ಬೆಂಗಳೂರು,ಫೆಬ್ರವರಿ,12,2026 (www.justkannada.in): ಕಾಂಗ್ರೆಸ್ ಕೆಲ ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿರುವ ಆರ್.ಅಶೋಕ್, ಸಿಎಂ ಸ್ಥಾನದ ಮ್ಯೂಸಿಕಲ್ ಚೇರ್ ನಡುವೆ ವಿದೇಶಿ ಟ್ರಿಪ್ ಸರ್ಕಾರ ದಿವಾಳಿಯಾಗಿದೆ. ಅಭಿವೃದ್ದಿಗೆ ಹಣವಿಲ್ಲ. ಹೀಗಾಗಿ ಇಲ್ಲಿದ್ದು ಏನು ಮಾಡಬೇಕೆಂದು ಶಾಸಕರು ವಿದೇಶಿ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಅಭಿವೃದ್ಧಿಗೆ ಹಣವಿಲ್ಲದ್ದಕ್ಕೆ ಶಾಸಕರು ಫಾರಿನ್ ಟೂರ್ ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಐಪಿಎಲ್ ಕಾಲ್ತುಳಿತ ಪ್ರಕರಣಕ್ಕೆ ಕೆಎಸ್ ಸಿಎ ಕಾರಣವಲ್ಲ ಸರ್ಕಾರ ಕಾರಣ. ಇವರ ಮನೆ ಮಕ್ಕಳನ್ನೆಲ್ಲಾ ಕರೆತಂದು ಕಾರ್ಯಕ್ರಮ ಮಾಡಿದ್ದು ತಪ್ಪು ಸರ್ಕಾರಕ್ಕೆ ಭದ್ರತೆ ಕೊಡುವ ಯೋಗ್ಯತೆ ಸಾಮರ್ಥ್ಯವಿದ್ರೆ ಕೊಡಲಿ ಎಂದರು.
Key words: Foreign tour, MLAs, development, R. Ashok
The post ಅಭಿವೃದ್ಧಿಗೆ ಹಣವಿಲ್ಲದ್ದಕ್ಕೆ ಶಾಸಕರಿಂದ ಫಾರಿನ್ ಟೂರ್- ಆರ್ .ಅಶೋಕ್ ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




