ಬೆಂಗಳೂರು,ಫೆಬ್ರವರಿ,4,2026 (www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹತ್ತಾರು ಕ್ರಮಗಳನ್ನ ಕೈಗೊಳ್ಳುತ್ತಿದ್ದು ಇದೀಗ ಹೊಸ ಟಾಸ್ಕ್ ಕೊಡಲು ಮುಂದಾಗಿದೆ.
ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು ‘ಟಿವಿ, ಮೊಬೈಲ್ ಸ್ವಿಚ್ ಆಫ್’ ಟಾಸ್ಕ್ ರೂಪಿಸಿದೆ. ಪರೀಕ್ಷೆಗಳು ಸಮೀಪಿಸುತ್ತಿದ್ದಂತೆಯೇ ಪ್ರತಿ ದಿನ ಸಂಜೆ 7 ಗಂಟೆಯಿಂದ 9ರವರೆಗೆ ಎರಡು ಗಂಟೆ ಮೊಬೈಲ್ ಮತ್ತು ಟಿವಿ ಸ್ವಿಚ್ ಆಫ್ ಮಾಡಿಸುವಂತೆ ಸೂಚಿಸಿದೆ.
ಮೊಬೈಲ್ ಗೀಳಿನಿಂದದಾಗಿ ವಿದ್ಯಾರ್ಥಿಗಳು ಓದಿನಿಂದ ದೂರವಿರುತ್ತಾರೆ. ಹೀಗಾಗಿ ಓದಿನ ಕಡೆ ಗಮನ ಹರಿಸಲು ಟಿವಿ, ಮೊಬೈಲ್ ಸ್ವಿಚ್ ಆಫ್ ಟಾಸ್ಕ್ ನಡೆಸುವಂತೆ ಸೂಚಿಸಿದೆ.
ಪಿಡಿಓಗಳ ಹಂತದಲ್ಲಿಯೂ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಮುಖ್ಯಶಿಕ್ಷಕರೂ ಪೋಷಕರಿಗೆ ತಿಳಿಸಬೇಕು. ಡಂಗೂರು ಬಾರಿಸಿ ಪೋಷಕರಿಗೆ ಜಾಗೃತಿ ಮಾಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Education Department, plan, SSLC, results, TV, mobile, switch off
The post SSLC ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಪ್ಲಾನ್: ಟಿವಿ, ಮೊಬೈಲ್ ‘ಸ್ವಿಚ್ ಆಫ್ ಟಾಸ್ಕ್’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




