30
April, 2026

A News 365Times Venture

30
Thursday
April, 2026

A News 365Times Venture

ಅಪರೇಷನ್ ಸಿಂಧೂರ್: 21 ಉಗ್ರ ಕ್ಯಾಂಪ್ ಗಳು ಧ್ವಂಸ: ಸೇನಾಧಿಕಾರಿಗಳಿಂದ ಮಾಹಿತಿ

Date:

ನವದೆಹಲಿ,ಮೇ,7,2025 (www.justkannada.in): ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಅಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ನೂರಕ್ಕೂ ಹೆಚ್ಚು ಉಗ್ರರನ್ನ ಫಿನೀಶ್ ಮಾಡಿದೆ.

ಈ ಕುರಿತಂತೆ ಭಾರತೀಯ ಸೇನಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ್ದಾರೆ. ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ ಮಿಸ್ರಿ, ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಅವರು ಮಾತನಾಡಿ ದಾಳಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ವಿಕ್ರಮ ಮಿಸ್ರಿ, ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನ ಉಗ್ರರು ಹತ್ಯೆ ಮಾಡಿದ್ದರು. ಕುಟುಂಬಸ್ಥರ ಎದುರೆ ಪ್ರವಾಸಿಗರನ್ನ ಉಗ್ರರು ಕೊಂದಿದ್ದರು. ಪಾಕಿಸ್ತಾನ ಉಗ್ರರ ಸ್ವರ್ಗ ಎಂಬುದನ್ನ ಮತ್ತೊಮ್ಮೆ ತೋರಿಸಿಕೊಟ್ಟಿದೆ  ಉಗ್ರರ ದಾಳಿಯಿಂದ ಮೃತಪಟ್ಟವರ ಕುಟುಂಕ ನ್ಯಾಯ ಸಿಗಬೇಕು. ಈ  ನಿಟ್ಟಿನಲ್ಲಿ ನಾವು  ಅಪರೇಷನ್ ಸಿಂಧೂರ ಕಾರ್ಯಾಚರಣೆ ಮಾಡಿ ಉಗ್ರರ ನೆಲೆಗಳನ್ನ ಧ್ವಂಸ ಮಾಡಲಾಗಿದೆ.  ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಕಳೆದ 1 ವರ್ಷದಲ್ಲಿ 2.5 ಕೋಟಿ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಜಮ್ಮು ಕಾಶ್ಮೀರದ ಅಭಿವದ್ದಿ ಸಹಿಸದೆ ದಾಳಿ ನಡೆಸಿದ್ದಾರೆ. ಪಹಲ್ಗಾಮ್   ದಾಳಿಯಲ್ಲಿ ಪಾಕಿಸ್ತಾನದ ಲಿಂಕ್ ಇರುವುದು ಸಾಬೀತಾಗಿದೆ ಎಂದರು.

21 ಉಗ್ರರ ಕ್ಯಾಂಪ್ ಗಳು ಧ್ವಂಸ- ಕರ್ನಲ್ ಸೋಫಿಯಾ ಖುರೇಶಿ

ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 21 ಉಗ್ರರ ಕ್ಯಾಂಪ್ ಗಳನ್ನ ಧ್ವಂಸ ಮಾಡಲಾಗಿದೆ.  ಉಗ್ರರ ಬರ್ನಾಲಾ ಕ್ಯಾಂಪ್ ಉಡೀಸ್ ಮಾಡಲಾಗಿದೆ. ಉಗ್ರರ ತರಬೇತಿ ನೀಡುವ ಕೇಂದ್ರಗಳನ್ನ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ರಾತ್ರಿ 1.05 ರಿಂದ  25 ನಿಮಿಷದಲ್ಲಿ ಕಾರ್ಯಾಚರಣೆ ಮುಗಿಸಿದ್ದೇವೆ 25 ನಿಮಿಷದಲ್ಲಿ 9 ಕಡೆ ಕಾರ್ಯಾಚರಣೆ ನಡೆಸಿದ್ದೇವೆ. ಪಾಕ್ ನ 4 ಉಗ್ರರ ನೆಲೆಗಳು ಪಿಒಕೆಯ 5 ನೆಲೆಗಳು ಉಡೀಸ್ ಮಾಡಲಾಗಿದೆ ಎಂದು ತಿಳಿಸಿದರು.

Key words: Operation Sindhur,  21 terrorist camps, destroyed, army officials

The post ಅಪರೇಷನ್ ಸಿಂಧೂರ್: 21 ಉಗ್ರ ಕ್ಯಾಂಪ್ ಗಳು ಧ್ವಂಸ: ಸೇನಾಧಿಕಾರಿಗಳಿಂದ ಮಾಹಿತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಮತ್ತೊಂದು ಬಲಿ:  ಈವರೆಗೆ 10 ಮಂದಿ ಸಾವು

ಬೆಂಗಳೂರು,ಏಪ್ರಿಲ್,30,2026 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆ...

ಪ.ಬಂಗಾಳ ವಿಧಾನಸಭಾ ಚುನಾವಣಾ ಮತದಾನ: ಈವರೆಗೆ ಶೇ 61.11 ರಷ್ಟು ಮತದಾನ

ಕೋಲ್ಕತ್ತಾ,ಏಪ್ರಿಲ್,29,2026 (www.justkannada.in): ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ...

ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ ಒಂದು ಶಕ್ತಿ – ಸಚಿವ HC ಮಹದೇವಪ್ಪ

ನವದೆಹಲಿ,ಏಪ್ರಿಲ್,29,2026 (www.justkannada.in): ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ...

ಧರ್ಮಸ್ಥಳದಿಂದ ವಾಪಸ್ಸಾಗುವಾಗ ದುರಂತ: ನಾಲೆಗೆ ಕಾರು ಬಿದ್ದು ತಾಯಿ ಮಗು ಸಾವು

ಹಾಸನ,ಏಪ್ರಿಲ್,29,2026 (www.justkannada.in): ಧರ್ಮಸ್ಥಳದಿಂದ ವಾಪಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್...