14
February, 2026

A News 365Times Venture

14
Saturday
February, 2026

A News 365Times Venture

ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ- ಜಯದೇವ್

Date:

ಮೈಸೂರು,ಫೆಬ್ರವರಿ,14,2026 (www.justkannada.in): ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ ಗಾಂಧಿವಾದಿ ಜಯದೇವ್ ಅಭಿಪ್ರಾಯ ಪಟ್ಟರು.

ಬದನವಾಳು ಸತ್ಯಾಗ್ರಹದ ಸತ್ಯಾಗ್ರಹಿಗಳ ಸಮಾಲೋಚನಾ ಸಭೆ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಜರುಗಿತು. ಸಭೆಯಲ್ಲಿ ಗಾಂಧಿವಾದಿಗಳಾದ ಪ್ರಸನ್ನ, ಜಯದೇವ್, ತುಮಕೂರಿನಿಂದ ಯತಿರಾಜ್, ಚಾಮರಾಜನಗರದಿಂದ ವೆಂಕಟರಾಜು, ಪುಣಜೂರು ದೊರೆಸ್ವಾಮಿ, ಎ.ಡಿ. ಸಿಲ್ವಾ, ತಗಡೂರು ಮೋಹನ್, ಬದನವಾಳು ಮಹದೇವಪ್ಪ, ಉಮಾಶಂಕರ್, ಬೆಂಗಳೂರಿನಿಂದ ಪವಿತ್ರ ಮುದ್ದಯ್ಯ, ಗ್ರಾಮ ಸೇವಾ ಸಂಘದಿಂದ ಲಾವಣ್ಯ, ಅಭಿಲಾಷ್, ಲೇಖಕರಾದ ಜಿ. ಪಿ. ಬಸವರಾಜು ಆಂದೋಲನ ಪತ್ರಿಕೆಯ ರಶ್ಮಿ ಕೋಟಿ ಮತ್ತು ರೈತರಾದ ಕರುಣಾಕರ್ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಸನ್ನ ಅವರು ನಿರ್ಣಯವನ್ನು ಸಭೆಯಲ್ಲಿ ಓದಿದರು. ಭಾಗವಹಿಸಿದ ಎಲ್ಲರೂ ಈ ಕರಡು ನಿರ್ಣಯಕ್ಕೆ ಎಲ್ಲರೂ ತಮ್ಮ ಸಮ್ಮತಿ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಅವರು, 15 ವರ್ಷಗಳ ಹಿಂದೆ ನಡೆದ ಬದನವಾಳು ಸತ್ಯಾಗ್ರಹ ಮುಖ್ಯವಾಗಿ ಅತಿಯಾದ ವಾಹನಗಳ ಬಳಕೆ, ಆಡಂಬರದ  ಕಾರ್ಯಕ್ರಮಗಳು ಹಾಗೂ ವ್ಯಾಪಾರೀಕರಣ ಇಂತಹ ವಿಚಾರವನ್ನು ಮುಖ್ಯವಾಗಿರಿಸಿಕೊಂಡು ಆರಂಭವಾಗಿ ಚಳುವಳಿಯ ರೂಪ ತಳೆಯಿತು. ಆದರೆ ಇಂದು ಕೂಡ ಪರಿಸ್ಥಿತಿ ಬದಲಾಗಿಲ್ಲ ಹಾಗಾಗಿ ಈ ಸತ್ಯಾಗ್ರವನ್ನು ಮುನ್ನಡೆಸಿಕೊಂಡು ಹೋಗಲು ಚರ್ಚಿಸುವುದು ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ  ಸರ್ಕಾರವು ಬದನವಾಳು ನಂಜನಗೂಡು ಖಾದಿ ಕೇಂದ್ರದ ಅಭಿವೃದ್ಧಿಗೆ 40ಕೋಟಿ ಸರ್ಕಾರ ಮಂಜೂರು ಮಾಡಿದೆ. ಸರ್ಕಾರ ಕೇವಲ ಕಟ್ಟಡ ಕಟ್ಟುವುದನ್ನು ಬೆಳವಣಿಗೆ ಎಂದು ತಿಳಿದಿದೆ. ಬದನವಾಳು ಖಾದಿ ಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ಖಾದಿಯ ಬಟ್ಟೆಗಳ ಮಾರಾಟದ ಮೂಲಕ ಮತ್ತೆ ಗ್ರಾಮೀಣ ಮಹಿಳೆಯರಿಗೆ ಅವರ ಊರಿನಲ್ಲೇ ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸಾಧ್ಯವಿದೆ. ಬದನವಾಳಿಗೆ ಗಾಂಧೀಜಿ ಭೇಟಿ ಕೊಟ್ಟ ಕಾರಣಕ್ಕೆ ಈ ಖಾದಿ ಕೇಂದ್ರಕ್ಕೆ ಅತಿ ಹೆಚ್ಚು ಮಹತ್ವ ಬಂದಿದೆ. ಗ್ರಾಮ ಬದುಕಿನ ಮಹತ್ವ ಸಾರುವ ಸುಸ್ಥಿರ ಬದುಕಿನ ಕನಸನ್ನು ನನಸು ಮಾಡಬೇಕಿದೆ. ಈ ಸಂಬಂಧ ನಡೆದ ಸಭೆಯಲ್ಲಿ ಬದನವಾಳು ಸತ್ಯಾಗ್ರವನ್ನು ಗ್ರಾಮ ಸತ್ಯಾಗ್ರಹ ಎಂದು ಮರುನಾಮಕರಣ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ನಿರ್ಣಯದ ಕುರಿತು ದೀರ್ಘವಾಗಿ ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕರಡು ನಿರ್ಣಯ

