ಬೆಂಗಳೂರು,ಮಾರ್ಚ್,20,2026 (www.justkannada.in): ಎಲ್ಲೆಂದರಲ್ಲಿ ಹಳೆ ವಾಹನಗಳನ್ನ ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಎಲ್ಲೆಂದರಲ್ಲಿ ಹಳೇ ವಾಹನಗಳನ್ನ ನಿಲ್ಲಿಸಿದರೂ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚು ಕಾಲ ಹಳೇ ವಾಹನಗಳನ್ನ ನಿಲ್ಲಿಸಿದ್ರೂ ಟೋಯಿಂಗ್ ಮಾಡುತ್ತೇವೆ ಎಂದರು.
ನಗರದ ರಸ್ತೆಗಳಲ್ಲಿ ಎಲ್ಲೆಲ್ಲಿ ಹಳೇ ವಾಹನಗಳನ್ನ ನಿಲ್ಲಿಸಿದ್ದಾರೋ ಅದನ್ನು ತುಂಬಿಕೊಂಡು ಹೋಗಿ ನಿರ್ದಿಷ್ಟ ಜಾಗದಲ್ಲಿ ಡಂಪ್ ಮಾಡುತ್ತೇವೆ. ಹಳೇ ವಾಹನ ಡಂಪ್ ಮಾಡಲು 4 ಸ್ಥಳ ನಿಗದಿ ಮಾಡಿದ್ದೇವೆ ಬೆಳ್ಳಹಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ ಗಿಡ್ಡೇನಹಳ್ಳಿಯಲ್ಲಿ ಗುರುತು ಮಾಡಿದ್ದೇವೆ ಎಂದರು.
Key words: Strict action, against, old vehicles, parked, DCM, DK Shivakumar
The post ಎಲ್ಲೆಂದರಲ್ಲಿ ಹಳೇ ವಾಹನಗಳನ್ನ ನಿಲ್ಲಿಸಿದ್ರೆ ಕಠಿಣ ಕ್ರಮ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




