28
March, 2026

A News 365Times Venture

28
Saturday
March, 2026

A News 365Times Venture

UNIVERSITY OF MYSORE:  ಹಾಲಿ ಕುಲಪತಿ ಪ್ರೊ. ಲೋಕನಾಥ್‌ ಹೇಳಿಕೆಗೆ ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಕಿಡಿ.

Date:

 

ಮೈಸೂರು, ಮಾ.೨೭,೨೦೨೬:  ಹಾಲಿ ಕುಲಪತಿ  ಪ್ರೊ.ಲೋಕನಾಥ (Prof. Lokanath)  ನೀಡಿದ ಹೇಳಿಕೆಗೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ (Prof. K. S. Rangappa) ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಯುವರಾಜ ಕಾಲೇಜಿನ ₹1 ಕೋಟಿ ಅನುದಾನ ದುರ್ಬಳಕೆ, ಆಡಿಟ್‌ ಆಕ್ಷೇಪ ಮತ್ತು ಸ್ವಾಯತ್ತತೆಗೆ ತೊಂದರೆ ಎಂಬ ಆರೋಪವನ್ನು “ಸತ್ಯಕ್ಕೆ ದೂರವಾದ ಹೇಳಿಕೆ” ಎಂದು ರಂಗಪ್ಪ ತಳ್ಳಿ ಹಾಕಿದ್ದಾರೆ. ಸುಳ್ಳು ಹೇಳಿಕೆ ನೀಡುವ ಮೂಲಕ ಕುಲಪತಿ ಪ್ರೊ.ಲೋಕನಾಥ್‌ ಅವರು ಗುರುವಾರ ನಡೆದ ಮೈಸೂರು ವಿವಿ ಬಜೆಟ್‌ ಸಭೆಯಲ್ಲಿ ಭಾಗವಹಿಸಿದ್ದ ಶೈಕ್ಷಣಿಕ ಮಂಡಳಿ ಸದಸ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರೊ. ರಂಗಪ್ಪ ಅವರು ಹೇಳಿರಿವುದಿಷ್ಟು..

ಸ್ವಾಯತ್ತತೆ ಸ್ಥಗಿತಕ್ಕೆ ‘ಬಲವಂತ’ ಆರೋಪ :

ಯುವರಾಜ ಕಾಲೇಜಿನ ಅಟಾನಮಸ್‌ ಸ್ಥಾನಮಾನ ಸ್ಥಗಿತದ ಹಿಂದೆ ಒತ್ತಡ ರಾಜಕಾರಣವಿದೆ ಎಂದು ರಂಗಪ್ಪ ಗಂಭೀರ ಆರೋಪ ಮಾಡಿದ್ದಾರೆ. ಉಪನ್ಯಾಸಕರಿಂದ “ಸ್ವಾಯತ್ತತೆ ಬೇಡ” ಎಂಬ ಪತ್ರಗಳನ್ನು ಬಲವಂತವಾಗಿ ಬರೆಯಿಸಿಕೊಂಡು, ಕಾಲೇಜಿನ ಸ್ವಾಯತ್ತ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ದೂಷಿಸಿದ್ದಾರೆ.

₹16 ಕೋಟಿ ಅಭಿವೃದ್ಧಿ, ‘ಆಡಿಟ್‌ ಆಕ್ಷೇಪ ಇಲ್ಲ’:

ತಮ್ಮ ಅವಧಿಯಲ್ಲಿ ಯುವರಾಜ ಕಾಲೇಜಿಗೆ ₹16 ಕೋಟಿ ಅನುದಾನ ತಂದು ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗಿದೆ ಎಂದು ರಂಗಪ್ಪ ಸ್ಪಷ್ಟಪಡಿಸಿದ್ದಾರೆ. 2017ರಲ್ಲಿ ನಿವೃತ್ತಿಯಾಗುವ ವೇಳೆಗೆ ಯಾವುದೇ ಆಡಿಟ್‌ ಆಕ್ಷೇಪ ಇರಲಿಲ್ಲ ಎಂದು ಹೇಳಿರುವ ಅವರು ಈ ಸಂಬಂಧ  “ಬಹಿರಂಗ ಚರ್ಚೆಗೆ ಸಿದ್ಧ” ಎಂದು ನೇರ ಸವಾಲು ಹಾಕಿದ್ದಾರೆ.

