇರಿಯಿಂದ ತಪಾಸಣೆ ನಡೆಸಿ, ತಪಾಸಣಾ ವರದಿಯನ್ನು ಈ ಕಚೇರಿಯ ಆಡಳಿತ/ಸಿಆರ್/01/2014-15 ದಿನಾಂಕ 26-09-2014 ರಲ್ಲಿಯ ಆಡಿಯೋ ಗೈಡ್ ಸೇವೆಯ ಟೆಂಡರ್ ಪ್ರಕ್ರಿಯೆಯು ನಿಯಮಬಾಹಿರವಾಗಿ ನಡೆದಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದು ಸೂಕ್ತವೆಂದು ಅಭಿಪ್ರಾಯಿಸಿ, ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಬೆಂಗಳೂರುರವರ ಕಚೇರಿಗೆ ವರದಿಯನ್ನು ಸಲ್ಲಿಸಲಾಗಿರುತ್ತದೆ.

ಮೈಸೂರು ಅರಮನೆ ಮಂಡಳಿಯ ಆಡಿಯೋ ಗೈಡ್ ಸೇವೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವಿತ ಕಡತವನ್ನು ಕನ್ನಡ ಮತ್ತು ‘ಸಂಸ್ಕೃತಿ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ವರ್ಗಾಯಿಸಿರುವುದಾಗಿ ತಿಳಿದುಬಂದಿರುವುದರಿಂದ, ಸದರಿ ದೂರು ಮನವಿ ಹಾಗೂ ದಾಖಲಾತಿಗಳನ್ನ ಸರ್ಕಾರಕ್ಕೆ ಸಲ್ಲಿಸಿರುವ ತಪಾಸಣಾ ವರದಿಯನ್ನು ಈ ಕೂಡ ಲಗತ್ತಿಸಿ ಸಲ್ಲಿಸಿದ ತಮ್ಮ ಅವಗಾಹನನೆಗಾಗಿ ಸಲ್ಲಿಸಿದೆ’’ ಎಂದು ತಿಳಿಸಿದ್ದಾರೆ.

Key words: MYSORE PALACE,  Mysore Regional Commissioner, Mysore Palace,  audio guide service , Report

The post  MYSORE PALACE:  ಅವ್ಯವಹಾರ ತನಿಖಾ ವರದಿ ಸಲ್ಲಿಸಿದ ಮೈಸೂರು ಪ್ರಾದೇಶಿಕ ಆಯುಕ್ತರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...