4
May, 2026

A News 365Times Venture

4
Monday
May, 2026

A News 365Times Venture

ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ: ಊಹಿಸಲಾಗದಂತಹ ಶಿಕ್ಷೆ ನಿಶ್ಚಿತ- ಪ್ರಧಾನಿ ಮೋದಿ

Date:

ಬಿಹಾರ,ಏಪ್ರಿಲ್,24,2025 (www.justkannada.in):  ಜಮ್ಮುಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಸಂಬಂಧ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ,  ಉಗ್ರರಿಗೆ ಊಹಿಸಲಾಗದಂತಹ ಶಿಕ್ಷೆ ನಿಶ್ಚಿತ ಎಂದು ಹೇಳಿದ್ದಾರೆ.

ಬಿಹಾರದ ಮಧು ಬನಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸಿದರು.

ಬಳಿಕ ಮಾತನಾಡಿದ ಅವರು,  ಅಮಾಯಕ ಜನರನ್ನ ಉಗ್ರರು ಕೊಂದಿದ್ದಾರೆ.  ಕನ್ನಡಿಗರು ಸೇರಿ ಹಲವು ಮಂದಿಯನ್ನ ಕೊಂದಿದ್ದಾರೆ.  ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ಕೊಡುತ್ತೇವೆ. ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ. ಉಗ್ರರಿಗೆ ತಕ್ಕ ಪಾಠ ಕಳಿಸುತ್ತೇವೆ. ಊಹಿಸಲು ಅಸಾಧ್ಯವಾದ ಶಿಕ್ಷೆ ನೀಡುತ್ತೇವೆ ಎಂದರು.

ಇದು ಪ್ರವಾಸಿಗರ ಮೇಲೆ ಆಗಿರುವ ದಾಳಿ ಮಾತ್ರ ಅಲ್ಲ ಭಾರತದ ಆತ್ಮದ ಮೇಲೆ ಆಗಿರುವ ದಾಳಿ.   142 ಕೋಟಿ ಭಾರತೀಯರ ಇಚ್ಚಾಶಕ್ತಿ ಉಗ್ರರ ಹುಟ್ಟಡಗಿಸಲಿದೆ. ಬಿಹಾರದ ನೆಲದಿಂದ ಎಚ್ಚರಿಕೆ ನೀಡುತ್ತೇನೆ. ಭಾರತವನ್ನ ಹೆದರಿಸೋಕೆ ಆಗುವುದಿಲ್ಲ.  ಉಗ್ರರಿಗೆ ಶಿಕ್ಷೆ ಖಚಿತ ಎಂದು ನುಡಿದರು.

Key words: Pahalgam, terrorists Attack,  Prime Minister, Modi

The post ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ: ಊಹಿಸಲಾಗದಂತಹ ಶಿಕ್ಷೆ ನಿಶ್ಚಿತ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೆಲ್ಲುವ ಕಡೆ ಜಮೀರ್, ಸೋಲುವ ಕಡೆ ಡಿಕೆಶಿ ಕಳಿಸ್ತಾರೆ- ಆರ್.ಅಶೋಕ್ ಲೇವಡಿ

ಬೆಂಗಳೂರು,ಮೇ,4,2026 (www.justkannada.in):  ಗೆಲ್ಲುವ ಕಡೆ ಜಮೀರ್ ರನ್ನು ಸೋಲುವ ಕಡೆ ಡಿಕೆ...

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ...

ಬಾಗಲಕೋಟೆ ಬೈ ಎಲೆಕ್ಷನ್: ‘ಕೈ’ ಅಭ್ಯರ್ಥಿ ಉಮೇಶ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ...

ಸಿದ್ದರಾಮಯ್ಯ ಜನಪ್ರಿಯತೆ, ಗ್ಯಾರಂಟಿ ನಮ್ಮ ಕೈಹಿಡಿದಿದೆ – ಸಚಿವ ಆರ್.ಬಿ ತಿಮ್ಮಾಪುರ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ...