12
February, 2026

A News 365Times Venture

12
Thursday
February, 2026

A News 365Times Venture

ಆಟೋಮ್ಯಾಟಿಕ್ ರಿಸೆರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಇಂಡಸ್ಟ್ರಿ ರಾಜ್ಯಕ್ಕೆ : ಮಂಡ್ಯ ದಲ್ಲೇ ಟೆಸ್ಟಿಂಗ್ ಸೆಂಟರ್ ನಿರ್ಮಾಣ.

Date:

ಮೈಸೂರು, ಫೆ.೦೮,೨೦೨೬: ರಾಜ್ಯದಲ್ಲಿ ಆಟೋ ಮೊಬೈಲ್ ಇಂಡಸ್ಟ್ರಿ ತರಲು ಮುಂದಾಗಿದ್ದೇವೆ. ಆಟೋಮ್ಯಾಟಿಕ್ ರಿಸೆರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಇಂಡಸ್ಟ್ರಿ ರಾಜ್ಯಕ್ಕೆ ತರುತ್ತೇವೆ. ಮಂಡ್ಯ ದಲ್ಲೇ ಈ ಟೆಸ್ಟಿಂಗ್ ಸೆಂಟರ್ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ಸರಕಾರಿ ಅತಿಥಿಗೃಹದಲ್ಲಿ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದಿಷ್ಟು…

ಮಂಡ್ಯಕ್ಕೆ ಹಾಗೂ ರಾಜ್ಯಕ್ಕೆ ಕುಮಾರಸ್ವಾಮಿ ಏನು ತಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಾರೆ. ಕೇಂದ್ರ ಸರ್ಕಾರ ನನಗೆ ಮತ್ತೆರಡು ಜವಾಬ್ದಾರಿ ನೀಡಿದೆ. ಈ ಸಂಬಂಧ ಈಗಾಗಲೇ, ಆಟೋ ಮೊಬೈಲ್ ಸೆಂಟರ್ ನಿರ್ಮಾಣಕ್ಕೆ ಭೂಮಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆ‌ಯ ಘಟಕ ತೆರೆಯಲು 100 ಏಕರೆ  ಜಾಗವನ್ನು ಮಂಡ್ಯದಲ್ಲೇ ಕೊಡಲು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

ಕುಮಾರಸ್ವಾಮಿ ಮಂಡ್ಯಗೆ,  ರಾಜ್ಯಕ್ಕೆ ಏನು ತಂದ್ರು ? ಅಂತಾ ಪ್ರತಿ ನಿತ್ಯ ಮಂಡ್ಯ ಶಾಸಕರು ಸಣ್ಣತನದಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್ ನಲ್ಲಿ ಉತ್ತರವಿದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಈ ಬಗ್ಗೆ ಭೂಮಿ ಕೊಡಲು ಸಿಎಂ ಗೆ ನಾನೇ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ.  ನಾಟಕವಾಡಲು ಪ್ರಧಾನಿಗಳು ನಂಗೆ ಈ ಸ್ಥಾನ ಕೊಟ್ಟಿಲ್ಲ. ರಾಜ್ಯದ ಕೈಗಾರಿಕಾ ಅಭಿವೃದ್ಧಿ ಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ ಎಂದು ಕೇಂದ್ರ ಬಜೆಟ್‌ ಅನ್ನು ಎಚ್ಡಿಕೆ ಸಮರ್ಥಿಸಿಕೊಂಡರು.

ಮೆಟ್ರೋ ಯೋಜನೆಗೆ ಸಾಲ ಮಾಡಿ ತೀರಿಸಲು ಸರ್ಕಾರದ ಬಳಿ ದುಡ್ಡಿಲ್ಲ. ಬಡ್ಡಿ ಕಟ್ಟಲು ದುಡ್ಡಿಲ್ಲ, ಅದಕ್ಕೆ ಹಣ ಒದಗಿಸಲು ಜನರಿಗೆ ಬರೆ ಹಾಕಿ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ. ಮೆಟ್ರೋ ದರ ಕಡಿಮೆ ಮಾಡಿ ಎಂದು ಕೇಂದ್ರದಿಂದ ಪತ್ರ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೇಂದ್ರದ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡು ರಾಜ್ಯಕ್ಕೆ ಬೇಕಾದ ಕೊಡುಗೆ ಗಳನ್ನು ಪಡೆದುಕೊಳ್ಳಿ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಆರೋಪಿಸುತ್ತಾರೆ. ಮಾವು ಬೆಲೆ ಕುಸಿತ ವಾದರೂ ಕೇಂದ್ರ ಸರ್ಕಾರ ಎಂದು ಕಾರಣ ಹೇಳುತ್ತಾರೆ ಎಂದು ಟೀಕಿಸಿದರು.

ಬಜೆಟ್‌ ಸಮರ್ಥನೆ:

ಇಂದಿನ ಬಜೆಟ್ ಆರ್ಥಿಕವಾಗಿ ಮುನ್ನುಗ್ಗುಲು ಶಕ್ತಿ ನೀಡಿದೆ. ಮುಂದಿನ 20 ವರ್ಷಕ್ಕೆ ಆರ್ಥಿಕವಾಗಿ ಒಂದನೇ ಸ್ಥಾನಕ್ಕೆ ಬರಲು ಫೌಂಡೇಶನ್ ಆಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸೆಂಟ್ರಲ್‌ ಬಜೆಟ್‌ ಅನ್ನು ಸಮರ್ಥಿಸಿಕೊಂಡರು.