A-ಸ್ಕೀಮ್ ರದ್ದು: ಪ್ರತಿಭಾವಂತರಿಗೆ ಹೊಡೆತ

ಯುವರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯ A-ಸ್ಕೀಮ್ ಮತ್ತು B-ಸ್ಕೀಮ್ ವ್ಯವಸ್ಥೆಯಲ್ಲಿ ಉದ್ದೇಶಪೂರ್ವಕ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. A-ಸ್ಕೀಮ್‌ನಲ್ಲಿ 50% ಸೀಟುಗಳು ಮೆರಿಟ್‌ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದರೆ, ಉಳಿದ ಸೀಟುಗಳನ್ನು B-ಸ್ಕೀಮ್‌ನಲ್ಲಿ ಶುಲ್ಕ ಆಧಾರಿತ ಪ್ರವೇಶಕ್ಕೆ ನಿಗಧಿ ಪಡಿಸಲಾಗಿದೆ. ಆದರೆ ಪ್ರೊ.ಲೋಕನಾಥ್‌ ಕುಲಪತಿಯಾದ ಬಳಿಕ ಉದ್ದೇಶಪೂರ್ವಕವಾಗಿ A-ಸ್ಕೀಮ್ ರದ್ದು ಮಾಡಿದ ಪರಿಣಾಮ, ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಹೊರಗಿನ ಕಾಲೇಜುಗಳಿಗೆ ತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಂಗಪ್ಪ ದೂರಿದರು.

ಕೋರ್ಸ್‌ಗಳ ಮುಚ್ಚುವಿಕೆ: ‘ಹಸಿ ಸುಳ್ಳು’ ಆರೋಪ :

“ಯಾವುದೇ ಕೋರ್ಸ್‌ ಮುಚ್ಚಿಲ್ಲ” ಎಂಬ ಹಾಲಿ ಆಡಳಿತದ ಹೇಳಿಕೆಯನ್ನು ಪ್ರೊ. ರಂಗಪ್ಪ ಖಂಡಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಹಲವಾರು ಕೋರ್ಸ್‌ಗಳಿಗೆ ಬೀಗ ಜಡಿಯಲಾಗಿದೆ. ಈ ಪರಿಣಾಮ ಮೈಸೂರು ವಿವಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತಗೊಂಡಿದೆ. ಜತೆಗೆ ಅಕಾಡೆಮಿಕ್‌ ವಾತಾವರಣ ಹಿನ್ನಡೆ ಕಂಡಿದೆ.

ಈ ಬಗ್ಗೆ  “ಆಂತರಿಕ ತನಿಖೆ ನಡೆಸಿ ನಿಜಾಂಶ ಬಹಿರಂಗಪಡಿಸಲಿ” ಎಂದು ಪ್ರೊ.ರಂಗಪ್ಪ ಸವಾಲು ಹಾಕಿದ್ದಾರೆ.

₹400 ಕೋಟಿ ನಿಧಿ vs ಖಾಲಿ ಬೊಕ್ಕಸ:

ತಮ್ಮ ಅವಧಿಯಲ್ಲಿ ಪೆನ್ಷನರ್ಸ್‌ ಹಾಗೂ ಜನರಲ್‌ ಫಂಡ್ ಸೇರಿ ₹400 ಕೋಟಿ ಕಾರ್ಪಸ್‌ ನಿರ್ಮಿಸಿದ್ದಾಗಿ ಪ್ರೊ. ರಂಗಪ್ಪ ಹೇಳಿದ್ದಾರೆ. ಆದರೆ ಹಾಲಿ ಆಡಳಿತದಲ್ಲಿ ಟೆಂಡರ್‌ಗಳ ಹೆಸರಿನಲ್ಲಿ ಖರ್ಚು ಹೆಚ್ಚಾಗಿ, ವಿವಿಯ ಬೊಕ್ಕಸ ಖಾಲಿಯಾಗುತ್ತಿದೆ ಎಂದು ಟೀಕಿಸಿದ್ದಾರೆ.

