ಬೆಂಗಳೂರು,ಏಪ್ರಿಲ್,17,2026 (www.justkannada.in) : ಇತ್ತೀಚೆಗೆ ಚಿಕ್ಕಮಗಳೂರಿನ ಮಾಣಿಕ್ಯಧಾರದ ಬಳಿಕ ಕೇರಳ ಮೂಲದ ಬಾಲಕಿ ಸಾವನ್ನಪ್ಪಿದ ಬೆನ್ನಲ್ಲೆ ಇದೀಗ ಇನ್ಮುಂದೆ ಚಾರಣಕ್ಕೆ ತೆರಳುವವರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ರಾಜ್ಯದಲ್ಲಿ ಚಾರಣಕ್ಕೆ ತೆರಳುವವರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ ಮೊಟ್ಟ ಮೊದಲ ಬಾರಿಗೆ ಚಾರಣಕ್ಕೆ ಹೋಗುವವರಿಗೆ ಎಸ್ ಒಪಿ ರಿಲೀಸ್ ಮಾಡಲಾಗಿದೆ.
ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ರಾಜ್ಯದಲ್ಲಿ 44 ಚಾರಣ ಪಾಯಿಂಟ್ ಗಳು ಚಾಲ್ತಿಯಲ್ಲಿವೆ. ಕಡ್ಡಾಯವಾಗಿ ಎಸ್ ಒಪಿ ಜಾರಿಗೆ ತರಲು ಸೂಚನೆ ನೀಡಿದ್ದೇವೆ. ಚಾರಣಿಗರ ಮೊಬೈಲ ಗೆ ಟ್ರ್ಯಾಕಿಂಗ್ ಆಫ್ ಅಳವಡಿಕೆ ಮಾಡುತ್ತೇವೆ. 10 ಚಾರಣಿಗರಿಗೆ ಒಬ್ಬ ಗೈಡ್ ಲೈನ್ ಇರಬೇಕು. ಚಾರಣಕ್ಕೆ ಹೋಗುವವರು ಆನ್ ಲೈನ್ ನಲ್ಲಿ ಬುಕ್ ಮಾಡಬೇಕು. 10 ಮಂದಿಗೆ ಒಬ್ಬ ಗೈಡ್ ಲೈನ್ ಕೊಟ್ಟ ನಂತರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಒಮ್ಮೆ 150 ಮಂದಿ ಮಾತ್ರ ಚಾರಣಕ್ಕೆ ಹೋಗಬೇಕು. 150 ಮಂದಿಯ ತಂಡ ವಾಪಸ್ ಬಂದ ಬಳಿಕ ಮತ್ತೊಂದು ತಂಡ ಹೋಗಬೇಕು. ಕಟ್ಟುನಿಟ್ಟಾಗಿ ಎಸ್ ಒಪಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
Key words: Guidelines, treks, Minister, Ishwar Khandre
The post ಇನ್ಮುಂದೆ ಚಾರಣಕ್ಕೆ ತೆರಳುವವರಿಗೆ ಮಾರ್ಗಸೂಚಿ: ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಸಚಿವ ಈಶ್ವರ್ ಖಂಡ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




