ಮೈಸೂರು,ಜೂನ್,20,2025 (www.justkannada.in): ಸಚಿವ ಹೆಚ್ ಸಿ ಮಹದೇವಪ್ಪ ತಮ್ಮ ಚೇಲಾಗಳ ಮೂಲಕ ನಮ್ಮ ಮೇಲೆ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ. ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕುತ್ತೇವೆ. ನಾವು ನಿಮ್ಮ ಮೇಲೆ ಮತ್ತು ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಎಂದು ವಕೀಲ ಅರುಣ್ ಕುಮಾರ್ ಸವಾಲು ಹಾಕಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆ ಮತ್ತು ಒಳ ಮೀಸಲಾತಿ ಹೋರಾಟ ಸಮಿತಿಯಿಂದ ವಕೀಲ ಅರುಣ್ ಕುಮಾರ್, ಭಾಸ್ಕರ್ ಪ್ರಸಾದ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸುದ್ದಿಗೋಷ್ಠಿ ಮಾತನಾಡಿದ ವಕೀಲ ಅರುಣ್ ಕುಮಾರ್, ಒಳ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಬಂದು ಒಂದು ವರ್ಷ ಆಗಿದೆ. ಇತರೆ ರಾಜ್ಯಗಳು ಬೇಗ ಡಾಟಾ ಕಲೆಕ್ಟ್ ಮಾಡಿವೆ.ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಮಾದಿಗರ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಸಮುದಾಯದ ಮತ ಬ್ಯಾಂಕ್ ಪಡೆಯಲು ಪಿತೂರಿ ಮಾಡುತ್ತಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಡೋಂಗಿ ರಾಜಕಾರಣ ಅನುಸರಿಸುತ್ತಿದೆ. ಒಳ ಮೀಸಲಾತಿ ಕೊಡುವ ವೇಳೆ ಸಮೀಕ್ಷೆ ಅವಶ್ಯಕತೆ ಇಲ್ಲ. ಸರ್ಕಾರ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕೊಡುವ ನಿರ್ಧಾರ ಮಾಡಿಲ್ಲ. ಒಳ ಮೀಸಲಾತಿ ಕೊಡುವ ಮುನ್ನ ಸರ್ಕಾರಿ ಹುದ್ದೆ ಭರ್ತಿ ಮಾಡುವ ಹುನ್ನಾರ ಕಾಂಗ್ರೆಸ್ ನದ್ದು ಎಂದು ಕಿಡಿಕಾರಿದರು.
ಮಹದೇವಪ್ಪ ಏನು ದೊಡ್ಡ ವ್ಯಕ್ತಿ ಅಲ್ಲ. ನಮ್ಮ ಮೇಲೆ ಇನ್ನು ನೂರು ಕೇಸ್ ಹಾಕಲಿ. ಇಂತಹ ಎಷ್ಟೇ ಕೇಸ್ ಗಳನ್ನ ಹಾಕಿದರೂ ನಾವು ಹೆದರಲ್ಲ. ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗ ಮಹದೇವಪ್ಪ ತೀರ್ಥ ತೆಗೆದುಕೊಳ್ಳದೆ ಬಂದಿರಿ. ನಮ್ಮ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಆಗಿದೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ನಿಮ್ಮ ಮೇಲೂ ಕೇಸ್ ಹಾಕುತ್ತೇವೆ. ಗುಂಪು ಕಟ್ಟಿ ಎತ್ತಿ ಕಟ್ಟುವ ಕೆಲಸ ಮಾಡ್ತಿರೋದು ಮಹದೇವಪ್ಪ. ಮಹದೇವಪ್ಪನವರ ಮೇಲೆ ಹಾಕಿರುವ ಕೇಸ್ ಸ್ಟೇಟಸ್ ಬಗ್ಗೆ ಪೊಲೀಸ್ ಕಮಿಷನರ್ ನವರು ಮಾಹಿತಿ ನೀಡಬೇಕು ಎಂದು ವಕೀಲ ಅರುಣ್ ಕುಮಾರ್ ಆಗ್ರಹಿಸಿದರು.
ಹೆಚ್ ಸಿ ಮಹದೇವಪ್ಪ, ತಿಮ್ಮಯ್ಯ ಕಾಂಗ್ರೆಸ್ ಮಕ್ಕಳಾದ್ರೆ ನಮ್ಮ ಹೋರಾಟ ತಡೆಯಿರಿ- ಭಾಸ್ಕರ್ ಪ್ರಸಾದ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯ ಭಾಸ್ಕರ್ ಪ್ರಸಾದ್, ಒಳ ಮೀಸಲಾತಿ ಹಕ್ಕಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಹೆದರಿರುವ ಸರ್ಕಾರ ನಮ್ಮ ಸಮುದಾಯದವರನ್ನೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಎಂಎಲ್ ಸಿ ತಿಮ್ಮಯ್ಯ ಒಬ್ಬ ಪೇಮೆಂಟ್ ಗಿರಾಕಿ. ಇಂತಹವರು ನಮ್ಮ ಸಮುದಾಯದ ಕುಲಕಂಟಕರು ಎಂದು ವಾಗ್ದಾಳಿ ನಡೆಸಿದರು.
ಪೊಲೀಸ್ ನವರು ಕಾನೂನಿನ ಪ್ರಕಾರ ಕೆಲಸ ಮಾಡಿ. ಕಾಂಗ್ರೆಸ್ ಪೊಲೀಸ್ ನವರ ರೀತಿ ಕೆಲಸ ಮಾಡಬೇಡಿ. ಮಹದೇವಪ್ಪ, ತಿಮ್ಮಯ್ಯ ದೂರು ಕೊಟ್ರೆ ಕೇಸ್ ಹಾಕುತ್ತೀರಿ. ನಾವು ದೂರು ಕೊಟ್ರೆ ಪ್ರಕರಣ ದಾಖಲು ಮಾಡಲ್ಲ. ಹೆಚ್ ಸಿ ಮಹದೇವಪ್ಪ, ತಿಮ್ಮಯ್ಯ ನೀವು ಕಾಂಗ್ರೆಸ್ ನ ಮಕ್ಕಳಾದ್ರೆ ನಮ್ಮ ಹೋರಾಟ ತಡೆಯುವ ಕೆಲಸ ಮಾಡಿ. ಮುಂದಿನ ಚುನಾವಣೆಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Key words: Internal reservation, struggle, challenge, Minister, H.C. Mahadevappa
The post ಒಳಮೀಸಲಾತಿ ಹೋರಾಟ: ಸಚಿವ ಹೆಚ್.ಸಿ ಮಹದೇವಪ್ಪಗೆ ನೇರ ಸವಾಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