‘ಫಿನಾಯಿಲ್‌ಗೂ ಹಣ ಇಲ್ಲ’: ಆಡಳಿತ ವೈಫಲ್ಯ ಆರೋಪ :

ವಿಶ್ವವಿದ್ಯಾನಿಲಯದ ಆಡಳಿತ ಸ್ಥಿತಿ ಕುಸಿದಿದೆ. ವಿವಿಯ ಶೌಚಾಲಯ ಸ್ವಚ್ಛತೆಗೆ ಫಿನಾಯಿಲ್‌ ಖರೀದಿಸಲು ಹಣವಿಲ್ಲ. ಸಂಶೋಧನೆಗೆ ಅಗತ್ಯವಾದ ರಾಸಾಯನಿಕ, ಉಪಕರಣಗಳ ಖರೀದಿಗೆ ಆರ್ಥಿಕ ಕೊರತೆ ಎದುರಾಗಿದೆ. ಜತೆಗೆ ದೈನಂದಿನ ನಿರ್ವಹಣೆಯಲ್ಲೇ ಸಂಕಷ್ಟ  “ಈ ಪರಿಸ್ಥಿತಿಯಲ್ಲಿ ಗುಣಮಟ್ಟ ಹೇಗೆ ಉಳಿಯುತ್ತದೆ?” ಎಂದು ಎಂದು ಪ್ರೊ. ರಂಗಪ್ಪ  ಪ್ರಶ್ನಿಸಿದ್ದಾರೆ.

Key words: Mysore University Row, Rangappa, Lokanath, “False Claims”

SUMMARY:

Mysore University Row: Rangappa Slams Lokanath Over “False Claims”

Former Vice-Chancellor Prof. K. S. Rangappa has strongly refuted allegations made by current VC Prof. Lokanath regarding ₹1 crore fund misuse at University of Mysore’s Yuvaraja College, calling them “far from truth.”

Rangappa alleged that the college’s autonomous status was scrapped by forcing faculty to submit letters opposing autonomy. He maintained that during his tenure, ₹16 crore was sanctioned for infrastructure and there were no audit objections, challenging the VC for an open debate.

He further accused the current administration of: Scrapping the A-scheme, hurting meritorious poor students, Shutting down several courses in the last 3 years.

Mismanaging funds despite a ₹400 crore corpus built earlier

In a sharp remark, Rangappa said the university is in such poor condition that it lacks funds even for basic sanitation like phenyl, questioning how research will be supported.

The escalating war of words has raised serious concerns over governance and academic standards at Mysore University.

 

The post UNIVERSITY OF MYSORE:  ಹಾಲಿ ಕುಲಪತಿ ಪ್ರೊ. ಲೋಕನಾಥ್‌ ಹೇಳಿಕೆಗೆ ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಕಿಡಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಳೆಯಿಂದ IPL ಶುರು: ಶಾಸಕರಿಗೆ 2 ಟಿಕೆಟ್ ನೀಡಲು KSCA ಒಪ್ಪಿಗೆ

ಬೆಂಗಳೂರು,ಮಾರ್ಚ್,27,2026 (www.justkannada.in): ನಾಳೆಯಿಂದ   ಐಪಿಎಲ್  ಹಂಗಾಮ ಶುರುವಾಗಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ...

ಬೈಎಲೆಕ್ಷನ್:  ‘ಕೈ’ ಬಂಡಾಯ ಶಮನ: ಅಖಾಡದಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

ಬೆಂಗಳೂರು,ಮಾರ್ಚ್,27,2026 (www.justkannada.in):  ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯವೆದ್ದು ನಾಮಪತ್ರ...

ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ  ನಾವೇ ಗೆಲ್ಲುತ್ತೇವೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,27,2026 (www.justkannada.in): ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯವೆದ್ದಿದ್ದ ಸಾಧಿಕ್ ಪೈಲ್ವಾನ್ ಅವರ...

ಉರುಳಿಗೆ ಸಿಲುಕಿ ಹುಲಿ ಬಲಿ

ಮೈಸೂರು,ಮಾರ್ಚ್,27,2026 (www.justkannada.in): ನಾಗರಹೊಳೆ ಹುಲಿ ಮೀಸಲು ಅರಣ್ಯದ ಮೆಟ್ಟಿಕುಪ್ಪೆ ಶ್ರೇಣಿಯ ಬಳಿ...