ಬಾಗಲಕೋಟೆ,ಮಾರ್ಚ್,23,2026 (www.justkannada.in): ಬಾಗಲಕೋಟೆ, ದಾವಣಗೆರೆ ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸದ್ಯದ ವಾತಾವರಣ ನೋಡಿದರೆ ಕಮಲ ಹೂವು ಅರಳೋದು ಖಚಿತ .ಬಿಜೆಪಿ ಗೆಲುವನ್ನ ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದೆ ಶಿರಾ, ಕೆಆರ್ ಪೇಟೆಯಲ್ಲಿ ಕಾಂಗ್ರೆಸ್ ಕುತಂತ್ರ ಮಾಡಿತ್ತು. ಯಾವುದೇ ಕ್ಷಣದಲ್ಲೂ ನಮ್ಮ ಕಾರ್ಯಕರ್ತರು ಮೈಮರೆಯಬಾರದು ಮತ ಹಾಕುವ ಕೊನೇ ದಿನದವರೆಗೂ ಎಚ್ಚರಿಕೆಯಿಂದ ಕೆಲಸಮಾಡಿ ಎಂದು ಸಲಹೆ ನೀಡಿದರು.
ಬಾಗಲಕೋಟೆ, ದಾವಣಗೆರೆ ದಕ್ಷಿಣ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ.
Key words: two constituencies, Win, BJP, BY Vijayendra
The post ಎರಡು ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು: ಯಾರೂ ತಡೆಯಲು ಸಾಧ್ಯವಿಲ್ಲ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