ಕೇಂದ್ರದೊಂದಿಗೆ ರಾಜ್ಯಸರ್ಕಾರ ವಿಶ್ವಾಸದಿಂದಿಲ್ಲ. ರಾಜ್ಯದ ಮಂತ್ರಿಗಳಲ್ಲಿ ಒಬ್ಬರಿಗೊಬ್ಬರಿಗೆ ವಿಶ್ವಾಸ ವಿಲ್ಲಾ. ನನ್ನ ಜೊತೆ ಮಾತನಾಡಲು ಅವರಿಗೆ ಅಸೂಯೆ ಕಾಡುತ್ತಿದೆ. ಜೆಡಿಎಸ್ ಮುಗಿದೇ ಹೋಯ್ತು ಅನ್ನುತ್ತಿದ್ದರು,  ಆದರೆ ಕೇಂದ್ರದಲ್ಲಿ ಆಡಳಿತ ಸಿಕ್ಕಿದೆ ಇದನ್ನ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಸಿಎಂ ಸಂಕುಚಿತ:

16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ  ಕೇಂದ್ರ ಬಜೆಟ್ ಬಗ್ಗೆ ಸಂಕುಚಿತ ಭಾವನೆ ತೋರಿದರು. ಕೇಂದ್ರದ ದೂರದೃಷ್ಟಿಯ ಬಜೆಟ್ ಸಿಎಂ ಗೆ ಅರ್ಥ ಆಗಿಲ್ಲ. ಕೇಂದ್ರದ ಬಜೆಟ್ ಬಗ್ಗೆ ಸಿಎಂ ಬಹಳ ಲಘುವಾಗಿ ಮಾತಾಡಿದ್ದಾರೆ.  ಖಾಲಿ ಚೆಂಬಿನ ಕ್ರೇಡಿಟ್ ರಾಜ್ಯ ಸರಕಾರಕ್ಕೆ ಹೋಗಬೇಕು. ರಾಜ್ಯ ಸರಕಾರ ಖಾಲಿ ಚೆಂಬನ್ನು ಎರಡು ವರ್ಷದಿಂದ ಜನರಿಗೆ ಕೊಡುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಟೀಕಿಸುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಲೇವಡಿ ಮಾಡಿದರು.

key words: Automatic Research Association of India, ARAI, Industry, testing center, Mandya , HDK

SUMMARY:

Automatic Research Association of India (ARAI) Industry for the State: Construction of this testing center in Mandya itself.

The central government has given me two more responsibilities. In this regard, a letter has already been written to Chief Minister Siddaramaiah asking him to provide land for the construction of an automobile center. I have written a letter to the state government to provide 100 acres of land in Mandya to open a unit of Automotive Research India. In this regard, the central government is committed to the establishment of the automobile industry, he said.

The post ಆಟೋಮ್ಯಾಟಿಕ್ ರಿಸೆರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಇಂಡಸ್ಟ್ರಿ ರಾಜ್ಯಕ್ಕೆ : ಮಂಡ್ಯ ದಲ್ಲೇ ಟೆಸ್ಟಿಂಗ್ ಸೆಂಟರ್ ನಿರ್ಮಾಣ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

 ಮಹಾಶಿವರಾತ್ರಿ: ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು,ಫೆಬ್ರವರಿ,12,2026 (www.justkannada.in): ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಮೂಹ ದೇವಸ್ಥಾನಗಳಲ್ಲಿ...

ಗಾಂಜಾ ಮಾರಾಟ: ಆರೋಪಿತನಿಗೆ 4 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್

ಮೈಸೂರು,ಫೆಬ್ರವರಿ,12,2026 (www.justkannada.in): ಗಾಂಜಾ ಮಾರಾಟ: ಆರೋಪಿತನಿಗೆ 4 ವರ್ಷಗಳ ಕಠಿಣ ಶಿಕ್ಷೆ...

ಅಭಿವೃದ್ಧಿಗೆ ಹಣವಿಲ್ಲದ್ದಕ್ಕೆ ಶಾಸಕರಿಂದ ಫಾರಿನ್ ಟೂರ್- ಆರ್ .ಅಶೋಕ್ ವ್ಯಂಗ್ಯ

ಬೆಂಗಳೂರು,ಫೆಬ್ರವರಿ,12,2026 (www.justkannada.in): ಕಾಂಗ್ರೆಸ್ ಕೆಲ ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ವಿಚಾರ...

ಇನ್ನೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಿದ್ರೆ ನನ್ನತನ ಏನು ಉಳಿಯುತ್ತೆ- ಸಚಿವ ಕೃಷ್ಣಭೈರೇಗೌಡ

ಶಿವಮೊಗ್ಗ,ಫೆಬ್ರವರಿ,12,2026 (www.justkannada.in):  ಸಿಎಂ ಬದಲಾವಣೆ  ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ...