26
March, 2026

A News 365Times Venture

26
Thursday
March, 2026

A News 365Times Venture

ಅಧಿವೇಶನದಲ್ಲಿ ಸರ್ಕಾರದ ತಪ್ಪು ಹೊರಗೆಳೆಯುವ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ- ಆರ್.ಅಶೋಕ್

Date:

ಬೆಂಗಳೂರು,ಮಾರ್ಚ್,26,2026 (www.justkannada.in):  ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ತಪ್ಪುಗಳನ್ನು ಹೊರಗೆಳೆಯುವ  ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಇಂದಿಗೆ ವಿಧಾನಮಂಡಲ ಬಜೆಟ್ ಅಧಿವೇಶನ ಕೊನೆಗೊಂಡಿದ್ದು ವಿಧಾನಸಭೆ ಮತ್ತು ಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್ ,ಸರ್ವೇ ಅಧಿಕಾರಿಯೊಬ್ಬ ಲಂಚ ಪಡೆದು ಸಿಕ್ಕಿಬಿದ್ದು ಸಸ್ಪೆಂಡ್ ಆಗಿದ್ದಾನೆ. ಫೋನ್ ಪೇನಲ್ಲಿ ಲಂಚ ತೆಗೆದುಕೊಂಡು ಸಿಕ್ಕಿಬಿದ್ದಿದ್ದಾನೆ. ಜಕ್ಕೂರು ಏರೋ ಡ್ರೋಮ್ ಪರಭಾರೆಗೆ ಮುಂದಾಗಿದ್ದರು. ನಾವು ಹೋರಾಟ ಮಾಡಿ ಅದನ್ನ ಉಳಿಸಿದ್ದೇವೆ. ಇವತ್ತು ಬೆಂಗಳೂರು ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿದ್ದಾರೆ.  ಅಧಿವೇಶನದಲ್ಲಿ ಸರ್ಕಾರದ ಕಿವಿ ಹಿಡುವ ಕೆಲಸ ಮಾಡಿದ್ದೇವೆ ಎಂದರು.

ಈ ಬಾರಿಯ ಬಜೆಟ್ ನಲ್ಲಿ ಸಾಲದ ಕೂಪವೇ ಇದೆ. ರಾಜ್ಯದ ಜನತೆಯ ಮೇಲೆ ಸಾಲದ ಹೊರೆಯೇ ಹಾಕಿದ್ದಾರೆ ಸರ್ಕಾರ ತಪ್ಪು ಒಪ್ಪಿಕೊಳ್ಳುವ ರೀತಿ ಹೋರಾಟ ಮಾಡಿದ್ದೇವೆ.  ಮೈಸೂರು ಸಿಲ್ಕ್ ಫ್ಯಾಕ್ಟರಿ ಉಳಿಸುವ ಕೆಲಸ ಮಾಡಿದ್ದೇವೆ. ಸರ್ಕಾರದ ತಪ್ಪುಗಳನ್ನ ಹೊರಗೆಳೆಯುವ ಕೆಲಸ ಮಾಡಿದ್ದೇವೆ. ಎಲ್ಲಾ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.

Key words: Budget Session, exposing, government, mistakes, R. Ashok

The post ಅಧಿವೇಶನದಲ್ಲಿ ಸರ್ಕಾರದ ತಪ್ಪು ಹೊರಗೆಳೆಯುವ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಳೆ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ಮೀಟಿಂಗ್

ನವದೆಹಲಿ,ಮಾರ್ಚ್,26,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು...

ಮುಡಾ (MDA) ಮಾಜಿ ಆಯುಕ್ತ ದಿನೇಶ್  ಮತ್ತೊಂದು ಹಗರಣ : ಮಾಸಿಕ ₹265 ಬಾಡಿಗೆಗೆ ಮೊಬೈಲ್ ಟವರ್ ಅನುಮತಿ!

  ಮೈಸೂರು, ಮಾ.೨೬,೨೦೨೬: ಮುಡಾ (MDA) ಮಾಜಿ ಆಯುಕ್ತ ದಿನೇಶ್ ಕುಮಾರ್ ಅವಧಿಯಲ್ಲಿ...

ಪಾರಂಪರಿಕ ಕಟ್ಟಡ ರಕ್ಷಣೆಗೆ ಪಾಲಿಕೆಯ ಕೊಡುಗೆ ಏನು? ಮಾಜಿ ಮೇಯರ್ ಶಿವಕುಮಾರ್  ಟೀಕೆ

ಮೈಸೂರು,ಮಾರ್ಚ್,26,2026 (www.justkannada.in): ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ....

 ಅಭಾವ ಸಂದರ್ಭದಲ್ಲಿ ಅನಗತ್ಯ ಗ್ಯಾಸ್ ಖರೀದಿ ಮಾಡಬೇಡಿ- ಸಚಿವ ಕೆ.ಎಚ್ ಮುನಿಯಪ್ಪ ಮನವಿ

ಬೆಂಗಳೂರು,ಮಾರ್ಚ್,26,2026 (www.justkannada.in):  ಅಭಾವ ಸಂದರ್ಭದಲ್ಲಿ ಅನಗತ್ಯ ಗ್ಯಾಸ್ ಖರೀದಿ ಮಾಡಬೇಡಿ. ಗ್ಯಾಸ್...