2015ರ ಚಾರಿತ್ರಿಕ ಬದನವಾಳು ಸತ್ಯಾಗ್ರಹದ ನಿರ್ಣಯಗಳು ಜಾರಿಗೊಳ್ಳದೆ ಉಳಿದಿದೆ. ಸುಸ್ಥಿರ ಬದುಕು ಹಾಗೂ ಸುಸ್ಥಿರ ಆರ್ಥಿಕತೆಗಳು ಕೇವಲ ಮರೀಚಿಕೆಯಾಗಿವೆ. ನಗರಗಳು ಹಾಗೂ ಯಂತ್ರನಾಗರೀಕತೆ ರಾಕ್ಷಸಾಕಾರವಾಗಿ ಬೆಳೆದು ಮನುಕುಲವನ್ನೇ ವಿನಾಶದ ಅಂಚಿಗೆ ತಳ್ಳಿದೆ.

Key words: Village satyagraha, continued,non-violent movement, Jayadev

The post ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ- ಜಯದೇವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯುತ್‌ ಅವಘಡಗಳ ಪ್ರಮಾಣ ಶೂನ್ಯಕ್ಕೆ ತರುವ ಗುರಿ ಇರಲಿ- ರಮೇಶ್‌ ಬಂಡಿಸಿದ್ದೇಗೌಡ

ಮೈಸೂರು, ಫೆಬ್ರವರಿ,14, 2026 (www.justkannada.in): ವಿದ್ಯುತ್ ಅವಘಡಗಳ ಪ್ರಮಾಣ ತಪ್ಪಿಸಿ ಅದನ್ನು...

ಮೈಸೂರು ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ” Gen Z”  ಥೀಮ್ ಪೋಸ್ಟ್ ಆಫೀಸ್ ಯೋಜನೆ

  ಮೈಸೂರು, ಫೆ.೧೪,೨೦೨೬:  ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಶೀಘ್ರದಲ್ಲೇ ‘Gen Z...

ಸರ್ಕಾರಕ್ಕೆ ಸಾವಿರ ದಿನ: ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ ವಿಶ್ವಾಸ ಗಳಿಸಿದೆ-ಹೆಚ್.ಎ ವೆಂಕಟೇಶ್

ಬೆಂಗಳೂರು,ಫೆಬ್ರವರಿ,14,2026 (www.justkannada.in): ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯಧಿಕ ಬಹುಮತದಿಂದ ಅಧಿಕಾರಕ್ಕೆ ಬಂದು...

ಮೈಸೂರು ಪೊಲೀಸರ ಕಾರ್ಯಾಚರಣೆ: 4 ಲಕ್ಷ ಮೌಲ್ಯದ ಮಾದಕ ವಸ್ತು ವಶ: ಆರೋಪಿ ಬಂಧನ

ಮೈಸೂರು,ಫೆಬ್ರವರಿ,14,2026 (www.justkannada.in): ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು...